ಜೇವರ್ಗಿ: ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತ ದೇಶದಲ್ಲಿ ಮೂಲಭೂತವಾದಿ ಹಾಗೂ ಕೋಮುವಾದಿ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ತಲೆಯೆತ್ತುವ ಮೂಲಕ ರಾಷ್ಟ್ರದ ಐಕ್ಯತೆಗೆ ಭಂಗ ತಂದಿವೆ ಎಂದು ತಾಲೂಕ ಭೀಮ ಅರ್ಮಿ ಆರೋಪಿಸಿದೆ.
ಜನರ ಮಧ್ಯೆ ಮನೆಗಳು ಹಾಗೂ ಮನಸ್ಸುಗಳ ಮಧ್ಯೆ ದ್ವೇಷ, ಹಿಂಸೆ, ಅಸೂಯೆ, ಅಪನಂಬಿಕೆಗಳನ್ನು ಹುಟ್ಟುಹಾಕಿ ಈ ಮೂಲಕ ರಾಜಕಾರಣ, ಆಡಳಿತ ,ಶಿಕ್ಷಣ ,ಸಿನಿಮಾ, ಸಂಗೀತ ,ಪೊಲೀಸ್ ಇಲಾಖೆ ಸೇರಿದಂತೆ ಪವಿತ್ರವಾದ ಶಿಕ್ಷಣದಲ್ಲಿಯೂ ಪಟ್ಟಭದ್ರ ಹಿತಾಸಕ್ತಿಗಳು ಪ್ರವೇಶ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ನಡೆಸುತ್ತಿರುವ ಸರಕಾರವು ಸಂವಿಧಾನದ ಆಶಯಗಳನ್ನು ಗಾಳಿಗೆ ತೋರಿದೆ, ಧರ್ಮನಿರಪೇಕ್ಷತೆ ಭಾವನೆಯನ್ನು ಹುಟ್ಟುಹಾಕದೆ ಧರ್ಮಾಂಧತೆಯನ್ನು ಬೆಳೆಸುತ್ತಿವೆ. ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ. ಇದನ್ನು ಖಂಡಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ ಇದು ಅತ್ಯಂತ ಅಗತ್ಯ ಹಾಗೂ ಅನಿವಾರ್ಯ ವಾಗಿದೆ.
ಜೇವರ್ಗಿ ಪಟ್ಟಣದಲ್ಲಿ ಇದೇ ಜೂನ್ 7ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನದಿಂದ ಮಿನಿವಿಧಾನಸೌಧದ ವರೆಗೂ ಭೀಮಾರ್ಮಿ ಜೇವರ್ಗಿ ತಾಲೂಕ ಸಂಘಟನೆಯಿಂದ ಸೌಹಾರ್ದ ಸಮಾಜಕ್ಕಾಗಿ ಸಂವಿಧಾನದ ರಕ್ಷಣೆಗಾಗಿ ನಮ್ಮ ನಡೆ ಎನ್ನುವ ಘೋಷಣೆಯೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಮಸ್ತ ತಾಲೂಕಿನ ಪ್ರಗತಿಪರ ಚಿಂತಕರು ವಿವಿಧ ಸಂಘಟನೆ ಮುಖಂಡರು ಪ್ರಜ್ಞಾವಂತ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಭೀಮಾರ್ಮಿ ತಾಲೂಕ ಸಮಿತಿ ಕೋರಿದೆ.
ರಾಷ್ಟ್ರೀಯ ಸಂಘಟನೆಯ ಸಚಿವರಾದ ಯಶ್ಪಾಲ್ ಬೋರೆ, ರಾಜ್ಯ ಅಧ್ಯಕ್ಷರಾದ ಮತಿನ್ ಕುಮಾರ್ ಸೇರಿದಂತೆ ಜಿಲ್ಲಾಧ್ಯಕ್ಷರಾದ ಸೂರ್ಯಕಾಂತ್ ಜಿಡಗಾ, ಜಿಲ್ಲಾ ಉಪಾಧ್ಯಕ್ಷರಾದ ಮಹಮ್ಮದ್ ಹನೀಫ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಬಂಗರಗಿ ಸೇರಿದಂತೆ ಸಂಘಟನಾ ಕಾರ್ಯದರ್ಶಿ ಗುಂಡಪ್ಪ ಮಾಳಗೆ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಎಂದು ಪತ್ರಿಕಾ ಪ್ರಕಟಣೆ ಮೂಲಕ ಭೀಮ ಅರ್ಮಿ ತಾಲೂಕು ಸಮಿತಿ ಜೇವರ್ಗಿ ಅಧ್ಯಕ್ಷರಾದ ಸುಭಾಷ್ ಎಸ್,ಆಲೂರು. ಗೌರವಾಧ್ಯಕ್ಷರಾದ ಅಬ್ದುಲ್ ಗನಿ. ಉಪಾಧ್ಯಕ್ಷರಾದ ವಿಶ್ವರಾಧ್ಯ ಗೋಪಾಲಕರ, ಪ್ರಧಾನ ಕಾರ್ಯದರ್ಶಿ ಕಿರಣ ಗುಡೂರ್, ಸಂಘಟನಾ ಕಾರ್ಯದರ್ಶಿ ಶಿವಲಿಂಗ ಬಣಮಿ, ಖಜಾಂಚಿ ಗಳಾದ ಬಾಬು ನಾಟಿಕಾರ್ ,ಮುಖಂಡರಾದ ಧರ್ಮಣ್ಣ ಎನ್ ಖರ್ಗೆ, ಅಂದೋಲನ ವಲಯ ಅಧ್ಯಕ್ಷರಾದ ಭೀಮು ಕಟ್ಟಿಮನಿ ಚನ್ನೂರು ಗ್ರಾಮ ಘಟಕದ ಅಧ್ಯಕ್ಷರಾದ ರಾಜು ಗುತ್ತೇದಾರ್ ತಿಳಿಸಿದ್ದಾರೆ.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…