ಕಲಬುರಗಿ: ಬಸವಣ್ಣನವರಿಗೆ ಜನಿವಾರ ತೊಡಿಸಿ ಇತಿಹಾಸವನ್ನು ತಿರುಚಿ ಪಠ್ಯಪುಸ್ತಕದಲ್ಲಿ ಬಸವಾದಿ ಶರಣರಿಗೆ ಅನ್ಯಾಯವೆಸಲಾಗಿದೆ ಎಂದು ಮಾಜಿಸಚಿವ ಡಾ. ಶರಣಪ್ರಕಾಶ್ ಪಾಟೀಲ ಹೇಳಿದರು.
ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ ವತಿಯಿಂದ ಕೈಗೊಂಡ 24 ಗಂಟೆಗಳ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತಮಾಡುತ್ತಿದ್ದರು.
ಮನುವಾದಿಗಳಿಗೆ, ಆರ್ ಎಸ್ ಎಸ್ ನವರಿಗೆ ಬಸವ ಅಂಬೇಡ್ಕರ ಬೇಕಿಲ್ಲ. ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರ, ದಾರ್ಶನಿಕರ ಮಹನೀಯರ ಕುರಿತಾದ ಪಠ್ಯಗಳನ್ನು ತೆಗೆದು ಹಾಕಿ ಆರ್ ಎಸ್ ಎಸ್ ನ ಕೋಮುವಾದಿ ಚಿಂತನೆಗಳನ್ನು ಸೇರಿಸಲಾಗಿದೆ. ಇದರ ವಿರುದ್ದ ಹೋರಾಟ ತಾರ್ಕಿಕ ಅಂತ್ಯದವರೆಗೆ ಮುಂದುವರೆಯಲಿದೆ. ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಷಡ್ಯಂತ್ರವನ್ನು ಜನರಿಗೆ ತಿಳಿಸಲಿದ್ದೇವೆ ಎಂದರು.
ಈ ಸರ್ಕಾರ ಉದ್ದೇಶ ಕೇವಲ ಹಣದ ಕರಪ್ಷನ್ ಮಾತ್ರವಲ್ಲ ಇದು ಕೇವಲ ಹಣದಲ್ಲಿ ಮಾತ್ರವಲ್ಲ ಮಕ್ಕಳ ಮೆದುಳು ಕೂಡಾ ಕರೆಪ್ಷನ್ ಮಾಡುವ ಉದ್ದೇಶ ಹೊಂದಿದೆ. ಈ ಗುಲಾಮರ ಸರ್ಕಾರ ಕೇಶವಕೃಪಾದ ನಿರ್ದೇಶನದಂತೆ ನಡೆಯುತ್ತಿದೆ. ಹಾಗಾಗಿ ಪಠ್ಯಗಳ ಪರಿಷ್ಕರಣೆ ನೆಪದಲ್ಲಿ ಕರ್ನಾಟಕದ ಅಸ್ಮಿತೆಗೆ ಧಕ್ಕೆ ಉಂಟು ಮಾಡಲಾಗಿದೆ. ಈ ಸರ್ಕಾರ ಪಠ್ಯ ವಾಪಸ್ ಪಡೆಯದೇ ಹೋದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದುನಾವು ಪಠ್ಯಗಳನ್ನು ರದ್ದುಗೊಳಿಸಿ ಬರಗೂರುಸಮಿತಿಯ ಪಠ್ಯಗಳನ್ನೇ ವಾಪಸ್ ತರುತ್ತೇವೆ ಎಂದು ಘೋಷಿಸಿದರು.
ಶಾಸಕರಾದ ಶರಣಬಸ್ಸಗೌಡ ದರ್ಶನಾಪುರ ಅವರು ಮಾತನಾಡಿ ಬಿಜೆಪಿಗರಿಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಅರಿವಿಲ್ಲ. ಹಾಗಾಗಿಸ್ವಾತಂತ್ರ ಹೋರಾಟಗಾರರನ್ನುಪಠ್ಯದಿಂದ ದೂರವಿಟ್ಟಿದ್ದಾರೆ. ಈ ಷಡ್ಯಂತ್ರದ ವಿರುದ್ದ ಹೋರಾಡನಡೆಸಬೇಕು ಎಂದರು.
ವೇದಿಕೆಯ ಮೇಲೆ ಶಾಸಕರಾದ ಎಂ.ವೈ.ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಕನೀಜ್ ಫಾತೀಮಾ, ಜಗದೇವ ಗುತ್ತೇದಾರ, ಬಿ.ಆರ್.ಪಾಟೀಲ, ವೈಜನಾಥ ತಡಕಲ್, ಅಜಯಸಿಂಗ್, ಕೆ.ನೀಲಾ, ಸುಭಾಷ್ ರಾಠೋಡ, ಬಾಬುರಾವ್ ಚವ್ಹಾಣ್, ಅರುಣಕುಮಾರ ಪಾಟೀಲ, ವಿಜಯಕುಮಾರ, ಶಿವು ಹೊನಗುಂಟಿ, ಈರಣ್ಣ ಝಳಕಿ ಸೇರಿದಂತೆ ಹಲವರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…