ಬಸವ ಪ್ರಜ್ಞೆ ಎಂಬುದು ನಮ್ಮ ಮೈ ಮನಗಳಲ್ಲಿ ಸದಾ ಹೆಇಯುತ್ತಿರಬೇಕು. ಬಸವ ಪ್ರಜ್ಞೆ ಇದ್ದಲ್ಲಿ ಅಜ್ಞಾನ,ಅಂಧಕಾರಕ್ಕೆ ಜಾಗವಿರುವುದಿಲ್ಲ. ದೇವರು ಒಬ್ಬನೇ. ನಾವೆಲ್ಲರೂ ಒಂದೇ ಎಂಬ ಐಕ್ಯ ಭಾವ ತಾಳುವುದೇ ಬಸವ ಪ್ರಜ್ಞೆ ಯಾಗಿದೆ. -ಡಾ. ಶಿವರಂಜನ ಸತ್ಯಂಪೇಟೆ, ಕಲಬುರಗಿ.
ಕಲಬುರಗಿ: ಇಷ್ಟಲಿಂಗ ಜನಕ, ಮಹಾಮಾನವತಾವಾದಿ, ಅನುಭವ ಮಂಟಪದ ನಿರ್ಮಾತೃ ಬಸವಣ್ಣನವರು ಅದುವರೆಗಿನ ಕರ್ಮ ಸಿದ್ಧಾಂತವನ್ನು ಅಲ್ಲಗಳೆದು ಕಾಯಕ ಮತ್ತು ದಾಸೋಹ ಸಿದ್ಧಾಂತವನ್ನು ಬೋಧಿಸಿದರು ಎಂದು ಪತ್ರಕರ್ತ- ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಬಸವ ಸಮಿತಿ ಹಾಗೂ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ವತಿಯಿಂದ ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಲಿಂ. ಡಾ. ಡಿ.ಜಿ.ಮೋದಿ ಸ್ಮರಣಾರ್ಥ ೭೧೨ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ಬಸವ ಪ್ರಜ್ಞೆ ವಿಷಯ ಕುರಿತು ಮಾತನಾಡಿದ ಅವರು, ಬಸವ ಎನ್ನುವ ಶಬ್ದವೇ ಮಂತ್ರ ಸದೃಶವಾಗಿದ್ದು, ಬಸವಣ್ಣನವರ ಸಮಾಜೋದ್ಧಾರ್ಮಿಕ ಚಳವಳಿ ಆಧ್ಯಾತ್ಮಿಕ ತಳಹದಿಯಲ್ಲಿ ರೂಪುಗೊಂಡಿತ್ತು ಎಂದು ಅವರು ಅಭಿಪ್ರಾಯಪಟ್ಟರು.
ಜಾತಿ, ವರ್ಗ, ವರ್ಣ ಭೇದಗಳನ್ನು ತೊಡೆದು ಹಾಕಿದ ಅವರು ಸ್ವಾತಂತ್ರ್ಯ ಮತ್ತು ಸಮಾನತೆ ಕನಸಿದ ಮಹಾನ್ ದಾರ್ಶನಿಕ ಪುರುಷರಾಗಿದ್ದು, ಬಸವಣ್ಣ ನಡೆದು ನುಡಿದ ವಚನಗಳ ಬೆಳಕನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶರಣರ ವಚನಗಳು ಮುಕ್ತಾಫಲಕಗಳಂತಿದ್ದು, ದೇವರು ಕೊಟ್ಟ ಸಂಸಾರವೆಂಬ ಕುದುರೆಯನ್ನು ಚನ್ನಾಗಿ ಸವಾರಿ ಮಾಡುವ ಮೂಲಕ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ೭೭೦ ಅಮರಗಣಂಗಳ ಮೂಲಕ ಸಮಾಜದ ಓರೆ-ಕೋರೆಗಳನ್ನು ತಿದ್ದಿದ ಬಸವಣ್ಣ ಹಾಗೂ ಅವರ ವಚನಗಳು ಇಂದಿನ ಧಾವಂತದ ಬದುಕಿಗೆ ಪ್ರಸ್ತುತ ಮತ್ತು ಪೂರಕವಾಗಿವೆ ಎಂಬುದನ್ನು ಸಾಹೋದಾರಣವಾಗಿ ತಿಳಿಸಿದರು.
ಯುದ್ಧ, ಹಿಂಸೆ, ಮೋಸ, ಮೂಢನಂಬಿಕೆ, ಕಂದಾಚಾರಗಳ ವಿರೋಧಿಯಾಗಿದ್ದ ಬಸವಣ್ಣನವರು ವೇದಾಗಮಗಳ ಸುಳ್ಳನ್ನು ಎತ್ತಿ ಹೇಳುವ ಮೂಲಕ ಸರಳ ಸಹಜ ಬದುಕಿಗೆ ನಾಂದಿ ಹಾಡಿದರು. ಆ ಮೂಲಕ ಮೇಲು-ಕೀಳಿಲ್ಲದ, ಬಡವ-ಶ್ರೀಮಂತನಿಲ್ಲದ, ಸ್ತ್ರೀ-ಪುರುಷನಿಲ್ಲದ ಪ್ರಜಾಸತ್ತಾತ್ಮಕ ಸಮ ಸಮಾಜವನ್ನು ನಿರ್ಮಿಸಿದರು. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರು ಇಡೀ ಮಾನವ ಕುಲಕ್ಕೆ ಅಸ್ಮಿತೆಯನ್ನು ಒದಗಿಸಿಕೊಟ್ಟರು ಎಂದು ಅವರು ವಿವರಿಸಿದರು.
ಬಸವ ಸಮಿತಿ ಜಿಲ್ಲಾ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಬಂಡಪ್ಪ ಕೇಸೂರವಿ, ಶ್ವನಾಥ ಮಂಗಲಗಿ, ಶಿವಾನಂದ ಹಾಗರಗಿ, ಸಾಕ್ಷಿ ಸತ್ಯಂಪೇಟೆ, ದತ್ತಿ ದಾಸೋಹಿಗಳಾದ ಪದ್ಮನಿ ಡಿ.ಮೋದಿ ಪರಿವಾರದವರು ಕಾರ್ಯಕ್ರಮದಲ್ಲಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…