ಬಿಸಿ ಬಿಸಿ ಸುದ್ದಿ

ಕನ್ನಡದ ಭವಿಷ್ಯ ನಿರ್ಮಾಣ ಮಾಡುವ ಕೆಲಸ ತುರ್ತು ಆಗಬೇಕಾಗಿದೆ: ಡಾ. ಟಿ.ಎಸ್. ನಾಗಾಭರಣ

ಕಲಬುರಗಿ: ನಾಳಿನ ಭವಿಷ್ಯ ರೂಪಿಸುವ ಗಂಭೀರವಾದ ಕೆಲಸ ಮಾಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಟಿ.ಎಸ್. ನಾಗಾಭರಣ ತಿಳಿಸಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ 30 ವಿಚಾರ ಸಂಕಿರಣ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿನ್ನೆಗಳನ್ನು ಅರ್ಥ ಮಾಡಿಕೊಂಡು ನಾಳೆಗಳನ್ನು ಕಟ್ಟಬೇಕಾಗಿದೆ ಎಂದು ತಿಳಿಸಿದರು.

ಪಠ್ಯದ ಅಂಕಗಳು ಕೇವಲ ಪರೀಕ್ಷೆಗೆ, ಪದವಿಗೆ ಮಾತ್ರ ಸೀಮಿತವಾಗಿದ್ದರೆ ಇಲ್ಲಿ ಅಂಕಗಳು ಬದುಕಿನ ಪರೀಕ್ಷೆಗೆ, ಪದವಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮುಖ್ಯ ಅತಿಥಿಗಳಾಗಿದ್ದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿದರು. ಡಾ. ಆನಂದ ಸಿದ್ದಾಮಣಿ ನಿರೂಪಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಗಡಿ ಸಮಸ್ಯೆಗಳು -ಅದರ ಕಾರಣಗಳು ವಿಷಯ ಕುರಿತು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪೆÇ್ರ. ಒಂಕಾರ ಕಾಕಡೆ ಮಾತನಾಡಿ, ಮಹಾರಾಷ್ಟ್ರದ ಆಸೆ ಬುರುಕುತನ, ದಾಹ ನಮ್ಮ ರಾಜ್ಯದ ಗಡಿ ವಿವಾದ ಜೀವಂತವಾಗಿಡಲಿಕ್ಕೆ ಕಾರಣವಾಗಿದ್ದು, ಇದರ ಮೂಲ ಹುಡಕುತ್ತ ಹೋದರೆ ಮಹಾರಾಷ್ಟ್ರ ಕ್ಯಾತೆ ಸಾಕμÁ್ಟಗಿರುವುದನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದರು.

ಭಾμÁವಾರು ಪ್ರಾಂತ ರಚನೆ, ಪುನರ್ ವಿಂಗಡಣೆಯ ನಂತರ ರಚನೆಯಾದ ಸಂಸತ್ತಿನ ವಲಯ ಸಮಿತಿಗಳೇ ಮೂಲ ಕಾರಣವಾಗಿವೆ ಎಂದು ವಿವರಿಸಿದರು. ಕಾಸರಗೋಡಿನ ರಾಧಾಕೃಷ್ಣ ಬೆಳ್ಳೂರ ಪೂರಕ ಟಿಪ್ಪಣೆ ವ್ಯಕ್ತಪಡಿಸಿದರು.

ಗಡಿಯಲ್ಲಿ ಕನ್ನಡ-ಸರ್ಕಾರದ ಯೋಜನೆಗಳು ಕುರಿತು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಬಾμÁವಾರು ಪ್ರಾಂತಗಳ ರಚನೆಯಾಗಿ 66 ವರ್ಷಗಳ ನಂತರವೂ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದವು ಇನ್ನೂ ಜೀವಂತವಾಗಿರಬೇಕಾದರೆ ಅದಕ್ಕೆ ಕೇವಲ ಮಹಾರಾಷ್ಟ್ರವμÉ್ಟೀ ಕಾರಣವಾಗಿರದೆ ಕರ್ನಾಟಕವೂ ಅμÉ್ಟೀ ಹೊಣೆಯಾಗಿದೆ ಎಂದು ನೇರವಾಗಿ ಆರೋಪಿಸಿದರು.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಜಕಾರಣಿಗಳು ತಮ್ಮ ಹಕ್ಕುದಾರಿಕೆಯನ್ನು ಬಲಗೊಳಿಸುತ್ತ ಗಡಿ ಭಾಗವನ್ನು ತಮ್ಮದೆಂದು ವಾದಿಸುತ್ತಿದ್ದಾರೆ. ಆದರೆ ನಮ್ಮ ಕರ್ನಾಟಕ ಸರ್ಕಾರ ಮಾಡಿರುವುದೇನು? ಎಂದು ಪ್ರಶ್ನಿಸಿದರು.

ಕಾಸರಗೋಡಿನ ಸಹ ಪ್ರಾಧ್ಯಾಪಕ ಡಾ. ಶ್ರೀಧರ ಎನ್. ಪೂರಕ ಟಿಪ್ಪಣೆ ಮಂಡಿಸಿದರು.

ಅಂತರರಾಜ್ಯ ಜಲವಿವಾದಗಳು ವಿಷಯ ಕುರಿತು ವಿಜಯಪುರ ಬಿಎಲ್ ಡಿಇ ಅಸೋಸಿಯೇಷನ್ ನ ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಡಾ. ಮಹಾಂತೇಶ ಪಾಟೀಲ ಪ್ರಬಂಧ ಮಂಡಿಸಿದರು. ಸಾಹಿತಿ ಡಾ. ರವೀಂದ್ರ ನಿಂ. ತೋಟಗೇರ ಪೂರಕ ಟಿಪ್ಪಣೆ ಮಂಡಿಸಿದರು.

ಹೊರನಾಡ ಕನ್ನಡಿಗರ ಸಂಕಟಗಳು ವಿಷಯ ಕುರಿತು ಮದ್ರಾಸ್ ವಿವಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ತಮಿಳ್ ಸೆಲ್ವಿ ಮಾತನಾಡಿ, ಹೊರ ನಾಡಿನಲ್ಲಿ ಕನ್ನಡ ಸಾಂಸ್ಕøತಿಕ ಕಾರ್ಯ ಚಟುವಟಿಕೆ ನಡೆಸಲು ಕನ್ನಡ ಭವನ ನಿರ್ಮಾಣ ವಾಗಬೇಕು. ಎಂ.ಫಿಲ್. ಪಿಎಚ್.ಡಿ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಧನ ನೀಡಬೇಕು ಎಂದರು.

ಹೈದರಾಬಾದ್ ಉಸ್ಮಾನಿಯಾ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಲಿಂಗಣ್ಣ ಗೋನಾಲ ಪೂರಕ ಟಿಪ್ಪಣೆ ಮಂಡಿಸಿದರು.

ಡಾ. ಸುಜಾತ ಜಂಗಮಶೆಟ್ಟಿ, ಬಿ.ಎಚ್. ನಿರಗುಡಿ, ಮಂಜುನಾಥ ನಾಲವಾರಕರ್, ಗೋಪಾಲ ನಾಟೀಕಾರ, ಸಂಗಮನಾಥ ರೇವತಗಾಂವ, ಸಿದ್ಧರಾಮ ಹೊನ್ಕಲ್, ಶರಣಗೌಡ ಪಾಳಾ, ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಇತರರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago