ಚಿತ್ತಾಪುರ : ತಾಲೂಕಿನ ಜಮೀನು, ರಸ್ತೆ, ಕುಡಿಯುವ ನೀರು, ಆರೋಗ್ಯ, ಕೃಷಿ ರಸಗೊಬ್ಬರ, ಪಡಿತರ ಚೀಟಿ, ಬಸ್ ವ್ಯವಸ್ಥೆ, ಪಹಣಿ ತಿದ್ದುಪಡಿ ಸೇರಿದಂತೆ ಸಾರ್ವಜನಿಕರ ಅನೇಕ ಸಮಸ್ಯೆಗಳು ಆಲಿಸಿದ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಸ್ಥಳದಲ್ಲೆ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಿ, ಇನ್ನೂ ಕೆಲವು ಸಮಸ್ಯೆಗಳಿ ೧೫ ದಿವಸದಲ್ಲಿ ಪರಿಹಾರ ಕಲ್ಪಿಸುವಂತೆ ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ೨೬ ಅರ್ಜಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಪಡಿತರ ಚೀಟಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸ್ಥಳದಲ್ಲೇ ನೀಡುವ ವ್ಯವಸ್ಥೆ ಕಲ್ಪಿಸಿದರು.
ಇದನ್ನೂ ಓದಿ: ಚಿತ್ತಾಪುರ ಪತ್ರಕರ್ತ ಸಂಘಕ್ಕೆ ಸಿದ್ದರಾಜ ಮಲ್ಕಂಡಿ ಸಾರಥ್ಯ
ಕೆ. ಚಿತ್ತಾಪುರ, ಕೆ.ನಾಗಾಂವ ಸೀಮೆಯಲ್ಲಿ ಬರುವ ಶ್ರೀ ಸಿಮೆಂಟ್ ಕಂಪನಿ ಅವರು ಅವೈಜ್ಞಾನಿಕವಾಗಿ ರೈತರಿಗೆ ಆನಾನುಕೂಲ ಆಗುವಂತೆ ರಸ್ತೆಗಳು, ರೈಲ್ವೇ ಪ್ಲಾಟ್ ಫಾರಂಗಳು ಮಾಡಿದ್ದು ಅನೇಕ ಹೊಲಗಳಿಗೆ ನೀರು ಹರಿದು ಅಪಾರ ಪ್ರಮಾಣದಲ್ಲಿ ೨ ವರ್ಷಗಳಿಂದ ರೈತರ ಬೆಳೆ ನಾಶವಾಗುತ್ತಿದೆ ಎಂದು ಪುರಸಭೆ ಸದಸ್ಯ ರಮೇಶ ಬೊಮ್ಮನಳ್ಳಿ ದೂರು ನೀಡಿದ್ದರಿಂದ ಕೂಡಲೇ ಕಂಪನಿಯ ಅಧಿಕಾರಿಗಳನ್ನು ಕರೆಸಿ ಇದೇ ತಿಂಗಳು ೨೦ ರವರೆಗೆ ಸಮಸ್ಯೆ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ವೀರಣ್ಣ ಸುಲ್ತಾನಪುರರವರ ಜಮೀನಿನಲ್ಲಿ ಜೆಸ್ಮಾಂನವರು ವಿದ್ಯುತ್ ಕಂಬಗಳು ಹಾಕಿದ್ದಾರೆ ಇದುವರೆಗೆ ಪರಿಹಾರ ನೀಡಿಲ್ಲವೆಂಬ ದೂರಿಗೆ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದನ್ನೂ ಓದಿ: ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಬ್ರೈನ್ ಟ್ಯೂಮರ್ ಚಿಕಿತ್ಸೆ ನೀಡಿದ ಯುನೈಟೆಡ್ ಆಸ್ಪತ್ರೆ
ಸಾತನೂರ, ದಂಡಗುಂಡ, ಸಂಕನೂರ, ರಾಂಪುರಹಳ್ಳಿ, ಕಡಬೂರ, ರಾಜೋಳ್ಳಿ, ಅಲ್ಲೂರ್ (ಕೆ, ಬಿ) ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕೆಲ ಸಾರ್ವಜನಿಕರ ಜಮೀನುಗಳು ಉಪನೊಂದಣಾಧಿಕಾರಿ ಕಚೇರಿಗಳ ಕಂಪ್ಯೂಟರಗಳಲ್ಲಿ ಸರ್ಕಾರಿ ಜಮೀನು ತೋರಿಸುತ್ತಿದೆ. ಇದರಿಂದ ರೈತರಿಗೆ ಅನೇಕ ಸರ್ಕಾರದ ಸಿಗುವ ಸೌಲಭ್ಯಗಳು, ಮಾರಾಟ, ಖರೀದಿಗಾಗಿ ತೊಂದರೆಯಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ನೀಡಿದ ದೂರಿಗೆ, ಸಂಬಂಧಪಟ್ಟ ಗ್ರಾಮ ಲೇಖಪಾಲಕ, ಉಪನೊಂದಣಾಧಿಕಾರಿಗೆ ಸ್ಥಳಕ್ಕೆ ಕರೆಸಿ ೧೫ ದಿನದೊಳಗೆ ಸರಿಪಡಿಸುವಂತೆ ಸೂಚನೆ ನೀಡಿದರು.
ಕನಗನಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಬೌದ್ಧವಿವಹಾರದಲ್ಲಿ ಗೈಡ್ ನೇಮಕ ಮಾಡಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾಡಿದ ಮನವಿಗೆ, ಜಿಲ್ಲಾಧಿಕಾರಿಗಳು ಮಾತನಾಡಿ ಬೌದ್ದ ವಿಹಾರ ವಿಶ್ವ ದರ್ಜೆಗೆ ಏರಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಈಗಾಗಲೇ ಮುಂಗಾರು ಬಿತ್ತನೆ ಕಾರ್ಯ ಕೆಲವೇ ದಿನಗಳಲ್ಲಿ ಆರಂಭವಾಗುತ್ತಿದ್ದು, ರಸಗೊಬ್ಬರ ಕೊರತೆ ಆಗದಂತೆ ೪೫೦ ಟನ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ನಂತರ ತಾಲೂಕು ಮಟ್ಡದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಜಿಲ್ಲಾಧಿಖಾರಿ ಯಶವಂತ ವಿ ಗುರುಕರ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳ ಸಂಪರ್ಕ ಮಾಡಿ ಸಮಸ್ಯೆಗಳು ಕೂಡಲೇ ಪರಿಹಾರ ಮಾಡಿಕೊಳ್ಳಬೇಕು. ಸಾರ್ವಜನಿಕರ ಸಣ್ಣ ಪುಟ್ಟ ಸಮಸ್ಯೆಗಳನ್ನು ವಿಳಂಬ ಮಾಡದೇ ಕೂಡಲೇ ಪರಿಹಾರ ಮಾಡಬೇಕು.
ಸರ್ಕಾರ ಜಿಲ್ಲಾಧಿಕಾರಿ ಪ್ರತಿ ಮಂಗಳವಾರದಂದು ಜಿಲ್ಲಾ ವ್ಯಾಪ್ತಿಯ ತಾಲೂಕು ಕಚೇರಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ತಾಲೂಕು ಕಚೇರಿ ಸಾಮಾನ್ಯವಾಗಿದೆ ೮೦ ರಿಂದ ೧೨೦ ಕಿ.ಮಿ. ಅಂತರವಿದ್ದು, ವಿಶೇಷವಾಗಿ ಮಹಿಳೆಯರು, ವೃದ್ಧರು, ವಿಕಲಚೇತನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಜಿಲ್ಲಾ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಲು ಖುದ್ದು ಜಿಲ್ಲಾಧಿಕಾರಿಗಳೇ ಪ್ರತಿ ಮಂಗಳವಾರ ತಾಲೂಕು ಕಚೇರಿಗೆ ಭೇಟಿ ನೀಡಲು ಆದೇಶಿಸಿದೆ.
ತಹಸೀಲ್ ಕಚೇರಿಯಲ್ಲಿ ಎಲ್ಲ ಕೋಣೆಗಳತ್ತ ಸ್ವಚ್ಛತೆ ಮತ್ತು ಕಾರ್ಯವೈಖರಿಯನ್ನು ವೀಕ್ಷಣೆ ಮಾಡಿದರು. ತಹಸೀಲ್ದಾರ್ ಉಮಾಕಾಂತ ಹಳ್ಳೆ, ಭೂಪಾನ ಇಲಾಖೆ ಜಿಲ್ಲಾ ನಿರ್ಧೇಶಕರು ಶಂಕರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…