ಬಿಸಿ ಬಿಸಿ ಸುದ್ದಿ

ಮನು ಪ್ರಣೀತ ಸಮಾಜ ಹೆಣ್ಣನ್ನು ಕೀಳಾಗಿ ಕಾಣುತ್ತಿದೆ !

ಶಹಾಪುರ: ಮನುಸ್ಮೃತಿಯ ಎಳೆಯನ್ನು ಹಿಡಿದುಕೊಂಡು ಹೊರಟ ಗಂಡು ಪ್ರಧಾನವಾದ ಸಮಾಜ ತನ್ನ ಮೂಗಿನ ನೇರಕ್ಕೆ ಆಲೋಚಿಸಿ ಸಮಾಜದಲ್ಲಿ ಕಟ್ಟುಪಾಡುಗಳನ್ನು ರೂಪಿಸಿಕೊಂಡು ಹೊರಟಿದೆ. ಇದರಿಂದ ಸಹಜವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಇಂದಿಗೂ ಇಲ್ಲ ಎಂದು ಕಾವ್ಯಶ್ರೀ ಮಹಾಗಾಂವಕರ್ ವಿಷಾದ ವ್ಯಕ್ತ ಪಡಿಸಿದರು.

ನಗರದ ಬಸವಮಾರ್ಗ ಪ್ರತಿಷ್ಠಾನ ಏರ್ಪಡಿಸಿದ್ದ ತಿಂಗಳ ಬಸವ ಬೆಳಕು-೮೬ ರ ಸಭೆಯಲ್ಲಿ ಶಿವಶರಣರದ ದೃಷ್ಟಿಯಲ್ಲಿ ಮಹಿಳೆ ಎಂಬ ವಿಷಯ ಕುರಿತು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಶರಣರು ಹೆಣ್ಣು ಗಂಡುಗಳು ಭಿನ್ನ ಭಿನ್ನ ಅಲ್ಲವೆ ಅಲ್ಲ ಎಂದು ಪ್ರತಿಪಾದಿಸಿದರು. ಜನನ ಕೊಡುವವಳು, ಹೆಂಡತಿಯಾಗಿ ಪ್ರೀತಿಸುವವಳು, ಮುದ್ದು ಮಾಡುವಂತೆ ನಮ್ಮನ್ನು ಪ್ರೇರೇಪಿಸುವವಳು ಹೆಣ್ಣು. ಆದ್ದರಿಂದ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ ಆಕೆ ಸಾಕ್ಷಾತ್ ದೇವಸ್ವರೂಪಿ ಎಂದು ತಿಳಿಸಿದರು.

ಬಸವಣ್ಣನವರು ಹಾಗೂ ನೀಲಾಂಬಿಕೆ ತಾಯಿ ಇಬ್ಬರು ಪರಸ್ಪರ ಒಬ್ಬರಿಗೊಬ್ಬರು ಕೂಸಾಗಿ ಬದುಕಿರುವುದು ಅತ್ಯಂತ ಸೂಜಿಗದ ಸಂಗತಿ. ಹೆಣ್ಣು ತನ್ನನ್ನು ತಾನು ಕೀಳೆಂದು ಭಾವಿಸದೆ ಧೈರ್ಯವಾಗಿ ಸಮಾಜದಲ್ಲಿ ಮುಂದೆ ಬರಬೇಕು. ಶರಣೆಯರ ಜೀವನದ ಕಥಾನಕಗಳು ನಮಗೆಲ್ಲ ಪ್ರೇರಣೆಯಾಗಿಟ್ಟುಕೊಂಡು ದಿಟ್ಟವಾಗಿ ಜೀವನ ರೂಪಿಸಿಕೊಳ್ಳಬೇಕು. ನಾವು ನಡೆಯುವ ದಾರಿ ಸರಿಯಾದುದಾಗಿರುವಾಗ ಯಾರಿಗೂ ಹೆದರುವ ಕಾರಣವೇ ಇಲ್ಲ. ಹಿಂದಿನಂತೆ ಪರದಾಜೀವನ ರೂಪಿಸಿದರೆ ನಮಗೆ ನಾವೇ ಗುಲಾಮಗಿರಿಗೆ ತಳ್ಳಿಸಿಕೊಂಡಂತೆ ಆಗುತ್ತದೆ ಎಂದವರು ವಿವರಿಸಿದರು.
ಇಪ್ಪತ್ತೊಂದನೆಯ ಶತಮಾನದ ಇಂದಿನ ದಿನಗಳಲ್ಲೂ ಬಸವಾದಿ ಶರಣರ ವಚನಗಳು ದಾರಿ ದೀಪವಾಗಿವೆ. ವಚನದ ಬೆಳಕಿನ ಪಂಜು ಹಿಡಿದು ಹೊರಟರೆ ನಮ್ಮ ಸುತ್ತ ಮುತ್ತ ಹಾಗೂ ನಮ್ಮೊಳಗೆ ಮೂಡಿದ್ದ ಕತ್ತಲು ತಂತಾನೆ ಹರಿದು ಹೋಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಅಣ್ಣ ಲಿಂಗಣ್ಣ ಸತ್ಯಂಪೇಟೆ, ಅವ್ವ ಶಿವಮ್ಮ, ಅಪ್ಪ ಗುರಪ್ಪ ಸಮಾಜಕ್ಕಾಗಿ ತಮ್ಮ ಜೀವವನ್ನು ತೇದು ಹೋದವರು. ನಮ್ಮ ಕುಟುಂಬವೆಲ್ಲ ಸಮಾಜಕ್ಕಾಗಿ ಸಮರ್ಪಿಸಿಕೊಂಡು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಬಸವಾದಿ ಶರಣರ ದಾರಿಯೆ ನಮಗೆಲ್ಲ ಪ್ರೇರಣೆ. ಕುಟುಂಬದ ಎಲ್ಲರಲ್ಲೂ ಸಾಕು ಎಂಬ ಸಿರಿವಂತಿಕೆ ಇದೆ. ಎಲ್ಲರನ್ನೂ ತಬ್ಬಿಕೊಳ್ಳುವ ಮನಸ್ಸು ಇದೆ. ಶರಣರ ಚಿಂತನೆಗಳನ್ನು ಹೊತ್ತುಕೊಂಡು ಹೋಗುವ ಉತ್ಸಾಹ ನಮ್ಮ ಮನೆಯ ಮುಂದಿನ ಪೀಳಿಗೆಗೆ ಇದೆಯಾದ್ದರಿಂದ ನಾವೆಲ್ಲ ನೆಮ್ಮದಿಯ ಜೀವನ ನಡೆಸಿದ್ದೇವೆ ಎಂದು ಪ್ರಾಸ್ತಾವಿಕವಾಗಿ ನಿವೃತ್ತ ಆಹಾರ ನಿರೀಕ್ಷಕ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.

ಹಳ್ಳಿಗಳನ್ನು ನಿರ್ಲಕ್ಷಿಸಿ ಪಟ್ಟಣಿಗರು ನೆಮ್ಮದಿಯಾಗಿರಲು ಸಾಧ್ಯವೆ ಇಲ್ಲ. ನಮ್ಮ ಭಾರತ ಹಳ್ಳಿಗಳ ಕೃಷಿ ಪ್ರಧಾನವಾಗಿರುವ ನಾಡು. ಜಗತ್ತಿಗೆ ಅನ್ನ ನೀಡುವವನು ರೈತ. ರೈತನನ್ನು ಕಡೆಗಣಿಸಿ ಪ್ರಗತಿ ಹೊಂದುತ್ತಿದ್ದೇವೆ ಎಂದು ಭ್ರಮಿಸುವುದು ಮೂರ್ಖತನ. ರೈತ ನಮ್ಮೆಲ್ಲರ ಉಸಿರು ಎಂಬ ಪರಿಕಲ್ಪನೆ ನಮ್ಮೊಳಗೆ ಮೂಡಬೇಕು. ರೈತರನ್ನು ಕಡೆಗಣಿಸಿದ ಸಮಾಜ ಹಾಳಾಗುವುದು ಖಂಡಿತ. ರೈತರ ಅನ್ನವೇ ನಾವೆಲ್ಲ ಉಣ್ಣುವುದು ಎಂಬುದನ್ನು ನಾವು ಯಾರೂ ಮರೆಯಬಾರದು. ೧೨ ನೇ ಶತಮಾನದ ಶರಣ ಸಮಾಜವೂ ಸಹ ಕಾಯಕಕ್ಕೆ ಹೆಚ್ಚಿನ ಮಹತ್ವ ಕೊಟ್ಟಿತು. ದುಡಿಯುವ ವರ್ಗದ ಜನರ ಬೆವರಿಗೆ ಹೆಚ್ಚಿನ ಬೆಲೆ ನೀಡಿತು ಎಂದವರು ತಿಳಿಸಿದರು.

ನೀಲಾಂಬಿಕೆ ಸತ್ಯಂಪೇಟೆ ದೀಪಬೆಳಗಿಸಿ ಉದ್ಘಾಟಿಸಿದರು. ರಾಜು ಕುಂಬಾರ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಪಂಪಣ್ಣಗೌಡ ಮಾ.ಪಾಟೀಲ ಮಳಗ ವಂದಿಸಿದರು. ಚಂದ್ರಶೇಖರ ಗೋಗಿ ವಚನ ಗೀತ ಹಾಡಿದರು. ಕಾಶಿಂ ಪಟವಾರಿ ಮಿಮಿಕ್ರಿ ಮಾಡಿದರು. ಸಭೆಯಲ್ಲಿ ಸಿದ್ಧರಾಮ ಹೊನ್ಕಲ್, ಮಾನಪ್ಪ ಹೂಗಾರ, ಮರಿಲಿಂಗಪ್ಪ ತಳವಾರ, ಶಿವಯೋಗಪ್ಪ ಮುಡಬೂಳ, ತಿಪ್ಪಣ್ಣ ಬಸವಕಲ್ಯಾಣ, ಶಂಕರಗೌಡ ದಿಗ್ಗಿ, ಸಾಹೇಬಗೌಡ ಮಲ್ಲೇದ, ಶಿವಕುಮಾರ ಆವಂಟಿ, ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಶಿವಲಿಂಗಣ್ಣ ಸಾಹು, ಮಹಾಂತೇಶ ಆವಂಟಿ, ಚೆನ್ನಪ್ಪ ಹರನೂರ, ಬಸವರಾಜ ಅರುಣಿ, ಸಿದ್ದಲಿಂಗಪ್ಪ ಆನೇಗುಂದಿ, ಡಾ.ಗುರುರಾಜ ಸತ್ಯಂಪೇಟೆ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago