ಬಿಸಿ ಬಿಸಿ ಸುದ್ದಿ

12ಕ್ಕೆ ಎಎಪಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ- ಕಾರ್ಯಕರ್ತರ ಸಮಾವೇಶ

ಕಲಬುರಗಿ: ಆಮ ಆದ್ಮಿ ಪಕ್ಷದ ಗ್ರಾಮ ಸಂಪರ್ಕ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಜೂನ್ ೧೨ ರಂದು ಸಾಯಂಕಾಲ ೪.ಕ್ಕೆ ಕಲಬುರಗಿ ಜಿಲ್ಲೆಯ ಆಮ ಆದ್ಮಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಕುಸನೂರ ರಸ್ತೆಯಲ್ಲಿರುವ ಎಸ್.ಎಸ್.ವಿ ಟಿವಿ ಸಭಾಂಗಣದಲ್ಲಿ ನಡೆಯಲ್ಲಿದೆ ಈ ಸಮಾವೇಶದಲ್ಲಿ ಆಮ್ ಆದ್ಮಿ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು,  ನೂರಾರು ಸಂಖ್ಯೆಯಲ್ಲಿ ಭಾಗವಹಿಸಲು ಆಮ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ವಿಜಯ ಶರ್ಮಾ ರವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್, ಜನತಾದಳ, ಆಡಳಿತ ಪಕ್ಷವಾದ ಬಿಜೆಪಿ ರಾಜಕಿಯ ವ್ಯವಸ್ಥೆ ಹೀನಾಯ ಪರಸ್ಥಿಗೆ ತಳ್ಳಿದೆ ಕರ್ನಾಟಕದ ಜನತೆ ಈ ಮೂರು ಪಕ್ಷಗಳಿಂದ ಬೇಸತ್ತಿದ್ದಾರೆ.  ಇಂಥಹ ಪರಸ್ಥಿತಿಯಲ್ಲಿ ಜನರು ಆಮ್ ಆದ್ಮಿ ಪಕ್ಷದ ಕಡೆಗೆ ನೋಡುತ್ತಿದ್ದಾರೆ.

ಆಮ್ ಆದ್ಮಿ ಪಕ್ಷ ಒಂದು ಓಟ ಆಮ ಆದ್ಮಿ ಪಕ್ಷಕ್ಕೆ ಕೊಟ್ಟು ಕರ್ನಾಟಕದಲ್ಲಿ ದಿಲ್ಲಿ ಮತ್ತು ಪಂಜಾಬ ಮಾದರಿಯಲ್ಲಿ ಕರ್ನಾಟಕದ ಜನತೆಗೆ ಹತ್ತು ಹಲವಾರು ಯೋಜನೆಗಳು ಕೊಡುತ್ತವೆ

ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ೨೦೦-೩೦೦ ಯೂನಿಟ ವಿದ್ಯುತ್ (ಕರೆಂಟ್) ಉಚಿತ ಎಲ್ಲಾ ನಾಗರೀಕರಿಗೆ ಉಚಿತ ಆರೋಗ್ಯ ಸೌಲಭ್ಯ ಯಾವುದೆ ಕಾಯಿಲೆ, ಆಪರೇಷನ. ಹೃದಯ ಶಸ್ತ್ರ ಚಿಕಿತ್ಸೆ  ೨೦ ಲಕ್ಷ ರೂಪಾಯಿ ಅಥವಾ ಮೆಲ್ಪಟ್ಟ ಅಸ್ಪತ್ರೆ ಬಿಲ್ ಸರಕಾರವೆ ಭರಿಸುತ್ತದೆ. ದಿಲ್ಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕಗಳು ಸ್ತಾಪಿಸಲಾಗುವದು.

ಕರ್ನಾಟಕದ ಎಲ್ಲಾ ಮಕ್ಕಳಿಗೆ ವಿಶ್ವ ದರ್ಜೆಯ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ, ಕ್ರಿಡೆ, ಈಜುಕೋಳ, ಜಿಮ್, ಇತ್ತಾದಿ ಸೌಲಭ್ಯ ಒದಗಿಸಲಾಗಿವದು.  ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ೧೦೦೦ ರೂಪಾಯಿ ಮಾಶಾಸನ, ಅಟೋ ಚಾಲಕರಿಗೆ ಫ್ರೀ ಗ್ಯಾಸ ಸಿಲೆಂಡರ್ ಕೊಡುವದು ಇತ್ಯಾದಿ ಸೌಲಭ್ಯೆಗಳ ಬಗ್ಗೆ ಜನರಿಗೆ ತಿಳಿಸಿ ಜಾಗೃತಿ ಮೂಡಿಸಲು ಕಾರ್ಯಗಾರ ರೂಪದಲ್ಲಿ ಈ ಸಮಾವೇಶ ಇದೆ. ಎಂದು ಶರ್ಮಾ ಅವರು ತಿಳಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

6 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

16 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

16 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago