ಬಿಸಿ ಬಿಸಿ ಸುದ್ದಿ

ಎದುರಾಳಿಗಳಿಗೆ ಎದೆಯೊಡ್ಡುವ ಯೋಧರಿಗೆ ನಮನಗಳು: ಧನಂಜಯ

ಸುರಪುರ: ನಮ್ಮ ಹೆಮ್ಮೆಯ ಮಾತೃಭೂಮಿ ಭಾರತದ ಹೆಬ್ಬಾಗಿಲಂತಿರುವ ಕಾರ್ಗಿಲ್ ಕದನದಲ್ಲಿ ಎದುರಾಳಿಗಳಿಗೆ ಎದೆಯೊಡ್ಡಿದ ಯೋಧರಿಗೆ ನಮನಗಳನ್ನು ನಿತ್ಯ ಸಲ್ಲಿಸಬೇಕು ಎಂದು ಎಬಿವಿಪಿ ಕಲಬುರ್ಗಿ ವಿಭಾಗದ ಸಂಘಟನಾ ಕಾರ್ಯದರ್ಶಿ ಧನಂಜಯ ಮಾತನಾಡಿದರು.

ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಅರುಂಧತಿ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವದ ಇಪ್ಪತ್ತನೆ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಭಾಗವಹಿಸಿ ಮಾತನಾಡಿ, ದೇಶ ಕಾಯುವ ನಮ್ಮ ಸೈನಿಕರಿಂದ ದೇಶದ ಎಲ್ಲರು ನೆಮ್ಮದಿಯಿಂದ ಜೀವನ ನಡೆಸಲು ಕಾರಣವಾಗಿದೆ. ಅದರಂತೆ ದೇಶದೊಳಗಿನ ಸೈನಿಕರಂತೆ ಎಬಿವಿಪಿಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ದೇಶದ ಯೋಧರೆ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಭಾಗವಹಿಸಿದ್ದ ಯೋಧ ಸಂದೀಪ ಮೇದಾ ಮಾತನಾಡಿ,ನನ್ನ ತಾಯಿ ಭಾರತ ಮಾತೆಯ ಸೇವೆಯನ್ನು ಮಾಡುವ ಕೆಲಸ ನಮಗೆ ಲಭಿಸಿರುವುದು ನನ್ನ ಪುಣ್ಯವಾಗಿದೆ.ಇಂದು ದೇಶದಲ್ಲಿಯ ಅನೇಕ ಯುವಕ ಮಿತ್ರರುಕೂಡ ಸೇನೆಯಲ್ಲಿ ಸೇವೆ ಸಲ್ಲಿಸಲು ಮುಂದು ಬರಬೇಕಿದೆ.ದೇಶ ಕಾಯುವುದಕ್ಕಿಂತ ದೊಡ್ಡ ಸೇವೆ ಮತ್ತೊಂದಿಲ್ಲ.ನನ್ನ ಈ ಸೇವೆಯನ್ನು ಗುರುತಿಸಿ ಇಂದು ಕಾರ್ಗಿಲ್ ವೀರ ಯೋಧರ ನೆನಹಿನಲ್ಲಿ ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಶರಣು ಚೆಟ್ಟಿ ಮಾತನಾಡಿ,ಕಾರ್ಗಿಲ್ ಯುಧ್ಧದಲ್ಲಿ ಅನೇಕ ಜನ ನಮ್ಮ ಸೇನಾನಿಗಳು ವೀರ ಮರವಣವನ್ನಪ್ಪುವ ಮೂಲಕ ನಮಗೆ ವಿಜಯ ತಂದು ಕೊಟ್ಟಿದ್ದಾರೆ.ಅಂತಹ ಎಲ್ಲಾ ಯೋಧರು ನಿತ್ಯ ಸ್ಮರಣಿಸಬೇಕು.ಅಲ್ಲದೆ ಪ್ರತಿಯೊಬ್ಬರೊಳಗು ಒಬ್ಬ ಯೋಧನಿರುತ್ತಾನೆ.ನಮ್ಮೊಳಗಿನ ಯೋಧನನ್ನು ದೇಶ ಪ್ರೇಮದ ಸ್ವಾಭಿಮಾನದಿಂದ ಬಡಿದೆಬ್ಬಿಸುವ ಮೂಲಕ ದೇಶ ಸೇವೆಗೆ ತೊಡಗಿಸಿಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ಯೋಧ ಸಂದೀಪ ಮೇದಾರಗೆ ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ ಬಣಗಾರ ಅಧ್ಯಕ್ಷತೆ ವಹಿಸಿದ್ದರು.ರಮೇಶ ಯಾದವ ನಿರೂಪಿಸಿದರು.ವರುಣ ಸ್ವಾಗತಿಸಿದರು,ಕ್ಯಾತಪ್ಪ ಮೇದಾ ವಂದಿಸಿದರು.ಶಂಕರ,ಶ್ರೇಯಸ್,ದೇವಮ್ಮಾ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ ವರ್ಗ ಹಾಗು ವಿದ್ಯಾರ್ಥಿಗಳಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

16 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago