ಬಿಸಿ ಬಿಸಿ ಸುದ್ದಿ

ನಿರಂತರ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಫಲಿತಾಂಶ: ನಿಂಗಣ್ಣ

  • ನಿಂಗಣ್ಣ ಸಿದ್ದಣ್ಣ ಅಗಸರ್ ಕಲಾ ವಿಭಾಗದಲ್ಲಿ ಎರಡನೇ ಸ್ಥಾನ
  • ಸರಾಸರಿಯಲ್ಲಿ 4ನೇ ಸ್ಥಾನ ಪಡೆದು ತಾಲೂಕಿಗೆ ಕೀರ್ತಿ

ಜೇವರ್ಗಿ: ರಾಜ್ಯದಾದ್ಯಂತ ಪಿ.ಯು.ಸಿ ಫಲಿತಾಂಶ ಪ್ರಕಟವಾಗಿದೆ, ಜೇವರ್ಗಿ ತಾಲ್ಲೂಕಿನ ಮುರಗಾನೂರ್ ಗ್ರಾಮದ ನಿಂಗಣ್ಣ ತಂದೆ ಸಿದ್ದಣ್ಣ ಅಗಸರ್ ಕಲಾ ವಿಭಾಗದಲ್ಲಿ ಎರಡನೇ ಸ್ಥಾನ ಹಾಗೂ ಸರಾಸರಿಯಲ್ಲಿ ನಾಲ್ಕನೇ ಸ್ಥಾನ ಪಡೆದು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ.

600 ಅಂಕಗಳಿಗೆ 593 ಅಂಕಗಳನ್ನು ಪಡೆಯುವುದರ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇದು ಕಲಬುರ್ಗಿ ಜಿಲ್ಲೆ ಸೇರಿದಂತೆ ಜೇವರ್ಗಿ ತಾಲೂಕಿಗೆ ಕೀರ್ತಿಯನ್ನು ತಂದುಕೊಟ್ಟಿದೆ. ಇದರಿಂದಾಗಿ ತಾಲೂಕಿನ ವಿದ್ಯಾರ್ಥಿಗಳಲ್ಲಿ ಪೈಪೋಟಿಯ ಭಾವನೆ ಪ್ರಬಲವಾಗಿದ್ದು ರಾಜ್ಯಕ್ಕೆ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಪ್ರತಿದಿನವೂ 8 ಗಂಟೆಯವರೆಗೂ ಸತತ ಅಭ್ಯಾಸ ಮಾಡುತ್ತಿದ್ದೆ. ಮೈನಾರಿಟಿ ವಸತಿ ನಿಲಯದಲ್ಲಿ ಇದ್ದು ಅಭ್ಯಾಸ ಮಾಡುತ್ತಿದ್ದೆ. ನನ್ನ ಓದಿಗೆ ನನ್ನ ಗುರುಗಳು ಇಲ್ಲಿನ ಪ್ರತಿಷ್ಠಿತ ಕದಂಬ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಪ್ರಾಚಾರ್ಯರು ಆದಂತ ಶ್ರೀಶೈಲ್ ಕಣದಾಳ ಹಾಗೂ ನನ್ನ ತಂದೆ-ತಾಯಿ ಸ್ಫೂರ್ತಿಯಾಗಿದ್ದರು. ಐ.ಎ.ಎಸ್ ಆಗಬೇಕೆಂಬುದು ನನ್ನ ಜೀವನದ ಪರಮ ಗುರಿ ಹಾಗೂ ಆಸೆಯು ಆಗಿದೆ ಎಂದು ವಿದ್ಯಾರ್ಥಿ ತನ್ನ ಸಂತಸವನ್ನು ವ್ಯಕ್ತಪಡಿಸಿದ್ದಾನೆ.

97% ಕ್ಕಿಂತಲೂ ಹೆಚ್ಚಿನ ಪ್ರತಿಶತ ಪಡೆಯುವ ಎಂಬ ನಂಬಿಕೆ ನನ್ನಲ್ಲಿತ್ತು. ಆದ್ದರಿಂದ ಇಂದು ಇಷ್ಟು ಅಂಕ ಪಡೆದಿದ್ದೇನೆ. ಕಾಲೇಜಿನ ಎಲ್ಲ ಉಪನ್ಯಾಸಕರು ನಮಗೆ ಉತ್ತಮ ಮಾರ್ಗದರ್ಶನವನ್ನು ನೀಡಿದ್ದಾರೆ. ತಂದೆ-ತಾಯಿ ಹಾಗೂ ಶಿಕ್ಷಕರ ಮಾತುಗಳೇ ನನ್ನ ಈ ಯಶಸ್ಸಿಗೆ ಕಾರಣ. ಎಸೆಸೆಲ್ಸಿಯಲ್ಲಿ 88% ಪ್ರತಿಶತ ಪಡೆದಿದ್ದೆ. ನಮ್ಮ ಹಳ್ಳಿಯಲ್ಲಿ ನನ್ನ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ಮನೆಯವರು ಕೂಲಿ ಕೆಲಸ ಮಾಡುತ್ತಿದ್ದೇವೆ ನೀನಾದರೂ ಸರಿಯಾಗಿ ಓದಿ ಸರಕಾರಿ ಹುದ್ದೆ ಪಡೆದುಕೋ ಎಂದು ಹೇಳುತ್ತಿದ್ದ ಮಾತುಗಳೇ ನನ್ನ ಉತ್ತಮ ಫಲಿತಾಂಶಕ್ಕೆ ಸ್ಪೂರ್ತಿಯಾಯಿತು.

ನನ್ನ ಹತ್ತುವರ್ಷದ ಅನುಭವದಲ್ಲಿ ಇಂತಹ ಒಬ್ಬ ವಿದ್ಯಾರ್ಥಿಯನ್ನು ನಾನು ನೋಡಿಲ್ಲ. ತುಂಬಾ ಮುಗ್ದ ವಿದ್ಯಾರ್ಥಿ ರಾಜ್ಯಕ್ಕೆ ಮೊದಲನೇ ಸ್ಥಾನ ಬರುವುದು ಅಷ್ಟೇನೂ ಕಷ್ಟದ ವಿಷಯವಲ್ಲ ಎಂದು ಹೇಳುತ್ತಿದ್ದೆವು. ವಿದ್ಯಾರ್ಥಿಯು ಅಷ್ಟೇ ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದ ಹೀಗಾಗಿ ಅವನ ಓದಿಗೆ ನಮ್ಮ ಕೈಲಾದಷ್ಟು ಸಹಾಯ-ಸಹಕಾರ ಮಾಡಿದ್ದೇವೆ. ಮೊದಲ ರಾಜಸ್ಥಾನಬಂದರೆ ಒಂದು ತೊಲೆ ಬಂಗಾರ ಹಾಕುತ್ತೇವೆ ಎಂದು ಹೇಳಿದ್ದೆವು. ಅವನ ಉನ್ನತ ಹುದ್ದೆಗೆ ನಮ್ಮ ಸಂಸ್ಥೆ ಯಾವತ್ತು ಜೊತೆಯಾಗಿರುತ್ತೆ. ಅವನ ತಂದೆ ತಾಯಿ ಒಂದು ವೇಳೆ ಶಿಕ್ಷಣವನ್ನು ನಿಲ್ಲಿಸು ಅಂತ ಹೇಳಿದರೆ ನಾವು ಹಾಗೂ ಜೊತೆ ನಮ್ಮ ವಿದ್ಯಾ ಸಂಸ್ಥೆ ಬೆಂಬಲಕ್ಕೆ ಇರುತ್ತೇವೆ .

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago