ನಮ್ಮ ಸಮಾಜ ಇಂದು ವಿಷದಿಂದ ಕೂಡಿದೆ.ಅನೇಕ ಸಾಮಾಜಿಕ ಕಾಯಿಲೆಗಳ ಸರಮಾಲೆ ಯಾಗಿದೆ. ಸ್ವಾತಂತ್ರ್ಯ ಸಿಕ್ಕು ವರ್ಷಗಳೇ ಆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮಾತ್ರ ಸಹಸ್ರಾರು ಕೋಟಿಗಳ ಒಡೆಯರಾಗುತ್ತಿದ್ದಾರೆ. ಪಕ್ಷ ರಾಜಕೀಯ ಅಂತು ಕೇಳಲೇ ಬಾರದು ಅದು ಅಂತು ಕೆಟ್ಟು ನಿಂತಿದೆ. ಇಂದು ವಿದ್ಯೆ ಎಂಬುದು ಮಾರಾಟದ ವಸ್ತುವಾಗಿದೆ.
ಶಾಸಕರು, ಮಂತ್ರಿಗಳಿಂದ ಹಿಡಿದು ಪಂಚಾಯ್ತಿ ಸದಸ್ಯರವರೆಗೆ ದುರ್ಲಾಭಕ್ಕೋಸ್ಕರ ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇವರಷ್ಟೇ ಅಲ್ಲದೆ ಮಠಾಧಿಪತಿಗಳೂ ಈ ಸ್ಪರ್ಧೆಯಲ್ಲಿದ್ದಾರೆ. ವಿದ್ಯೆ ಪಡೆದವರು ಮೂಕ ಪ್ರೇಕ್ಷಕರಂತೆ ಇಂದಿನ ಯುವಕರು ನೋಡಿಕೊಂಡು ಸುಮ್ನೆ ಕುಳಿತಿದ್ದಾರೆ.ಒಂದು ಕಡೆ ಹೇಳುವರು ಅದೇನೆಂದರೆ ನಮ್ಮದು ಪ್ರಜಾರಾಜ್ಯ, ಪ್ರಜೆಗಳೇ ನಮ್ಮ ದೇಶದ ಪ್ರಭುಗಳು ಎಂದು ನಮ್ಮ ರಾಜ್ಯಾಂಗ ಹೇಳುತ್ತದೆ. ಆದರೆ ನಾವು ಮಾತ್ರ ಆಡಳಿತಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೇನೋ ಎಂಬಂತೆ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಮನೋಭಾವ ಇಂದಿನ ಯುವಕರಿಗೆ ತರವಲ್ಲ ಎಂಬುದು ತಿಳಿದುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಗಾಢನಿದ್ರೆಯಲ್ಲಿರುವ ಯುವಕರು ಜಾಗೃತರಾಗಿ ದೇಶದ ಸಮಸ್ಯೆಗಳನ್ನೆಲ್ಲ ಒಂದೊಂದಾಗಿ ಬಗೆಹರಿಸಲು ಮುಂದಾಗಬೇಕು.ಅದನ್ನು ಮಾಡುವ ಮೊದಲು ನಾವುಗಳು ಅಂದ್ರೆ ಯುವಜನತೆ ದೇಶದ ಇಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಬದಲಾವಣೆಗೆ ಸಂಘಟಿತರಾಗಿ ಹೋರಾಡಬೇಕು. ಯುವಕರು ನಮ್ಮ ಆಶಾಕಿರಣ ಎಂಬ ಮಾತು ನಾವೆಲ್ಲರೂ ಸೇರಿ ನಿಜಮಾತನ್ನಾಗಿಸೋಣ.
ಪ್ರಸ್ತುತ ದಿನಗಳಲ್ಲಿ ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳಿವು :-
ಇದರ ಪರಿಣಾಮವಾಗಿ ದುಡ್ಡಿನ ಸಮಸ್ಯೆ ಎದುರಿಸುವವರು, ಶ್ರಮ ಪಟ್ಟು ಓದುವವರು ಬೇಸತ್ತು ನಿರಾಶೆಯಾಗುತ್ತಿದ್ದಾರೆ. ಇಂತಹ ಹತ್ತು ಹಲವು ಸಮಸ್ಯೆಗಳು ಪ್ರಾಮಾಣಿಕವಾಗಿ, ಶ್ರದ್ದೆ ಯಿಂದ ಓದುವ ವಿದ್ಯಾರ್ಥಿಗಳಲ್ಲಿ ಓದುವ ಆಶೆಯನ್ನು ನಿರಾಸೆಗೊಳಿಸುವಂತೆ ಮಾಡುತ್ತಿವೆ. ಮೊದಲು ಈ ಸಮಸ್ಯೆಗಳನ್ನು ಬಗೆ ಹರಿಸಲು ಯುವಕರು ತೊಡಗಬೇಕು.
ಸಮಾಜದಲ್ಲಿ ಮೌಲ್ಯಗಳ ಪತನವೇ ಇಂದಿನ ನಮ್ಮ ಈ ಅಧೋಗತಿಗೆ ಕಾರಣವಾಗಿದೆ.ಮಾನವೀಯ ಮೌಲ್ಯಗಳಾದ ಸೋದರತ್ವ, ನಾವು ನಮ್ಮವರು ಎಂಬ ಭಾವನೆ,ಸಮಾನತೆಗಳ ಆಧಾರದ ಮೇಲೆ ನಮ್ಮ ಸಮಾಜ ರೂಪಿತವಾಗಬೇಕು. ಜಾತಿ, ಧರ್ಮಗಳನ್ನು ರಾಜಕೀಯಕ್ಕೆ ಬೆರೆಸಬಾರದು. ಭಾವೈಕ್ಯತೆಯಿಂದ ಕೂಡಿ ಬಾಳಬೇಕು. ಪ್ರಸ್ತುತ ದಿನಗಳಲ್ಲಿ ಸಮಾಜ ಎಂಬುದು ಪೂರ್ತಿ ಕೆಟ್ಟುಹೋಗಿದೆ.ಸರ್ಕಾರ ನಡೆಸುವವರು ಭ್ರಷ್ಟರಾಗಿದ್ದಾರೆ, ಸರ್ಕಾರಿ ಅಧಿಕಾರಿಗಳು ಲಂಚಕೋರರು. ಇವುಗಳನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತಿದ್ದಾರೆ ಯುವಜನತೆ.
ಸಮಾಜದಲ್ಲಿ ತಾಂಡವವಾಡುತ್ತಿರುವ ಬಡತನ, ಭ್ರಷ್ಟಾಚಾರ, ಭಯೋತ್ಪಾದನೆ, ಅನಾಚಾರ, ಅಸಮಾನತೆ, ನಿರುದ್ಯೋಗ, ದೌರ್ಜನ್ಯ, ದಬ್ಬಾಳಿಕೆಗಳನ್ನು ನಿಯಂತ್ರಿಸಬೇಕಾಗಿದೆ. ನಶಿಸಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಉಳಿಸಬೇಕಾಗಿರುವ ಜವಾಬ್ದಾರಿ ನಮ್ನೆಲ್ಲರದಾಗಿದೆ. ಇಂದಿನ ಸಮಾಜದ ಸ್ಥಿತಿಯೇ ಮುಂದುವರೆದರೆ ಮುಂದಿನ ಮಕ್ಕಳು ತಮ್ಮ ಸುಂದರ ಭವಿಷ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಹಿರಿಯರು ಹಾಕಿಕೊಟ್ಟಿರುವ ಅಡಿಪಾಯವನ್ನು ನಾವು ಮುಂದಿನ ಜನಾಂಗಕ್ಕೆ ಉಳಿಸಿಕೊಡಬೇಕಿದೆ. ಆದ್ದರಿಂದ ಸಮಾಜವನ್ನು ತಿದ್ದಲು ಯುವಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…