ಬಿಸಿ ಬಿಸಿ ಸುದ್ದಿ

ವಾರ್ಡ್ ಸಮಿತಿ ಸದಸ್ಯತ್ವದಲ್ಲಿ ಅಡೆತಡೆ ನಿವಾರಣೆಗೆ ಒತ್ತಾಯ

ಕಲಬುರಗಿ: ವಾರ್ಡ ಸಮಿತಿ ಬಳಗ, ಜಯನಗರ ಅಬಿವೃದ್ಧಿ ಸಂಘ,ಕಲ್ಬುರ್ಗಿ ಸ್ಮಾರ್ಟ ಸಿಟಿ ಕ್ಲಬ್, ವೀರಶೈವ ಮಹಾಸಭಾ ,ಕಲ್ಪ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಅನೇಕ ಸಂಘ – ಸಂಸ್ಥೆಗಳ ನೇತೃತ್ವದಲ್ಲಿ ಮಹಾನಗರಪಾಲಿಕೆಯ ನೂತನ ಆಯುಕ್ತರಾದ ಭುವನೇಶ್ ಪಾಟೀಲ್ ಅವರನ್ನು ವಾರ್ಡ ಸಮಿತಿ ಸದಸ್ಯತ್ವದ ಕುರಿತು ಇರುವ ಅಡೆತಡೆಗಳನ್ನು ನಿವಾರಿಸುವಂತೆ ಮನವಿ ಮಾಡಲಾಯಿತು.

ಕಲ್ಬುರ್ಗಿಯ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಆಯುಕ್ತರನ್ನು ಭೇಟಿ ಮಾಡಿ ಮಾತನಾಡಿದ ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ.ಕೆ.ಎಸ್ ವಾಲಿ, ವಾರ್ಡ ಸಮಿತಿ ಸದಸ್ಯತ್ವಕ್ಕೆ ನಿಗದಿತ ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದಿಲ್ಲ,ಈ ಕುರಿತು ಎಲ್ಲ ಮಾಧ್ಯಮಗಳ ಪತ್ರಿಕೆಗಳೂ ಸರಣಿ ಲೇಖನಗಳಲ್ಲಿ ಪಾಲಿಕೆ ಕರ್ತವ್ಯದ ಬಗ್ಗೆ ವಿವರವಾಗಿ ಬರೆದಿದ್ದಾರೆ.

ನಗರದ ಸಾರ್ವಜನಿಕರು ವಾರ್ಡಸಮಿತಿಗೆ ಸದಸ್ಯರಾಗಲು ಅರ್ಜಿ ಸಲ್ಲಿಸದಿರುವುದಕ್ಕೆ ವಿಪರೀತ ದಾಖಲೆಗಳ ಬೇಡಿಕೆ,ಮತದಾರರ ಪಟ್ಟಿಯಲ್ಲಿ ಮತದಾರರೆಂದು ನಮೂದಿಸಿರುವ ಮತದಾರರ ಎಕ್ಸಾ÷್ಟçಕ್ಟ್ ಪಡೆಯಲು ಪಾಲಿಕೆಗೆ ೬೫ರೂಪಾಯಿಗಳ ಚಲನ್ ಕಟ್ಟಿ ದಿನಗಟ್ಟಲೆ ಓಡಾಡಬೇಕು.

ನಗರ ಆಡಳಿತದಲ್ಲಿ ಆಸಕ್ತಿ ಇರುವ ಹಿರಿಯರು ವಿದ್ಯಾಭ್ಯಾಸದ ದಾಖಲೆಗಳನ್ನು ,ಸಾಮಾಜಿಕ ಸೇವೆ ಸಲ್ಲಿಸಿರುವ ಪ್ರಮಾಣ ಪತ್ರ ಹೀಗೆ ವಿವಿಧ ದಾಖಲಾತಿಗಳ ಪಟ್ಟಿ ಇದೆ.ವಾರ್ಡ ಸಮಿತಿ ಸದಸ್ಯತ್ವಕ್ಕೆ ಸರಕಾರಿ ಮತ್ತು ಖಾಸಗಿ ನೌಕರರೂ ಅರ್ಜಿ ಸಲ್ಲಿಸಬಹುದಾಗಿದೆ.ಆದರೆ ಈ ಕುರಿತು ಯಾರಿಗೂ ಮಾಹಿತಿ ಇಲ್ಲ.ನಗರದ ಸಾಮಾನ್ಯ ನಾಗರಿಕರಿಗೆ ತಿಳುವಳಿಕೆ ಮೂಡಿಸಬೇಕಾದ ಪಾಲಿಕೆ ಮೌನ ವಹಿಸಬಾರದು ಎಂದರು.ಇದೇ ವೇಳೆ ಕಲ್ಬುರ್ಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷರಾದ ಪಿ.ಎಸ್ ಮಹಾಗಾಂವ್ಕರ್ ಮಾತನಾಡಿ, ದಾಖಲೆಗೆಳ ಸರಳೀಕರಣ ಮಾಡಿ,ಕೇವಲ ಮತದಾರರ ಗುರುತಿನ ಚೀಟಿ ಮತ್ತು ಭಾವಚಿತ್ರವನ್ನು ಕಡ್ಡಾಯಗೊಳಿಸಿ ಅರ್ಜಿ ಸಲ್ಲಿಕೆಗೆ ಕನಿಷ್ಠ ಐದು ವಾರಗಳ ಕಾಲಾವಕಾಶ ನೀಡಿ ದಿನಾಂಕ ವಿಸ್ತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ವ್ಯಾಪಕವಾದ ತಿಳುವಳಿಕಾ ಕಾರ್ಯಕ್ರಮಗಳನ್ನು ಪಾಲಿಕೆ ಸಂಘ ಸಂಸ್ಥೆಗಳಿಗೆ ಆಯೋಜಿಸಲು ಪ್ರೇರೇಪಿಸಬೇಕು,ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬ್ಯಾನರ್ಗಳಲ್ಲಿ ,ಹೋರ್ಡಿಂಗ್ಸ್ಗಳಲ್ಲಿ ವಾರ್ಡ ಸಮಿತಿ ಸದಸ್ಯರಾಗಲು ಪೂರ್ಣ ಮಾಹಿತಿ ನೀಡುವ ಪ್ರಕಟಣೆ ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ.ಕೆ.ಎಸ್ ವಾಲಿ, ಕಲ್ಬುರ್ಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷ ಪಿ ಎಸ್ ಮಹಾಗಾಂವ್ಕರ್, ಹಿಂದುಳಿದ ವರ್ಗಗಳ ಜಾಗೃತಿ ಸಮಿತಿ ಕಾರ್ಯದರ್ಶಿ ಬಿ ಎಂ.ರಾವೂರ್,ರೇಷ್ಮೇ ಇಲಾಖೆಯ ನಿವೃತ್ತ ಅಧಿಕಾರಿ ನೀಲಕಂಠರಾವ್ ದೊಡ್ಡಮನಿ,ರಾಮು ಪವಾರ್,ಬಸವರಾಜ ಮೂಲಿಮನಿ ಸೇರಿದಂತೆ ನಗರದ ಹಲವು ಸಂಘ ಸಂಸ್ಥೆಗಳ ಪ್ರಮುಖರು ನಿಯೋಗದಲ್ಲಿ ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

6 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

6 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

6 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

22 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago