ಬಿಸಿ ಬಿಸಿ ಸುದ್ದಿ

ವಿದ್ಯಾರ್ಥಿಗಳ ಶಾಪಿಂಗ್ ಗೆಂದೇ ಫ್ಲಿಪ್ ಕಾರ್ಟ್ ನಿಂದ `ಸ್ಟೂಡೆಂಟ್ಸ್ ಕ್ಲಬ್’ ಆರಂಭ

ಈ ಹೊಸ ವರ್ಚುವಲ್ ಸ್ಟೋರ್ ಫ್ರಂಟ್ 13-25 ವರ್ಷಗಳವರೆಗಿನ ಮಕ್ಕಳನ್ನು ಪರಿಶೀಲಿಸಲಿದೆ. ಈ ಮೂಲಕ ವಿದ್ಯಾರ್ಥಿಗಳು ಆ್ಯಪ್ ನಲ್ಲಿ ಉತ್ಪನ್ನಗಳು, ಬ್ರ್ಯಾಂಡ್ ಸದಸ್ಯತ್ವ ಮತ್ತು ಡೀಲ್ ಗಳಿಗೆ ಪ್ರವೇಶಿಸಬಹುದಾಗಿದೆ

ಫ್ಲಿಪ್ ಕಾರ್ಟ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಚರ್ಚೆಗಳು ಮತ್ತು ಅಧ್ಯಯನ ನಡೆಸಿದ ವೇಳೆಯಲ್ಲಿ ಇಂತಹ ಕಸ್ಟಮೈಸ್ಡ್ ಪ್ರೋಗ್ರಾಂ ಅಗತ್ಯತೆ ಇರುವುದು ದೃಢಪಟ್ಟಿದೆ.

ಬೆಂಗಳೂರು, ಮೇ 30, 2022: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್ ಇಂದು ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸುವುದು ಮತ್ತು ಅವರ ಶೈಕ್ಷಣಿಕ, ಅಥ್ಲೆಟಿಕ್, ಸಾಂಸ್ಕೃತಿಕ, ಸಾಮಾಜಿಕ ಮತ್ತು ಪಠ್ಯೇತರ ಆಸಕ್ತಿಗಳನ್ನು ಬೆಂಗಲಿಸುವ ನಿಟ್ಟಿನಲ್ಲಿ ಒಂದು ಉತ್ತಮವಾದ ಉಪಕ್ರಮವನ್ನು ಘೋಷಣೆ ಮಾಡಿದೆ.

ವಿದ್ಯಾರ್ಥಿಗಳ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು `ಫ್ಲಿಪ್ ಕಾರ್ಟ್ ಸ್ಟೂಡೆಂಟ್ಸ್ ಕ್ಲಬ್’ ಆ್ಯಪ್ ಅನ್ನು ವಿನ್ಯಾಸಗೊಳಿಸಿದೆ. ಇದು ವಿದ್ಯಾರ್ಥಿಗಳಿಗೆಂದೇ ವಿನ್ಯಾಸಗೊಂಡಿರುವ ವರ್ಚುವಲ್ ಸ್ಟೋರ್ ಆ್ಯಪ್ ಆಗಿದ್ದು, ಇದರಲ್ಲಿ ನೂರಾರು ಬ್ರ್ಯಾಂಡ್ ಗಳು, ಆಫರ್ ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶಾಪಿಂಗ್ ಅನುಭವವನ್ನು ವೃದ್ಧಿಸಲಿದೆ.

ಈ ಹೊಸ ಉಪಕ್ರಮವು ದೇಶಾದ್ಯಂತ ಇರುವ ಲಕ್ಷಾಂತರ ವಿದ್ಯಾರ್ಥಿಗಳನ್ನು ಹೊಸ ಹೊಸ ಬ್ರ್ಯಾಂಡ್ ಗಳು ಮತ್ತು ಸೇವೆಗಳ ಸನಿಹಕ್ಕೆ ತರುವ ಗುರಿಯನ್ನು ಹೊಂದಿದೆ. ಈ ಮೂಲಕ ಅವರ ಶಾಪಿಂಗ್ ಅನುಭವವನ್ನು ಸುಧಾರಣೆ ಮಾಡುತ್ತದೆ ಮತ್ತು ಅವರಿಗೆ ಉತ್ಪನ್ನಗಳು ಹಾಗೂ ಪ್ರಯೋಜನಗಳನ್ನು ಒನ್ ಸ್ಟಾಪ್ ಶಾಪ್ ಮೂಲಕ ಪ್ರವೇಶವನ್ನು ಒದಗಿಸುತ್ತದೆ. ಎಲೆಕ್ಟ್ರಾನಿಕ್ಸ್, ಫ್ಯಾಷನ್, ಮೊಬೈಲ್ ಗಳು, ಪೀಠೋಪಕರಣಗಳು, ಸ್ಟೇಷನರಿಗಳು, ಅಲಂಕಾರಿಕ ಉತ್ಪನ್ನಗಳು ಮತ್ತು ಸಣ್ಣ ಸಣ್ಣ ಸಾಧನಗಳನ್ನು ಅತ್ಯಂತ ಸುಲಭವಾಗಿ ಖರೀದಿಸುವ ಅವಕಾಶಗಳನ್ನು ಕಲ್ಪಿಸುತ್ತದೆ. ದೇಶಾದ್ಯಂತ ಇರುವ ಮಾರಾಟಗಾರರು ಈ ಪ್ಲಾಟ್ ಫಾರ್ಮ್ ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ.

ಮೆಟ್ರೋಗಳು, 2 ನೇ ಶ್ರೇಣಿಯ ಪಟ್ಟಣಗಳು ಸೇರಿದಂತೆ ಹಲವಾರು ನಗರಗಳಲ್ಲಿನ ವಿವಿಧ ವಯೋಮಾನದ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಫ್ಲಿಪ್ ಕಾರ್ಟ್ ಸಂಪರ್ಕ ಹೊಂದಿದೆ. ಇತ್ತೀಚಿನ ಸಾಫ್ಟ್ ವೇರ್, ಒಟಿಟಿ ಚಂದಾದಾರಿಕೆಗಳು, ಎಡ್ ಟೆಕ್ ಕೋರ್ಸ್ ಗಳು ಮತ್ತು ಪ್ರೀಮಿಯಂ ಬ್ರ್ಯಾಂಡ್ ಗಳ ಕೈಗೆಟುಕುವಿಕೆ ಸೇರಿದಂತೆ ಸೇವೆಗಳಿಗೆ ಪ್ರವೇಶವು ಪ್ರಮುಖ ಆಸಕ್ತಿಯನ್ನು ಹೊಂದಿದೆ ಎಂದು ಒಳನೋಟಗಳು ಬಹಿರಂಗಪಡಿಸಿವೆ. ಈ ಚರ್ಚೆಗಳಿಂದ ಈ ಒಳನೋಟಗಳನ್ನು ಗಮನದಲ್ಲಿಟ್ಟುಕೊಂಡು ಫ್ಲಿಪ್ ಕಾರ್ಟ್ ಸ್ಟೂಡೆಂಟ್ಸ್ ಕ್ಲಬ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ.

ಪ್ರಸ್ತುತ ಫ್ಲಿಪ್ ಕಾರ್ಟ್ ನಲ್ಲಿನ ಗ್ರಾಹಕರು ಶಾಪಿಂಗ್ ಮಾಡುತ್ತಿರುವ ಉತ್ಪನ್ನಗಳ ಪೈಕಿ ಶೇ.20 ರಷ್ಟು ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದ ಉತ್ಪನ್ನಗಳು ಸೇರಿವೆ. ವಿಶೇಷವಾಗಿ ದೇಶದ ನಗರ ಮತ್ತು ಪಟ್ಟಣಗಳ ವಿದ್ಯಾರ್ಥಿಗಳು ಈ ಉತ್ಪನ್ನಗಳ ಖರೀದಿಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.

ಇವರು ಗ್ರಾಹಕರ ಬೆಳೆಯುತ್ತಿರುವ ನೆಲೆಯನ್ನು ರೂಪಿಸುತ್ತಾರೆ. ಎಲ್ಲಾ ಇ-ಕಾಮರ್ಸ್ ಶಾಪಿಂಗ್ ನಲ್ಲಿ ಇವರು ಶೇ.32 ರಷ್ಟಿದ್ದಾರೆ. ಫ್ಲಿಪ್ ಕಾರ್ಟ್ ಸ್ಟೂಡೆಂಟ್ಸ್ ಕ್ಲಬ್ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ವಿಶೇಷವಾಗಿ ಆ್ಯಪಲ್, ಸ್ಯಾಮ್ಸಂಗ್, ಡೆಲ್, ಲೆನೋವಾ, ಶಯೋಮಿ, ಪೂಮ, ಲೆವಿಸ್, ಯುನೈಟೆಡ್ ಕಲರ್ಸ್ ಆಫ್ ಬೆನೆಟನ್, ಅಡಿಡಾಸ್, ಸ್ಕೆಚರ್ಸ್, ಲ್ಯಾಕ್ಮೆ, ಮೇಬೆಲೈನ್, ನಿವಿಯಾ ಮತ್ತು ಯೋನೆಕ್ಸ್ ಸೇರಿದಂತೆ ಇನ್ನಿತರೆ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಇದಲ್ಲದೇ, ಆಡಿಯೋ ಸಾಧನಗಳು, ಲ್ಯಾಪ್ ಟಾಪ್ ಗಳು, ಮೊಬೈಲ್ ಗಳು, ಪಾದರಕ್ಷೆಗಳು, ಉಡುಪುಗಳು, ನೋಟ್ ಬುಕ್, ನೀರಿನ ಬಾಟಲಿಗಳು, ಸನ್ ಸ್ಕ್ರೀನ್, ಯೋಗ ಮ್ಯಾಟ್ ಗಳು ಮತ್ತು ಇನ್ನೂ ಅನೇಕ ಹೆಚ್ಚಿನ ಉತ್ಪನ್ನಗಳನ್ನೂ ಸಹ ಖರೀದಿಸಬಹುದು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಫ್ಲಿಪ್ ಕಾರ್ಟ್ ನ ಗ್ರೋತ್ ಅಂಡ್ ಮಾನಿಟೈಸೇಶನ್ ವಿಭಾಗದ ಸೀನಿಯರ್ ಉಪಾಧ್ಯಕ್ಷ ಪ್ರಕಾಶ್ ಸಿಕಾರಿಯಾ ಅವರು, “ಫ್ಲಿಪ್ ಕಾರ್ಟ್ ನಲ್ಲಿ ನಾವು ನಮ್ಮ ಗ್ರಾಹಕರಿಗೆ ನಿರಂತರವಾಗಿ ಹೊಸತನವನ್ನು ನೀಡುತ್ತಾ ಬಂದಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ತಂತ್ರಜ್ಞಾನ ಶಕ್ತಗೊಂಡ ಪರಿಹಾರಗಳನ್ನು ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಶಾಪಿಂಗ್ ಒಲವು, ಅವರು ನಮ್ಮ ಪ್ಲಾಟ್ ಫಾರ್ಮ್ ಗೆ ತರುವ ನಿಟ್ಟಿನಲ್ಲಿ ನಾವು ಗ್ರಾಹಕ ಸ್ನೇಹಿ ಉಪಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ.

ಈ ಸ್ಟೂಡೆಂಟ್ಸ್ ಕ್ಲಬ್ ಕಾರ್ಯಕ್ರಮದೊಂದಿಗೆ ಅವರ ಸೂಕ್ಷ್ಮವಾದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರತ್ಯೇಕವಾದ ವಿದ್ಯಾರ್ಥಿ ಕೇಂದ್ರಿತ ಪ್ಲಾಟ್ ಫಾರ್ಮ್ ಅನ್ನು ರಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕೈಗೆಟುಕುವ ರೀತಿಯಲ್ಲಿ ಬ್ರ್ಯಾಂಡ್ ಗಳು ಮತ್ತು ಉತ್ಪನ್ನಗಳನ್ನು ಪ್ರವೇಶಿಸುವಂತೆ ಮಾಡಲು ನಾವು ಇದನ್ನು ಒಂದು ಅವಕಾಶವಾಗಿ ನೋಡುತ್ತೇವೆ. ನಾವು ಪ್ರತಿದಿನ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರ ಶಾಪಿಂಗ್ ಪ್ರಯಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತೇವೆ ಎಂದು ನಾವು ಭಾವಿಸುತ್ತೇವೆ’’ ಎಂದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

19 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

19 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

19 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago