ಬೆಳಗಾವಿ: ಬಿಜೆಪಿ ಸರ್ಕಾರ ರಚನೆಗೆ 111 ಸೀಟುಗಳು ಬೇಕು, ತಾಂತ್ರಿಕವಾಗಿ ಅವರಿಗೆ ಸಂಖ್ಯಾಬಲ ಇಲ್ಲ, ಸಂಖ್ಯಾಬಲ ಇಲ್ಲದಕ್ಕೆ ಇಷ್ಟೆಲ್ಲ ಡ್ರಾಮಾ ನಡೆದಿದೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅವರು ಯಾವ ಆದಾರದ ಮೇಲೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಕಾದುನೋಡಬೇಕಿದೆ. ಅತೃಪ್ತ ಶಾಸಕರ ಅನರ್ಹ ವಿಚಾರ. ಅನರ್ಹ ಮಾಡಿದ್ದನ್ನ ನಾನು ಸ್ವಾಗತ ಮಾಡುತ್ತೇನೆ. ಶಾಸಕರ ಅನರ್ಹ ಮುಂಚೆನೇ ಮಾಡಿದ್ದರೆ ಸರಕಾರ ಉಳಿಯುತ್ತಿತ್ತು. ಇನ್ನುಳಿದ 13 ಜನ ಅತೃಪ್ತ ಶಾಸಕರನ್ನ ಅನರ್ಹ ಮಾಡುವ ಸಾಧ್ಯತೆ ಇದೆ. ಅವರೆಲ್ಲ ಪಕ್ಷ ವಿರೋದಿ ಚಟುವಟಿಗಳನ್ನ ಮಾಡಿದ್ದಾರೆ. ಅತೃಪ್ತರನ್ನ ಸೇರಿಸಿಕ್ಕೊಳ್ಳುವುದು ಹೈಕಮಾಂಡ್ ಗೆ ಬಿಟ್ಟಿದ್ದು. ನಾನು ಹಿರಿಯ ನಾಯಕರಿಗಳಿಗೆ ಆಪರೇಶನ್ ಕಮಲದ ಬಗ್ಗೆ ಎಚ್ಚರಿಕೆ ನೀಡಿದ್ದ. ಎಂದು ಅವರು ತಿಳಿಸಿದರು.
ಈ ಕುರಿತು ಹೈಕಮಾಂಡ್ ಸರಿಯಾಗಿ ಪರಿಗಣಿಸಲಿಲ್ಲ, ಪರಿಗಣಿಸಿದ್ದರೆ ಸರಕಾರ ಪತನವಾಗುತ್ತಿರಲಿಲ್ಲ, ಇನ್ನೂ ಒಂದು ವರ್ಷದ ವರೆಗೆ ರಾಜ್ಯದಲ್ಲಿ ಮಧ್ಯಂತರ ಚುಣಾವಣೆ ಬರುವುದಿಲ್ಲ ಎಂದರು.
ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡಿದ್ರೆ ಸಕ್ಸಸ್ ಆಗುತ್ತಿತ್ತು. ನಾವು ಸಿರಿಯಸ್ ಆಪರೇಶನ್ ಮಾಡಲಿಲ್ಲ. ಸ್ಪೀಕರ್ ರಮೇಶ ಕುಮಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದಾರೆ ಎಂದು ಸ್ಫೀಕರ್ ತೀರ್ಪನ್ನು ಮೇಚ್ಚುಗೆ ವ್ಯಕ್ತಪಡಿಸಿ, ಬಿಜೆಪಿ ಅವರಿಗೆ ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸ್ಪೀಕರ್ ರಮೇಶ್ ಕುಮಾರ ನಮ್ಮ ಪಕ್ಷದಲ್ಲಿದ್ರು ಸರಿಯಾದ ಕ್ರಮ ತೆಗೆದುಕ್ಕೊಂಡಿದ್ದಾರೆ. ಸರಕಾರ ಬೀಳಲು ಜಾರಕಿಹೊಳಿ ಕುಟುಂಬ ಅಂತ ತಿಳಿದ್ದಾರೆ.
ಸರಕಾರ ಬೀಳಲು ಜಾರಕಿಹೊಳಿ ಕುಟುಂಬ ಕಾರಣವಲ್ಲ, ಒಂದು ವಸ್ತು ಕಾರಣ. ವಸ್ತುವಿನಿಂದ ಸರಕಾರಕ್ಕೆ ಇಂತಾ ಪರಿಸ್ಥಿತಿ ಬಂದಿದೆ. ಅದನ್ನ ಸಮಯ ಬಂದಾಗ ಹೇಳುತ್ತೆನೆ ಹೇಳಲೆಬೇಕು. ಇಲ್ಲದಿದ್ರೆ ಇದು ಇತಿಹಾಸದಲ್ಲಿ ಹಾಗೆ ಉಳಿಯುತ್ತೆ ಎಂದು ಮಾಧ್ಯಮಗೊಳೊಂದಿಗೆ ಮಾತನಾಡುತ್ತ ಮಾರ್ಮಿಕವಾಗಿ ಉತ್ತರಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…