ಬಿಸಿ ಬಿಸಿ ಸುದ್ದಿ

ಹಿಂದು ಮುಸ್ಲಿಂರ ಭಾವೈಕ್ಯತೆಯ ಸಂಕೇತ ಚಿತಾಶಾವಲಿ ದರ್ಗಾದ ೭೯೫ ನೇ ಉರುಸ್:

ಚಿತ್ತಾಪುರ: ಇಲ್ಲಿಯ ಪಟ್ಟಣದ ಹೊರವಲಯ ಬಾಹರಪೇಠದಲ್ಲಿರುವ ಸೂಫಿ ಸಂತ ಚಿತಾಶಾವಲಿ ದರ್ಗಾ ಹಿಂದು ಮುಸ್ಲಿಂ ಭಾವೈಕತೆ ೭೯೫ನೇ ಉರಸು ಬುಧವಾರ ಇಂದಿನಿಂದ ಆರಂಭವಾಗಲಿದೆ.

ಜೂನ ೨೨ರಂದು ಜಾತ್ರೆ (ಉರುಸ್) ಆರಂಭಗೊಳ್ಳಲಿದೆ. ಬೆಳಗ್ಗೆ ೧೦ಕ್ಕೆ ಇಲ್ಲಿಯ ನಾಗಣ್ಣ ಮಾಸ್ತರ ಬಳ್ಳಾ ಮನೆಯಲ್ಲಿ ಚಿತಾಶಾವಲಿಗೆ ಹೊದಿಕೆ (ಗಲಾಫ್) ಹಾಗೂ ಅವರ ಮನೆಯಲ್ಲಿರುವ ಚಿತಾಶಾವಲಿಗೆ ಮೌಲ್ವಿಗಳಿಂದ ವಿಶೇಷ ಫಾತೇಹ(ಪ್ರಾರ್ಥನೆ)ಗಂಧ ಲೇಪನ ಜರುಗುತ್ತದೆ. ಚಿತಾಶಾವಲಿ ಭಕ್ತರ ಪರವಾಗಿ ಬಳ್ಳಾನವರು ಮಾಲದಿ ರೊಟ್ಟಿ ಪ್ರಸಾದವನ್ನು ಸಿದ್ದಪಡಿಸಿ ಮೌಲ್ವಿಗಳಿಗೆ ಹಾಗೂ ಭಕ್ತಾಧಿಗಳಿಗೆ ವಿಶೇಷ ಪ್ರಸಾದ ನಡೆಯುತ್ತದೆ.

ರಾತ್ರಿ ಜಿತಾಶಾವಲಿ ದರ್ಗಾಕ್ಕೆ ಹೊದಿಕೆ (ಗಲಾಪ್) ಗಂಧದ ಮೆರವಣಿಗೆಯು ನಾಗಣ್ಣಾ ಬಳ್ಳಾ ಮಾಸ್ತರ ಮನೆಯಿಂದ ಹೊರಟು ಸೈಯದ್ ಮಿನಾಜೋದ್ದಿನ್ ಚಿಸ್ತಿ ಮುತಾವಲಿ ಮನೆಗೆ ತಲುಪುತ್ತದೆ.

ಮುತವಲಿ ಮನೆಯಿಂದ ರಾತ್ರಿ ೧೦ಕ್ಕೆ ಗಂಧದೊಂದಿಗೆ ಗಲಾಫ್ ಹೊತ್ತ ಕುದುರೆ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಾಹರಪೇಠನಲ್ಲಿರುವ ಚಿತಾಶಾವಲಿ ದರ್ಗಾಕ್ಕೆ ಬೆಳಗಿನ ಜಾವ ತಲುಪಿ ದರ್ಗಾಕ್ಕೆ ಗಂಧ ಲೇಪನ, ತಬರುಕ ವಿತರಣೆ ಮಾಡಲಾಗುತ್ತದೆ.
ಮೆರವಣಿಗೆ ಉದ್ದಕ್ಕೂ ಭಕ್ತರು ದಾರಿಯೂದ್ದಕ್ಕೂ ಪೂಜೆ ಸಲ್ಲಿಸುತ್ತಾರೆ. ಮೌಲ್ವಿಗಳು, ಭಕ್ತಿಗಾಯನ, ಮಲ್ಲಕಂಬ, ಕಟ್ಟಗೆಯಾಟ, ನೌಬಾತ್ ವಾದ್ಯಗಳು ಒಂಟೆ ಮೆರವಣಿಗೆಯಲ್ಲಿ ನೋಡುಗರ ಕಣ್ಮನ ಸೆಳೆಯುತ್ತವೆ.

೨೩ರಂದು ಗುರುವಾರ ಬೆಳಗ್ಗೆಯಿಂದ ಹಿಂದೂ ಮುಸ್ಲಿಂ ಭಕ್ತರು ದರ್ಗಾಕ್ಕೆ ಮಾಲದಿ ನೈವೈಧ್ಯ ಕೊಟ್ಟು ಮೌಲ್ವಿಗಳಿಗೆ ಊಟ ಮಾಡಿಸಿ ಹರಕೆ ತಿರಿಸುತ್ತಾರೆ. ರಾತ್ರಿ ದರ್ಗಾದ ಆವರಣದಲ್ಲಿ ದೀಪೋತ್ಸವ ಜರುಗಲಿದೆ. ರಾತ್ರಿ ೧೦ ಕ್ಕೆ ಖ್ಯಾತ ಗಾಯಕರಿಂದ ಕವಾಲಿ, ಭಜನೆ, ಗೀಗೀ ಪದಗಳು ಜರುಗಲಿದೆ.

೨೪ರಂದು ಶುಕ್ರವಾರ ಫಾತೇಹಾ, ವಿವಿಧ ಆಟಗಳು, ಖವಾಲಿ, ಗೀಗೀಪದಗಳು ನಡೆಯಲಿವೆ. ಈ ಜಾತ್ರೆಗೆ ಹಿಂದೂ ಮನೆಯಿಂದ ಗಲಾಪ್ ಮೆರವಣಿಗೆ ಹೊಗುವದು. ಹಿಂದು, ಮುಸ್ಲಿಮರು ನೈವೈಧ್ಯ ಸಲ್ಲಿಸುವರು. ಇದು ಹಿಂದು ಮುಸ್ಲಿಂರ ಭಾವೈಕತೆಯ ಸಾಮರಸ್ಯದ ಸಂಕೇತವಾಗಿದೆ.

ಇಲ್ಲಿಯ ಹಿಂದು ಮುಸ್ಲಿಂ ಭಕ್ತರು ಪ್ರತಿ ಸೋಮವಾರ, ಗುರುವಾರ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಈ ಜಾತ್ರೆ ಹಿಂದೂ, ಮುಸ್ಲಿಂರ ಕೋಮು ಸೌಹಾರ್ದತೆಯ ಸಾಮರಸ್ಯದ ಪ್ರತೀಕವಾಗಿದೆ. ಈ ಜಾತ್ರೆಗೆ ಹೈದ್ರಾಬಾದ, ಮುಂಬಯಿ, ಕೋಲ್ಕತ್ತಾ, ಪುಣೆ ವಿವಿಧ ನಗರಗಳಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.

ಕಳೆದ ಎರಡು ವರ್ಷದಿಂದ ಕರೋನಾದಿಂದಾಗಿ ಸರಳರೀತಿಯಲ್ಲಿ ಉರುಸ್ ಆಚರಿಸಲಾಗುತ್ತಿತ್ತು. ಈಗ ಕರೋನಾ ಸ್ವಲ್ಪ ರಿಲ್ಯಾಕ್ಸ್ ನೀಡಿರುವುದರಿಂದ ಉರುಸ್‌ಗೆ ಮೆರಗು ಬರಲಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago