ಬಿಸಿ ಬಿಸಿ ಸುದ್ದಿ

ಕನ್ನಡ‌ ಆಸ್ಮಿತೆ ಉಳಿಸಲು 24 ಗಂಟೆಗಳ ಆಹೋರಾತ್ರಿ‌ ಧರಣಿ: ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ: ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಹಲವಾರು ಲೋಪದೋಷಗಳಾಗಿವೆ.‌ ಸತ್ಯವನ್ನು ಮರೆಮಾಚಿ ಇತಿಹಾಸ ತಿರುಚಲಾಗಿದೆ. ಕರ್ನಾಟದ ಮಹನೀಯರ ಜೀವನಚರಿತ್ರ ಬಗ್ಗೆ ತಪ್ಪು ಮಾಹಿತಿ ನೀಡಿ ಕನ್ನಡದ ಆಸ್ಮಿತೆಗೆ ಧಕ್ಕೆ ಮಾಡಲಾಗಿದೆ. ಇದರ ವಿರುದ್ದ ಕನ್ನಡದ ಆಸ್ಮಿತೆ ಉಳಿಸಲು ನಾಳೆ ಕಲಬುರಗಿಯ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪುತ್ಥಳಿಯ ಮುಂದೆ 24 ಗಂಟೆಗಳ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ‌ ಅವರು ಮಾತನಾಡುತ್ತಿದ್ದರು.

ಸಾಹಿತಿಗಳು, ಪ್ರಗತಿಪರ ಚಿಂತಕರು, ಸಮುದಾಯ ಸಂಘಟಕರು, ಮಠಾಧೀಶರು, ಬರಹಗಾರರು, ರಾಜಕಾರಣಿಗಳು ಸೇರಿದಂತೆ ಬಹುತೇಕರು ಪಠ್ಯಪುಸ್ತಕದಲ್ಲಿ ತಿರುಚಲಾದ ಐತಿಹಾಸಿಕ ಘಟನೆಗಳ ವಿರುದ್ದ ಹಾಗೂ ಕನ್ನಡದ ಆಸ್ಮಿತೆ ಉಳಿಸಲು ನಾಳೆ ಕುಪ್ಪಳ್ಳಿಯಿಂದ ತೀರ್ಥಹಳ್ಳಿಯವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸೂಫಿ ಸಂತರ, ಬುದ್ದ ಬಸವನ ನಾಡು ಕಲಬುರಗಿ ಯಲ್ಲೂ ಕೂಡಾ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಜಗತ್ ಸರ್ಕಲ್ ಬಳಿಯ ಬಸವೇಶ್ವರ ಪ್ರತಿಮೆ ಮುಂದೆ ನಾಳೆ ಬೆಳಿಗ್ಗೆ 10 ಗಂಟೆಯಿಂದ ನಾಡಿದ್ದು 10 ಗಂಟೆಗೆಯವರೆಗೆ ಅಹೋರಾತ್ರಿ ಧರಣಿ ನಡೆಲಾಗುವುದು ಎಂದರು.

ರಾಜ್ಯ ಸರ್ಕಾರ ಪಠ್ಯವನ್ನು ಕೇಸರಿಕರಣ ಮಾಡಲು ಹೊರಟಿದ್ದು ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಇವರ ಕೊಡಲು ಹೊರಟಿರುವ ತಪ್ಪು ಮಾಹಿತಿಗಳನ್ನು ಓದಿ ಮುಂದೆ ಧರ್ಮದ ಪರ ಕೆಲಸ ಮಾಡಲು ದಾರಿ ಮಾಡಿಕೊಡುತ್ತಿದ್ದಾರೆ ಎಂದರು ದೂರಿದ ಅವರು ಪಠ್ಯಗಳಲ್ಲಿ ‘ ಬಸವಣ್ಣನವರು ಉಪನಯನ ಮಾಡಿಸಿಕೊಂಡು‌ಲಿಂಗದೀಕ್ಷೆ ಸ್ವೀಕರಿಸಿ‌ ವೀರಶೈವ ಪರಂಪರೆಯನ್ನು ಅಭಿವೃದ್ದಿ ಪಡಿಸಿದರು ‘ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಬಸವಣ್ಣನವರು ಉಪನಯನ ತಿರಸ್ಕರಿಸಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ವೀರಶೈವ ಪರಂಪರೆ ಅಭಿವೃದ್ದಿಪಡಿಸಿದ್ದರು ಎಂದರೆ ಆಗಲೇ ಆ ಪರಂಪರೆ ಇತ್ತಾ ? ಅಥವಾ ಸ್ಥಾಪನೆ ಮಾಡಿದ್ರಾ? ವ್ಯವಸ್ಥೆಯ ವಿರುದ್ದವೇ ಸಿಡಿದೆದ್ದ ಬಸವಣ್ಣ‌ನವರು ಲಿಂಗಾಯತ ಧರ್ಮ ಸ್ಥಾಪಿಸಿದರು. ಇದು ಪಠ್ಯದಲ್ಲಿ ಸೇರಿಸಿಲ್ಲ ಇದು ಬಸವಣ್ಣನವರಿಗೆ ಮಾಡಿದ ಅವಮಾನ ಎಂದರು.

ಇನ್ನೂ ಜೈನ ಹಾಗೂ ಬೌಧ್ಧ ಧರ್ಮಗಳ‌ ಬಗ್ಗೆಯೂ ಕೂಡಾ ತಪ್ಪು ಮಾಹಿತಿ‌ ಇದೆ. ತೀರ್ಥಂಕರರು ಹಾಗೂ ಬುದ್ದನ ಕುರಿತು ಏಕವಚನ ದಲ್ಲಿ ಸಂಬೋಧಿಸಲಾಗಿದೆ. ಬುದ್ದನ ಕುರಿತು ಬಸವರಾಜ್ ಮಾಲಗತ್ತಿ ಅವರು ‘ ಮರಳಿ ಮನೆಗೆ ‘ ಕವನ ತೆಗೆಯಲಾಗಿದೆ. ಜೈನ ಹಾಗೂ ಬೌದ್ಧ ಧರ್ಮಗಳ ಬೇರು ಹಿಂದುತ್ವದಲ್ಲಿವೆ ಎಂದು ಪಠ್ಯದಲ್ಲಿ ಸೇರಿಸಲಾಗಿದೆ. ಈ ಧರ್ಮಗಳನ್ನು ” ಮತ”ಗಳೆಂದು ಬರೆಯಲಾಗಿದೆ.

ಇನ್ನೂ ಮುಂದುವರೆದು, ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರಿನ ಮುಂದಿನ ಸಂವಿಧಾನ ಶಿಲ್ಪಿ ಪದ ತೆಗೆಯಲಾಗಿದೆ. ಅವರ ತಂದೆ ತಾಯಿಯ ಹೆಸರು‌ ಹುಟ್ಟಿದ ಊರಿನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಹಿಂದೂ ಧರ್ಮದ ಬಗ್ಗೆ ಅಂಬೇಡ್ಕರ್ ಅವರಿಗೆ‌ ರಾಮಾಯಣ ಬರೆದ ವಾಲ್ಮೀಕಿ ಅವರ ಬಗ್ಗೆಯೂ ಅವಹೇಳನ ಮಾಡಲಾಗಿದೆ. ಇವರಿಗೆ ರಾಮ‌ ಬೇಕು ವಾಲ್ಮೀಕಿ ಬೇಡ ಎಂದು ವ್ಯಂಗ್ಯವಾಡಿದರು.

ಆರ್ ಎಸ್ ಎಸ್ ನವರು ಮೊದಲಿನಿಂದಲೂ ಸಂವಿಧಾನ ವಿರೋಧಿಗಳು. ತಮಗೆ ಮನಸ್ಮೃತಿನೇ ಸಂವಿಧಾನವಾಗಬೇಕು ಎಂದು ಪ್ರತಿಪಾದಿಸಿ ಸಂವಿಧಾನದ ಪ್ರತಿಗಳನ್ನು ಸುಟ್ಟಿದ್ದಾರೆ. ” ಮನುಸ್ಮೃತಿ ಯಲ್ಲಿ ಸಮಾಜವು ಧರ್ಮ ಮಾರ್ಗದಲ್ಲಿ ಹೇಗೆ ಸಾಗಬೇಕು ಎನ್ನುವ ಸೂಚನೆಗಳಿವೆ ” ಎಂದು ಮಕ್ಕಳಿಗೆ ಪಠ್ಯದಲ್ಲಿ ಹೇಳಿಕೊಡಲು ಸರ್ಕಾರ ಮುಂದಾಗಿದೆ. ಜೊತೆಗೆ ಶಂಕರಾಚಾರ್ಯರ ಬಗ್ಗೆ ಬರೆದು‌ ” ಸಂಕರ” ಎಂದು ಬರೆಯಲಾಗಿದೆ. ಆದಿ‌ಚುಂಚನಗಿರಿ ಹಾಗೂ ಸಿದ್ದಗಂಗಾ ಶ್ರೀ‌ಗಳ ಬಗ್ಗೆ ಅವಾಮಾನಿಸಲಾಗಿದೆ. ಮಹಿಳೆಯರ ಬಗ್ಗೆ ತುಂಬಾ ಕೇವಲವಾಗಿ ಬರೆಯಲಾಗಿದೆ. ಮಹಿಳೆಯನ್ನು ಹಣದ ರಾಶಿಗೆ ಹೋಲಿಸಲಾಗಿದೆ ಎಂದರು.

ಕಳೆದ ವರ್ಷದ ಪಠ್ಯ ಬರೆದ 28 ಲೇಖಕರ ಪಠ್ಯಗಳನ್ನು ಕೈಬಿಡಲಾಗಿದೆ. ಪ್ರಗತಿಪರರ , ಚಿಂತಕರ ಪಾಠ ಕೈಬಿಟ್ಟು ಬಿಜೆಪಿಯ ಬಾಡಿಗೆ ಬರಹಗಾರರ ಬರಹಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ‌. ಸ್ವಾತಂತ್ರ್ಯ ಹೋರಾಟಗಾರರಾದ ಸುರಪುರದ ರಾಜರ‌ ಬಗ್ಗೆ, ಭಗತ್ ಸಿಂಗ್, ನಾರಾಯಣಗುರು ಅವರ ಕುರಿತಾದ, ಸಾವಿತ್ರಿ ಬಾಯಿ ಫುಲೆ, ಅವರ ಕುರಿತಾದ ಪಠ್ಯಗಳನ್ನು ತೆಗೆಯಲಾಗಿದೆ. ಕನ್ನಡದ ಧ್ವಜ ರಲ್ಲಿ ಇದ್ದ ಭುವನೇಶ್ಬರಿ ಜಾಗದಲ್ಲಿ‌ ಭಾಗವಾ ಧ್ವಜ ಹಾಕಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಪ್ರಿಂಟ್ ಮಾಡಲು ರೂ‌150 ಕೋಟಿ ಖರ್ಚು ಮಾಡಲಾಗಿದೆ. ಯಾರು ಇವರಿಗೆ ಇಷ್ಟು ಖರ್ಚು ಮಾಡಲು ಅನುಮತಿ ನೀಡಿದ್ದು? ಪರಿಷ್ಕರಣ ಸಮಿತಿಗೆ ಆದೇಶವಿರಲಿಲ್ಲ. ಹಾಗಾದರೆ ಶಿಕ್ಷಣ ಸಚಿವರು ಹಣ ನೀಡಿದ್ದು ಹೇಗೆ?. ಇದು ಕಾನೂನುಬಾಹಿರವಲ್ಲವೇ?

ಬರಗೂರು ಸಮಿತಿಯಲ್ಲಿ 27 ಉಪಸಮಿತಿಗಳಿದ್ದು ಆ ನಂತರ ಉನ್ನತ ಸಮಿತಿಗೆ ಪಠ್ಯಗಳನ್ನು ಪರಿಷ್ಕರಣ ಮಾಡಿತ್ತು. ಆ ಸಮಿತಿಗಳಲ್ಲಿ ಶಿಕ್ಷಣ ತಜ್ಞರು, ವಿಧ್ವಾಂಸರು ಇದ್ದರು. ಪುರಸ್ಕರಣೆಗೆ‌ ಎರಡು ವರ್ಷ ಸಮಯ ಬೇಕಾಗಿತ್ತು. ಆದರೆ ಈಗಿನ ಪರಿಷ್ಕರ ಸಮಿತಿಗೆ ಆದೇಶವೇ ಇಲ್ಲದೆ ಕೇವಲ 2 ತಿಂಗಳು ಪಠ್ಯಪುಸ್ತಕ ಪರಿಷ್ಕರಣೆ ಮಾಡಿ‌ ಬಿಜೆಪಿ ತನ್ನ ಚಿಂತನೆಗಳನ್ನು‌ ತುಂಬಿ ಮಕ್ಕಳ ಭವಿಷ್ಯ ಹಾಳು ಮಾಡಲು ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

ಈಗಿನ ಪರಿಷ್ಕೃತ ಪಠ್ಯಪುಸ್ತಕಗಳನ್ನ ವಾಪಸ್ ಪಡೆದುಕೊಂಡು‌ ಹಳೆ ಪಠ್ಯಪುಸ್ತಕ ಗಳನ್ನೇ ಮತ್ತೆ ಕೊಡಿ ಎಂದು 24 ತಾಸುಗಳ ಆಹೋರಾತ್ರಿ ಧರಣಿಯಲ್ಲಿ ಸರ್ಕಾರವನ್ನು ಆಗ್ರಹಿಸುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ‌ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಮಾಜಿ ಎಂ ಎಲ್‌ ಸಿ ಅಲ್ಲಮಪ್ರಭು ಪಾಟೀಲ್, ಶಿವಾನಂದ ಪಾಟೀಲ, ಭೀಮಣ್ಣ ಸಾಲಿ ಸೇರಿದಂತೆ ಮತ್ತಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago