ಶಹಾಬಾದ:ಜನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ವಿವಿಧ ಗ್ರಾಮಗಳ ಯುವಕರನ್ನು ಒಂದೆಡೆ ಸೇರಿಸಿ ಗ್ರಾಮೀಣ ಕ್ರೀಡೆಗಳನ್ನು ಆಡಿಸಿದ ಪರಿ ಮಾತ್ರ ಗ್ರಾಮದ ಜನರಲ್ಲಿ ಹುಬ್ಬೇರಿಸುವಂತೆ ಮಾಡಿತು.
ನಗರದ ಎಐಡಿವಾಯ್‌ಓ ಸಮಿತಿ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕ್ರೀಡಾಕೂಟ ರೋಮಾಂಚನದಿಂದ ಕೂಡಿತ್ತು.ಹೊನಗುಂಟಾ ಗ್ರಾಮದಲ್ಲಿ ಆಯೋಜಿಸಿದ ಕ್ರೀಡಾಕೂಟದಲ್ಲಿ .ಸುಮಾರು ಎರಡು ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತೋರಿದ ಪ್ರದರ್ಶನ ಮಾತ್ರ ಜನಮನ ಸೆಳೆಯಿತು.
ಇದನ್ನೂ ಓದಿ: ವೃತಿ ಶಿಕ್ಷಣ ಇಲಾಖೇಯ ಸಿಬ್ಬಂದಿ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮನವಿ
ಹೊನಗುಂಟಾ, ತೊನಸನಹಳ್ಳಿ(ಎಸ್), ವಡ್ಡರವಾಡಿ, ಯನಗುಂಟಿ ಹಾಗೂ ಶಹಾಬಾದನಿಂದ ಆಗಮಿಸಿದ ಸ್ಪರ್ಧಿಗಳು ಹಗ್ಗ ಜಗ್ಗಾಟ, ಕಬ್ಬಡಿ, ಗುಂಡು ಎತ್ತುವುದು, ಗೋಣಿ ಚೀಲ ಓಟ, ಸ್ಲೋ ಬೈಕ್ ರೇಸ್, ಆಟಗಳಲ್ಲಿ ಭಾಗವಹಿಸಿ ತಮ್ಮ ತಮ್ಮ ಉತ್ಸಾಹ ತೋರಿದರು. ಕಬ್ಬಡಿ ಬಹಳ ರೋಮಾಂಚನಕಾರಿಯಾಗಿ ಆಡಿದರೆ, ಸಾಹಸ ಕ್ರೀಡೆ ಗುಂಡು ಎತ್ತುವುದು ರೋಮಾಂಚನಕಾರಿಯಾಗಿತ್ತು. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿದ ಗೋಣಿ ಚೀಲದ ಓಟ, ಶಕ್ತಿ ಪ್ರದರ್ಶನವಾದ ಕ್ರೀಡೆಯಾದ ಹಗ್ಗಾ ಜಗ್ಗಾಟ, ಗ್ರಾಮೀಣ ಕ್ರೀಡೆಗಳು ನೋಡಿ ಜನರ ಮುಖದಲ್ಲಿ ನಗುವಿನ ಮಂದಾಹಾಸ, ಮಾನಸಿಕ ನೆಮ್ಮದಿ ಉಕ್ಕಿ ಹರಿಯಿತು.
ಎ.ಐ.ಡಿ.ವೈ.ಓ ರಾಜ್ಯ ಉಪಾಧ್ಯಾಕ್ಷರಾದ ಕೃಷ್ಣ ಮಾತನಾಡಿ, ಜನಪದ ಸಂಸ್ಕೃತಿಯೇ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳಿಗೆ, ಯುವಕರಿಗೆ ತಿಳಿಸುವ ಅಗತ್ಯತೆಯಿದೆ.ಕಾರಣ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ಹೆಚ್ಚುತ್ತಲೇ ಇರುವುದರಿಂದಾಗಿ ಗ್ರಾಮೀಣ ಕ್ರೀಡೆಗಳತ್ತ ಆಸಕ್ತಿ ಕಡಿಮೆಯಾಗುತ್ತಿದೆ.ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ.
ಇದನ್ನೂ ಓದಿ: ಸಾರ್ವಜನಿಕರ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಬುದ್ಧಿಶಕ್ತಿಯನ್ನು ಹಾಗೂ ಸಹಭಾಳ್ವೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.ಅಲ್ಲದೇಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಇಂಥ ಕ್ರೀಡಾಕೂಟಗಳು ನೆರವಾಗುತ್ತವೆ ಎಂದರು. ಮುಖ್ಯ ಅತಿಥಿಗಳಾಗಿ ಎಸ್.ಯು.ಸಿ.ಐ ಕಮ್ಯೂನಿಷ್ಟ ಪಕ್ಷದ ಕಾರ್ಯದರ್ಶಿ ಗಣಪತ್‌ರಾವ ಕೆ. ಮಾನೆ, ಎ.ಐ.ಡಿ.ವೈ.ಓ ನ ಜಿಲ್ಲಾ ಅಧ್ಯಕ್ಷ ಜಗನ್ನಾಥ.ಎಸ್.ಹೆಚ್ ಮಾತನಾಡಿದರು.
ಅತಿಥಿಗಳಾಗಿ ಗಣ್ಯವ್ಯಕ್ತಿಗಳಾದ ಭೀಮಾಶಂಕರ ಖೇಣಿ, ದೇವೇಂದ್ರ ಕಾರೋಳಿ, ಜೈಭೀಮ ಹಾಗೂ ಎ.ಐ.ಡಿ.ವೈ.ಓ ಜಿಲ್ಲಾ ಉಪಾಧ್ಯಕ್ಷ ಸಿದ್ದು ಚೌಧರಿ, ಸೆಕ್ರೇಟಿರಿಯಟ ಸದಸ್ಯರಾದ ಈಶ್ವರ ಇ.ಕೆ, ಗೌತಮ್ಮ ಪರತುರಕರ್, ದೈಹಿಕ ಶಿಕ್ಷಕರಾದ ಸಿದ್ದಲಿಂಗ ಬುಳ್ಳಾ, ಹಣಮಂತರಾಯ ಬಿರಾದರ, ಮಸೂದ್ ಸಾಳೊಂಕಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಚಿತ್ತಾಪುರ ಪತ್ರಕರ್ತ ಸಂಘಕ್ಕೆ ಸಿದ್ದರಾಜ ಮಲ್ಕಂಡಿ ಸಾರಥ್ಯ
ಕಾರ್ಯಕ್ರಮದಲ್ಲಿ ಚಂದ್ರು ಮರಗೋಳ, ಶಂಕರ ಭಜಂತ್ರಿ, ದೇವರಾಜ ರಾಜೋಳ, ಲಕ್ಷಣ ಕಾರವಾಳ, ದೀಪಣ್ಣ, ಶ್ರೀಶೈಲ್, ಮೌನೇಶ, ರಘು ಮನೆ, ಡಾ|| ವರುಣ ರಾಜೇಂದ್ರ ಅತನೂರ, ಹಣಮಂತ ಟೈಗರ್, ಶಹಾಬಾದ ಸ್ಥಳೀಯ ಎ.ಐ.ಡಿ.ವೈ.ಓ ಅಧ್ಯಕ್ಷರಾದ ರಘು ಪವಾರ ರವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಹಾಬಾದ ಸ್ಥಳೀಯ ಕಾರ್ಯದರ್ಶಿಗಳಾದ ರಮೇಶ ದೇವಕರ ರವರು ನಡೆಸಿ ಕೊಟ್ಟರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…