ಬಿಸಿ ಬಿಸಿ ಸುದ್ದಿ

ಯೋಗದಿಂದ ಆರೋಗ್ಯ ಶ್ರೀಮಂತಿಕೆ: ವೀರಭದ್ರಪ್ಪ

ವಾಡಿ: ರೋಗ ಬಂದ ನಂತರ ಯೋಗಾಭ್ಯಾಸ ಮಾಡುವುದಕಿಂತ, ರೋಗ ಬರುವ ಮೊದಲೇ ಯೋಗಾಸನಕ್ಕೆ ಆಧ್ಯತೆ ನೀಡುವುದಾದರೆ ಆರೋಗ್ಯ ಶ್ರೀಮಂತಿಕೆ ಮೆರೆಯಬಹುದು ಎಂದು ಶಿಕ್ಷಕ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ ಆರ್.ಕೆ ಹೇಳಿದರು.

ವಿಶ್ವ ಯೋಗದಿನ ಪ್ರಯುಕ್ತ ಪಟ್ಟಣದ ಎಸಿಸಿ ಉದ್ಯಾನವನದಲ್ಲಿ ಬೆಳಗಿನ ಬಳಗ, ಪತಂಜಲಿ ಯೋಗ ಸಮಿತಿ, ಎಸಿಸಿ ಕಾರ್ಖಾನೆ ಹಾಗೂ ಪುರಸಭೆ ಆಡಳಿತದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಯೋಗಾಭ್ಯಾಸ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯೋಗಾಸನದಿಂದ ದೈಹಿಕ ಆರೋಗ್ಯ ಚೈತನ್ಯಶೀಲವಾಗಿಡಲು ಸಾಧ್ಯವಿದೆ. ಮಾನಸಿಕ ಒತ್ತಡದಿಂದ ದೂರವಿರಲು ಪ್ರಾಣಾಯಮ, ವಜ್ರಾಸನ, ಭುಜಂಗಾಸನ, ಹಾಸ್ಯಾಸನ ಉಪಯೋಗಕಾರಿಯಾಗಿವೆ. ಯಾವೂದೇ ವಯಸ್ಸಿನವರು ಮಾಡಬಹುದಾದ ಯೋಗವನ್ನು ದಿನದ ವ್ಯಾಯಾಮದ ಭಾಗವಾಗಿ ಸ್ವೀಕರಿಸಬೇಕು. ಯುವಜನರು ಇಂದು ಹೆಚ್ಚು ಒತ್ತಡಕ್ಕೊಳಗಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಜೀವನಕ್ರಮ ಪೌಷ್ಠಿಕ ಆಹಾರದಿಂದ ವಂಚಿತವಾಗಿದೆ. ಕ್ರೀಯಾಶೀಲತೆಯ ಕೊರತೆ ಎದ್ದು ಕಾಣುತ್ತಿದೆ. ಯೋಗವನ್ನು ಯೋಗ ದಿನದಂದೇ ಮಾಡದೇ ದಿನವೂ ಇದನ್ನು ರೂಢಿಸಿಕೊಳ್ಳಬೇಕು ಎಂದರು.

ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಮಾತನಾಡಿ, ಬದುಕಿನ ಜಂಜಾಟದಲ್ಲಿ ಮಾನಸಿಕ ಹಿಂಸೆಗೊಳಗಾಗಿರುವ ಪ್ರತಿಯೊಬ್ಬ ಹೆಣ್ಣು ಗಂಡು ಯೋಗಾಸನದ ಮೊರೆ ಹೋಗಬೇಕು. ಧ್ಯಾನದಿಂದ ಮನಸ್ಸಿನ ರೋಗ ನಿವಾರಣೆಯಾಗುತ್ತದೆ. ಯೋಗದ ಒಂದೊಂದು ಭಂಗಿಯೂ ಒಂದೊಂದು ರೋಗಕ್ಕೆ ಮದ್ದಾಗಿದೆ ಎಂದರು. ಎಸಿಸಿಯ ಭದ್ರಾತಾಧಿಕಾರಿ ವೈಜನಾಥ ಹಿರಗೆ, ಯೋಗ ಶಿಕ್ಷಕರಾದ ನಮ್ರತಾ ಅಶೋಕ ಪವಾರ, ರಾಜೀವ್ ಪಾಂಡೆ, ಬೆಳಗಿನ ಬಳಗದ ವಿ.ಕೆ.ಕೆದಿಲಾಯ, ಮಡಿವಾಳಪ್ಪ ಹೇರೂರ, ಪ್ರಕಾಶ ಚಂದನಕೇರಿ, ಭೀಮಶಾ ಜಿರೊಳ್ಳಿ, ಶರಣಗೌಡ ಚಾಮನೂರ, ನಾಗೇಂದ್ರ ಜೈಗಂಗಾ, ಡಾ.ಗೋವಿಂದ ಎಲ್.ನಾಯಕ, ಮುಖಂಡರಾದ ಮಲ್ಲಿಕಾರ್ಜುನ ಕರಗಾರ, ಜೋ.ಮ.ಜಯದೇವ, ಶಾಂತಪ್ಪ ಸಾಹು ಅಳ್ಳೊಳ್ಳಿ, ವಿಠ್ಠಲ ನಾಯಕ, ಕಾಶೀನಾಥ ಶೆಟಗಾರ, ಹರಿ ಗಲಾಂಡೆ, ಭೀಮರಾವ ದೊರೆ, ನಾಗರಾಜ ಗೌಡಪ್ಪನೋರ, ರವಿಕುಮಾರ ರದ್ದೇವಾಡಗಿ, ಜಿ.ಕೆ.ಇಂದಿರಾ, ಮಲ್ಲಯ್ಯಸ್ವಾಮಿ ಮಠಪತಿ, ಅಮೃತಪ್ಪ ದಿಗ್ಗಾಂವ, ವಿಶ್ವವರಾಧ್ಯ ಗುತ್ತೇದಾರ, ವೆಂಕಟೇಶ ದೇವದುರ್ಗ, ರಾಜೇಶ ಅಗರವಾಲ, ರಾಜು ಒಡೆಯರಾಜ, ಅನಿತ್ ಅಗರವಾಲ ಸೇರಿದಂತೆ ನಗರದ ನಾಗರಿಕರು ಹಾಗೂ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago