ಬಿಸಿ ಬಿಸಿ ಸುದ್ದಿ

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8 ನೇ ಬಾರಿಗೆ ಬಸವರಾಜ್ ಹೊರಟ್ಟಿ ಭರ್ಜರಿ ಗೆಲುವು

ಪಶ್ಚಿಮ ಶಿಕ್ಷಕರ ಚುನಾವಣೆ ಫಲಿತಾಂಶ ಪ್ರಕಟವಾಗಿ ಹಳೆಯ ಮಾತಾಯಿತು. ಬಸವರಾಜ್ ಹೊರಟ್ಟಿ ಮತ್ತೊಮ್ಮೆ ಗೆದ್ದು ಬೀಗಿದ್ದಾರೆ..!

ಇದು ಬಸವರಾಜ್ ಹೊರಟ್ಟಿಯವರ 8 ನೇ ಬಾರಿಯ ಗೆಲುವಾಗಿದೆ. ಈ ಗೆಲುವಿನಿಂದ ಬಸವರಾಜ್ ಹೊರಟ್ಟಿಯವರು ದಾಖಲೆಯನ್ನೇ ಬರೆದಿದ್ದಾರೆ..!

ಬಸವರಾಜ್ ಹೊರಟ್ಟಿ ಅವರ ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ನಡೆಸುತ್ತಿದ್ದಾರೆ. ಅಲ್ಲದೇ ಈ ಗೆಲುವು ಒಂದು ರೀತಿಯ ಗಿನಿಸ್ ದಾಖಲೆಯೇ ಆಗಿದೆ..!

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸತತ 8 ನೇ ಬಾರಿಗೆ ಬಸವರಾಜ ಹೊರಟ್ಟಿ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ. ಎನ್ನುವುದುಕಿಂತ ಆಗಲೇ ಮತದಾರರು ಅಧಿಕೃತವಾಗಿ ಘೋಷಣೆಯನ್ನು ಮಾಡಿಯಾಗಿದೆ..!

ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆದ್ದು ಬೀಗಿದ ಬಸವರಾಜ ಹೊರಟ್ಟಿ ಅವರು ಗೆಲುವಿನ ನಗು ಬೀರಿದ್ದಾರೆ. ಬಸವರಾಜ ಹೊರಟ್ಟಿಯ ದಿಗ್ವಿಜಯದಿಂದ ಕಾಂಗ್ರೆಸ್​ ಪಕ್ಷದ ಅಭ್ಯರ್ಥಿ ಬಸವರಾಜ್ ಗುರಿಕಾರ, ಜೆಡಿಎಸ್‌ ಪಕ್ಷದ ಅಭ್ಯರ್ಥಿ ಶ್ರೀಶೈಲ ಗಿಡದಿನ್ನಿಗೆ ಮುಖಭಂಗವಾಗಿದೆ..!

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಗೆದ್ದ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಅಭಿಮಾನಿಗಳಿಂದ ಬೆಳಗಾವಿಯಲ್ಲಿಯೂ ವಿಜಯೋತ್ಸವ ನಡೆದ್ದಾರೆ.
ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ನಡೆಯುತಿತ್ತು. ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು, ಅವರ ಪರ ಘೋಷಣೆ ಕೂಗಿ ಸಂಭ್ರಮಿಸಿದರು..!

# ವಾಯುವ್ಯ ಪದವಿಧರ ಮತಕ್ಷೇತ್ರ —

ವಾಯವ್ಯ ಪದವೀಧರ ಮತಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಗೊಂದಲ ಮುಂದುವರೆಯುತ್ತಾ ಆ ಕ್ಷೇತ್ರದ ಮತೆಣಿಕೆ ನಡೆಯಿತು..!

ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತು, ಮತಪೆಟ್ಟಿಗೆಯಲ್ಲಿ ಹೆಚ್ಚುವರಿ 5 ಮತ ಪತ್ರ ಪತ್ತೆಯಾಗಿದ್ದು, ಗೊಂದಲ ಸೃಷ್ಟಿಯಾಗಿತ್ತು. ಇಳಕಲ್ ಪಟ್ಟಣದ ಮತಗಟ್ಟೆ 101(ಎ) ಪೆಟ್ಟಿಗೆಯಲ್ಲಿ 171 ಮತ ಇರಬೇಕಿತ್ತು. ಆದರೆ 5 ಮತ ಪತ್ರ ಹೆಚ್ಚಿದೆ. ಹೆಚ್ಚುವರಿ 5 ಮತ ಪತ್ರ ಬಂದಿದ್ದಕ್ಕೆ ಪಕ್ಷೇತರ ಅಭ್ಯರ್ಥಿ ಎನ್​.ಬಿ.ಬನ್ನೂರು ಆಕ್ರೋಶ ವ್ಯಕ್ತಪಡಿಸಿದಿರು. ಗೊಂದಲ ನಿವಾರಿಸದಿದ್ದರೆ ಕೌಂಟಿಂಗ್​ಗೆ ನಾವು ತಡೆ ಒಡ್ಡುತ್ತೇವೆ ಎಂದು ಬೆದರಿಕೆಯನ್ನೂ ಹಾಕಿದರು..!

ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಪ್ರಕಟಗೊಂಡಿರಲಿಲ್ಲ. ಸದ್ಯದ ಲೆಕ್ಕಾಚಾರ ಪ್ರಕಾರ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಸೇರಿದಂತೆ ಸದಸ್ಯ ಬಲ 39 ಕ್ಕೆ ಏರಿಕೆಯಾಗಿದೆ. ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಸೇರಿದರೆ 40 ಆಗಲಿದೆ..!

ಪರಿಷತ್​ನ ಒಟ್ಟು ಸದಸ್ಯರ ಸಂಖ್ಯೆ 75. ಬಹುಮತಕ್ಕೆ 38 ಸದಸ್ಯ ಬಲ ಅಗತ್ಯವಿದೆ, ನಿರೀಕ್ಷೆಯಂತೆ ಬಿಜೆಪಿ ಗುರಿ ಮುಟ್ಟಿದೆ. ಇದರಿಂದಾಗಿ ಮಸೂದೆಗಳು, ನೀತಿ — ನಿರ್ಧಾರಗಳಿಗೆ ಅಂಗೀಕಾರದ ಮಾರ್ಗ ಸುಗಮವಾಗಿದೆ. ಮೇಲ್ಮನೆಯಲ್ಲಿ ಬಹುಮತವಿಲ್ಲದ ಕಾರಣಕ್ಕೆ ಹಿಂದೆಲ್ಲ ಮಹತ್ವದ ಮಸೂದೆಗಳು ಪ್ರತಿಪಕ್ಷಗಳಿಂದ ತಿರಸ್ಕೃತಗೊಂಡು ಬಿಜೆಪಿ ನಾಯಕರು ಇರಿಸುಮುರುಸು ಅನುಭವಿಸಿದ್ದರು..!

# ಹಣಮಂತ ನಿರಾಣಿ ಗೆಲುವು —

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಕೃಷಿಕ ಕುಟುಂಬದಿಂದ ಬಂದವರು. 1967ರ ಜೂನ್ 1 ರಂದು ಜನಿಸಿರುವ 55 ರ ಹರೆಯದ ಹಣಮಂತ ನಿರಾಣಿ, ಎಂ.ಕಾಂ.,ಎಲ್​.ಎಲ್​.ಬಿ. ಪದವಿ ಪಡೆದಿದ್ದಾರೆ.
2016 ರಲ್ಲಿ ಮೊದಲ ಬಾರಿಗೆ ಎಂ.ಎಲ್​.ಸಿ.ಯಾಗಿ ಮೇಲ್ಮನೆ ಪ್ರವೇಶಿಸಿದ್ದರು. ಐವರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ನಿರಾಣಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ, ವಿಜಯ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿ, ಬಾಗಲಕೋಟೆ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

# ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ —

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಒಟ್ಟು ಚಲಾವಣೆಯಾದ ಮತಗಳಲ್ಲಿ ಪತ್ರಿಕೆ ಮುದ್ರಣಕ್ಕೆ ತೆರಳುವ ವೇಳೆಗೆ ಶೇಕಡಾ 50 ಮತಗಳ ಎಣಿಕೆ ಪೂರ್ಣಗೊಂಡಿದ್ದು, ಇದರಲ್ಲಿ ಕಾಂಗ್ರೆಸ್ 2,958 ಮತಗಳ ಮುನ್ನಡೆ ಪಡೆದುಕೊಂಡಿತ್ತು..!

# ಅರುಣ ಶಹಪುರ ಎದುರು ಹುಕ್ಕೇರಿ ಪ್ರಕಾಶರರೂ..! —

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಾಯವ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅಂದಾಜು 5 ಸಾವಿರ ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗರ ಬೆವರಿಳಿಸಿದ್ದಾರೆ..! ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೋರಾಟ ನಡೆಸಿ ಸೋಲು ಅನುಭವಿಸಿದ್ದಾರೆ..!

# ಎಸ್.ಬಿ.ಬನ್ನೂರಗೆ 3 ನೇ ಬಾರಿಯೂ ಸೋಲು —

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎನ್.ಬಿ.ಬನ್ನೂರ 1,009 ಮತ ಪಡೆಯಲಷ್ಟೇ ಶಕ್ತವಾದರು. ಇನ್ನುಳಿದ ಪಕ್ಷೇತರ ಅಭ್ಯರ್ಥಿಗಳು ಸರಾಸರಿ ಮೂರಂಕಿ ದಾಟಲಿಲ್ಲ. ಆ ಮೂಲಕ ಎಸ್.ಬಿ.ಬನ್ನೂರ ವಿಧಾನ ಪರಿಷತ್ ಚುನಾವಣೆಯಲ್ಲಿ 3 ನೇ ಬಾರಿ ಸೋಲು ಅನುಭವಿಸಿದರು..!

# 1,270 ಮತ ತಿರಸ್ಕೃತವೂ —

ವಾಯವ್ಯ ಶಿಕ್ಷಕರ ಕ್ಷೇತ್ರದ ಶಿಕ್ಷಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದ 21,401 ಮತಗಳ ಪೈಕಿ, 1,270 ಮತಗಳು ತಿರಸ್ಕೃತಗೊಂಡಿವು. ಕೆಲ ಶಿಕ್ಷಕರು ಮತ ಪತ್ರದಲ್ಲಿ ಅಂಕಿ ಬರೆಯುವ ಬದಲು ರೈಟ್ ಮಾರ್ಕ್ ಹಾಕಿ ತಪ್ಪಾಗಿ ಮತಚಲಾವಣೆ ಮಾಡಿದ್ದೇ ಮತಗಳು ತಿರಸ್ಕೃತಗೊಳ್ಳಲು ಕಾರಣವಾಗಿದೆ..!

# ಡಿಸಿ ಜೊತೆಗೆ ಜಗಳ ಮಾಡಿದ ಪಿ.ಎ. ಹೊರಕ್ಕೆ —

ಬಿಜೆಪಿ ಅಭ್ಯರ್ಥಿಯೊಬ್ಬರ ಹೆಸರು ಹೇಳಿಕೊಂಡು, ಯಾವುದೇ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ಗುರು ಎಂಬ ಹೆಸರಿನ ಆಪ್ತಸಹಾಯಕನನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ತೀವ್ರ ತರಾಟೆಗೆ ತೆಗೆದುಕೊಂಡರು. ಮೊಂಡು ವಾದ ನಡೆಸಿದ್ದರಿಂದ ಕೆರಳಿದ ಡಿ.ಸಿ, ಪೊಲೀಸರು ಈತನನ್ನು ಹಿಡಿದ ಹೊರಗೆ ಹಾಕ್ರಿ ಎಂದು ಸೂಚನೆ ನೀಡಿದರು. ಸ್ಥಳದಲ್ಲಿದ್ದ ಪೊಲೀಸರು ಮತ ಎಣಿಕೆ ಕೇಂದ್ರದಿಂದ ಆತನನ್ನು ಹೊರಗೆ ಕಳುಹಿಸಿದರು..!

# 2 ನೇ ಬಾರಿಗೆ ಪರಿಷತ್ ಪ್ರವೇಶವೂ —

ಕಾಂಗ್ರೆಸ್ ಪಕ್ಷದಿಂದ 1988ರಲ್ಲಿ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಯ ಚುನಾವಣೆ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದ್ದ ಪ್ರಕಾಶ ಹುಕ್ಕೇರಿ, 1992-94 ರವರೆಗೆ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸಿದ್ದಾರೆ..!
1994 — 2014 ರ ವರೆಗೆ ಸತತ ಐದು ಬಾರಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಎ.ಪಿ.ಎಂ.ಸಿ. ಸಚಿವರಾಗಿ, ಸಕ್ಕರೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
2014 ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಆಯ್ಕೆಯಾಗಿದ್ದವರು..!

2019 ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಪ್ರಕಾಶ ಹುಕ್ಕೇರಿ, ಈಗ ಮತ್ತೆ ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ 2 ನೇ ಬಾರಿ ಮೇಲ್ಮನೆ ಪ್ರವೇಶ ಮಾಡಿದ್ದಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ.ಬಿ.ಶಂಕರಾನಂದ ಜೊತೆಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಪ್ರಕಾಶ ಹುಕ್ಕೇರಿ, 4 ದಶಕಗಳಿಂದ ಕಾಂಗ್ರೆಸ್​ನಲ್ಲೇ ಇದ್ದಾರೆ.

# ಕೌಟುಂಬಿಕ ವಿವರವೂ —

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ 1947 ರ ಮಾರ್ಚ್ 5 ರಂದು ಕೃಷಿ ಕುಟುಂಬದಲ್ಲಿ ಜನಿಸಿರುವ ಪ್ರಕಾಶ ಬಾಬಣ್ಣ ಹುಕ್ಕೇರಿ ಅವರಿಗೆ ಈಗ 75 ವರ್ಷ ವಯಸ್ಸು.
12 ನೇ ತರಗತಿ ವರೆಗೆ ಶಿಕ್ಷಣ ಪಡೆದಿದವರು. ನಾಲ್ವರು ಪುತ್ರಿಯರನ್ನು ಹೊಂದಿರುವ ಪ್ರಕಾಶ ಹುಕ್ಕೇರಿ ಅವರ ಪುತ್ರ ಗಣೇಶ ಹುಕ್ಕೇರಿ ಚಿಕ್ಕೋಡಿ — ಸದಲಗಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ..!

# ಹೊಸ ದಾಖಲೆ ಬರೆದ ಬಸವರಾಜ್ ಹೊರಟ್ಟಿಯೂ —

ಪಶ್ಚಿಮ ಶಿಕ್ಷಕರ ಮತಕೇತ್ರದಿಂದ ಈಗ 8 ಬಾರಿಯೂ ಗೆಲುವು ಸಾಧಿಸಿರುವ ಬಸವರಾಜ್ ಹೊರಟ್ಟಿಯವರ ಬಗೆಗೆ ಇನ್ನೊಂದಿಷ್ಟು ವಿಚಾರವು ಹೀಗಿದೆ…

ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ 8 ನೇ ಬಾರಿ ಗೆಲುವು ಸಾಧಿಸಿ ವಿಧಾನ ಪರಿಷತ್ ಪ್ರವೇಶಿಸುವ ಮೂಲಕ ಬಸವರಾಜ ಹೊರಟ್ಟಿ, ಈ ಹಿಂದೆ 7 ಬಾರಿ ಗೆಲುವು ಸಾಧಿಸಿ ನಿರ್ವಿುಸಿದ್ದ ತಮ್ಮದೇ ದಾಖಲೆ ಮುರಿದಿದ್ದಾರೆ..!

ಪಕ್ಷೇತರರಾಗಿ, ಜನತಾ ಪಕ್ಷ, ಲೋಕಶಕ್ತಿ, ನವ ನಿರ್ಮಾಣ ವೇದಿಕೆಯಿಂದ ತಲಾ ಒಂದು ಬಾರಿ ಹಾಗೂ ಜೆಡಿಎಸ್​ನಿಂದ 3 ಬಾರಿ ಹೊರಟ್ಟಿ ಗೆಲುವು ಸಾಧಿಸಿದ್ದವರು. ಇದೀಗ ಮೊದಲ ಬಾರಿ ಬಿಜೆಪಿಯಿಂದ ವಿಜೇತರಾಗಿದ್ದಾರೆ. ಸತತ 42 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ..!

ಕೇಸರಿ ಪಡೆಯಿಂದ ಚುನಾವಣೆ ಕಣಕ್ಕೆ ಧುಮುಕಿದ್ದ ಬಸವರಾಜ್ ಹೊರಟ್ಟಿ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೂ ಗೆಲುವು ತಂದುಕೊಟ್ಟಿದ್ದಾರೆ.

ತಮ್ಮ ಗೆಲುವಿಗೆ ರಾಜಕೀಯ ಪಕ್ಷಗಳು ಲೆಕ್ಕಕ್ಕಿಲ್ಲ, ಶಿಕ್ಷಕರ ಪಡೆಯೊಂದೇ ಸಾಕೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..!
ಮತಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಕಮಲ ಪಡೆ ಬೃಹತ್ ಕಾರ್ಯಕರ್ತರನ್ನು ಹೊಂದಿದೆ. ಇದು ಹೊರಟ್ಟಿ ಪ್ರಥಮ ಪ್ರಾಶಸ್ಱದ ಮತಗಳಿಂದ ಗೆಲುವು ಸಾಧಿಸಲು ಸಾಕಷ್ಟು ನೆರವಾಗಿದೆ.
ಜೆಡಿಎಸ್​ನ ಶ್ರೀಶೈಲ.ಗಡದಿನ್ನಿ ನಿರೀಕ್ಷಿಸಿದಂತೆ ಸ್ಪರ್ಧೆ ಒಡ್ಡುವಲ್ಲಿ ವಿಫಲರಾದರು. ಚುನಾವಣೆ ಘೋಷಣೆಗೆ ಸಾಕಷ್ಟು ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ.ಗುರಿಕಾರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಅದ್ಯಾವುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಕಣಕ್ಕಿಳಿದರೂ ಇರುವ ಕಡಿಮೆ ಅವಧಿಯಲ್ಲೇ ಕ್ಷೇತ್ರದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದರು ಬಸವರಾಜ್ ಹೊರಟ್ಟಿಯವರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಜಗದೀಶ ಶೆಟ್ಟರ್, ಶಿಕ್ಷಣ ಸಚಿವ ನಾಗೇಶ ಸೇರಿ ಹಲವಾರು ಸಚಿವರು, ಮುಖಂಡರು ಬಸವರಾಜ್ ಹೊರಟ್ಟಿ ಪರ ಪ್ರಚಾರ ನಡೆಸಿದ್ದರು.

# ಹೋರಾಟದ ಬಸವರಾಜ್ ಹೊರಟ್ಟಿ —

ಹೋರಾಟದ ಬಸವರಾಜ್ ಹೊರಟ್ಟಿ ಎಂದೇ ಖ್ಯಾತರಾಗಿರುವ ಬಸವರಾಜ ಹೊರಟ್ಟಿ 1980 ರಿಂದ ಈ ವರೆಗೆ ನಿರಂತರವಾಗಿ ವಿಧಾನ ಪರಿಷತ್​ನಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ..!

ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಖಾತೆಗಳ ಸಚಿವರಾಗಿ, ಸಭಾಪತಿಯಾಗಿ ಇವರು ಮಾಡಿರುವ ಸಾಧನೆಗಳು ಹಲವಾರು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಯಡಹಳ್ಳಿಯಲ್ಲಿ ಶಿವಲಿಂಗಪ್ಪ ಹಾಗೂ ಗುರಮ್ಮ ದಂಪತಿ ಪುತ್ರನಾಗಿ 1949 ರ ಏಪ್ರಿಲ್ 14 ರಂದು ಜನಿಸಿದ ಬಸವರಾಜ್ ಹೊರಟ್ಟಿ ಬಿ.ಎ. ಮತ್ತು ಎಂ.ಪಿ.ಇಡಿ ಪದವೀಧರರು..!

# ಖಾಸಗಿ ಶಾಲೆ ಸಮಸ್ಯೆಗಳ ಬಗ್ಗೆ ಹೊರಟ್ಟಿ ಗಮನ ಹರಿಸಲಿ —

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ವಿಜೇತರಾಗಿರುವ ಬಸವರಾಜ್ ಹೊರಟ್ಟಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್್ಸ) ಒತ್ತಾಯಿಸಿದೆ. 8 ನೇ ಬಾರಿ ವಿಜೇತರಾಗಿರುವುದಕ್ಕೆ ಹೊರಟ್ಟಿ ಅವರಿಗೆ ಒಕ್ಕೂಟವು ಅಭಿನಂದನೆ ಸಲ್ಲಿಸಿದೆ. ಸರ್ಕಾರದ ಧೋರಣೆಯಿಂದ ಖಾಸಗಿ ಶಾಲೆಗಳು ಸಾಕಷ್ಟು ನಲುಗಿವೆ. ಮಾನ್ಯತೆ ನವೀಕರಣ, ಆರ್.ಟಿ.ಇ. ಶುಲ್ಕ ಮರುಪಾವತಿ, ಪಠ್ಯಪುಸ್ತಕ ಇದ್ಯಾವುದೂ ಕಾಲಕಾಲಕ್ಕೆ ದೊರೆಯುತ್ತಿಲ್ಲ. ತಾವು ತಕ್ಷಣ ಖಾಸಗಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕೆಂದು ಕ್ಯಾಮ್್ಸ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಆಗ್ರಹಿಸಿದ್ದಾರೆ..!

# ಹಣಮಂತ ನಿರಾಣಿ ಗೆಲುವು —

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಕೃಷಿಕ ಕುಟುಂಬದಿಂದ ಬಂದವರು.
1967 ರ ಜೂನ್ 1 ರಂದು ಜನಿಸಿರುವ 55 ರ ಹರೆಯದ ಹಣಮಂತ ನಿರಾಣಿ, ಎಂ.ಕಾಂ. ಎಲ್​ಎಲ್​ಬಿ ಪದವಿ ಪಡೆದಿದ್ದಾರೆ..!

2016 ರಲ್ಲಿ ಮೊದಲ ಬಾರಿಗೆ ಎಂಎಲ್​ಸಿಯಾಗಿ ಮೇಲ್ಮನೆ ಪ್ರವೇಶಿಸಿದ್ದವರು. ಐವರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ನಿರಾಣಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ, ವಿಜಯ ಸೌಹಾರ್ದ ಬ್ಯಾಂಕ್ ಅಧ್ಯಕ್ಷರಾಗಿ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ವಾಯವ್ಯ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅಂದಾಜು 5 ಸಾವಿರ ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಗರ ಬೆವರಿಳಿಸಿದ್ದಾರೆ..! ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೋರಾಟ ನಡೆಸಿ ಸೋಲು ಅನುಭವಿಸಿದ್ದಾರೆ..!

# 1,270 ಮತ ತಿರಸ್ಕೃತವೂ..! —

ವಾಯವ್ಯ ಶಿಕ್ಷಕರ ಕ್ಷೇತ್ರದ ಶಿಕ್ಷಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದ 21,401 ಮತಗಳ ಪೈಕಿ, 1,270 ಮತಗಳು ತಿರಸ್ಕೃತಗೊಂಡಿವೆ.
ಕೆಲ ಶಿಕ್ಷಕರು ಮತ ಪತ್ರದಲ್ಲಿ ಅಂಕಿ ಬರೆಯುವ ಬದಲು ರೈಟ್ ಮಾರ್ಕ್ ಹಾಕಿ, ತಪ್ಪಾಗಿ ಮತ ಚಲಾವಣೆ ಮಾಡಿದ್ದೇ ಮತಗಳು ತಿರಸ್ಕೃತಗೊಳ್ಳಲು ಕಾರಣವಾಗಿದೆ..!

ಕೇಸರಿ ಪಡೆಯಿಂದ ಚುನಾವಣೆ ಕಣಕ್ಕೆ ಧುಮುಕಿದ್ದ ಬಸವರಾಜ್ ಹೊರಟ್ಟಿ, ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೂ ಗೆಲುವು ತಂದುಕೊಟ್ಟಿದ್ದಾರೆ. ತಮ್ಮ ಗೆಲುವಿಗೆ ರಾಜಕೀಯ ಪಕ್ಷಗಳು ಲೆಕ್ಕಕ್ಕಿಲ್ಲ, ಶಿಕ್ಷಕರ ಪಡೆಯೊಂದೆ ಸಾಕೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮತಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡದಲ್ಲಿ ಕಮಲ ಪಡೆ ಬೃಹತ್ ಕಾರ್ಯಕರ್ತರನ್ನು ಹೊಂದಿದೆ. ಇದು ಬಸವರಾಜ್ ಹೊರಟ್ಟಿ ಪ್ರಥಮ ಪ್ರಾಶಸ್ಱದ ಮತಗಳಿಂದ ಗೆಲುವು ಸಾಧಿಸಲು ಸಾಕಷ್ಟು ನೆರವಾಗಿದೆ.
ಜೆಡಿಎಸ್​ನ ಶ್ರೀಶೈಲ.ಗಡದಿನ್ನಿ ನಿರೀಕ್ಷಿಸಿದಂತೆ ಸ್ಪರ್ಧೆ ಒಡ್ಡುವಲ್ಲಿ ವಿಫಲರಾಗಿದ್ದಾರೆ..!

ಚುನಾವಣೆ ಘೋಷಣೆಗೆ ಸಾಕಷ್ಟು ಮುಂಚೆಯೇ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ.ಗುರಿಕಾರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದವರು. ಆದರೆ, ಅದ್ಯಾವುದೂ ಫಲಿತಾಂಶದ ಮೇಲೆ ಪರಿಣಾಮ ಬೀರಲಿಲ್ಲ. ಕೊನೇ ಕ್ಷಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಕಣಕ್ಕಿಳಿದರೂ ಇರುವ ಕಡಿಮೆ ಅವಧಿಯಲ್ಲೇ ಕ್ಷೇತ್ರದ ಉದ್ದಗಲಕ್ಕೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಜಗದೀಶ ಶೆಟ್ಟರ್, ಶಿಕ್ಷಣ ಸಚಿವ ನಾಗೇಶ ಸೇರಿ ಹಲವಾರು ಸಚಿವರು, ಮುಖಂಡರು ಹೊರಟ್ಟಿ ಪರ ಪ್ರಚಾರ ನಡೆಸಿದ್ದರು..!

# ಕೆ.ಶಿವು.ಲಕ್ಕಣ್ಣವರ

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago