ಬಿಸಿ ಬಿಸಿ ಸುದ್ದಿ

4 ಕೋಟಿ ರು ವೆಚ್ಚದಲ್ಲಿ ಜೇವರ್ಗಿ ಕ್ರೀಡಾಂಗಣ ಸಜ್ಜು: ಆಗಸ್ಟ್ 15 ಕ್ಕೆ ಲೋಕಾರ್ಪಣೆಗೆ ಸಾಗಿದೆ ಭರದ ಸಿದ್ಧತೆ

ಕಲಬುರಗಿ: ಜಿಲ್ಲೆಯಲ್ಲಿರುವ ತಾಲೂಕುಗಳ ಪೈಕಿ ಇದೇ ಮೊದಲ ಬಾರಿಗೆ ಜೇವರ್ಗಿಯಲ್ಲಿ ಅಂತರಾಷ್ಟ್ರೀಯ ಮಾನದಂಡಗಳನ್ವಯ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ಕ್ರೀಡಾಂಗಣ ಕಾಮಗರಿಗಳು ಕೊನೆಯ ಹಂತ ತಲುಪಿವೆ. ಈ ಕ್ರೀಡಾಂಗಣವನ್ನು ಆಗಸ್ಟ್ 15 ರ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಕಾಮಗಾರಿಗಳು ಪ್ರಗತಿಯಲ್ಲಿರುವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಡಾ. ಅಜಯ್ ಸಿಂಗ್ ಅಳಿದುಳಿದ ಕಾಮಗಾರಿಗಳನ್ನೆಲ್ಲ ಬೇಗನೆ ಪೂರ್ಣಗೊಳಿಸುವಂತೆ ಪಿಡಬ್ಲೂಡಿ, ಪುರಸಭೆ, ತಾಪಂ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟಂತಹ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರಲ್ಲದೆ ಯಾವುದೇ ಸಂದರ್ಭದಲ್ಲೂ ಆ. 15 ರಂದೇ ಕ್ರೀಡಾಂಗಣ ಉದ್ಘಾಟನೆ ನಡೆಸಲಾಗುತ್ತದೆ. ಅಷ್ಟರೊಳಗಾಗಿ ಅಳಿದುಳಿದ ಕಾಮಗಾರಿಗಳನ್ನೆಲ್ಲ ಪೂರೈಸಿ ಕ್ರೀಡಾಂಗಣ ಯುವಕರಿಗೆ ಆಟೋಟಕ್ಕೆ ನೀಡುವಂತಾಗಬೇಕು ಎಂದು ಹೇಳಿದ್ದಾರೆ.

8 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಕ್ರೀಡಾಂಗಣ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್, ಕೊಕ್ಕೊ, ವ್ಹಾಲಿಬಾಲ್, ಕಬಡ್ಡಿ ಆಟದ ಪ್ರತ್ಯೇಕ ಮೈದಾನಗಳು, ಅತ್ಯಾಧುನಿಕ ಜಿಮ್ ಕೇಂದ್ರ, ಬಾಸ್ಕೆಟ್ ಬಾಲ್ ಮೈದಾನ, ಕ್ರಿಕೆಟ್ ಮೈದಾನ, ಹುಲ್ಲುಗಾವಲು, ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳನ್ವಯದ ಈಜುಕೊಳ ಹೊಂದಿರಲಿದೆ. ಈಜುಕೊಳ ಹೊರತುಪಡಿಸಿ ಈಗಾಗಲೇ ಕ್ರೀಡಾಂಗಣದ ಉಳಿದೆಲ್ಲ ಕಾಮಗಾರಿಗಳು ಕೊನೆ ಹಂತದಲ್ಲಿವೆ. ಇಡೀ ಕ್ರೀಡಾಂಗಣಕ್ಕೆ ಅ್ಯಧುನಿಕ ಕ್ಯಾನೋಪಿ ಆಸರೆ ಇರಲಿದೆ, ಇದಲ್ಲದೆ ಗಣ್ಯರಿಗಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದೆ.

ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ಯ್ರಾಕ್ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಪ್ರಖರ ಬೆಳಕಿನ ವ್ಯವಸ್ಥೆಯೂ ಇರುತ್ತದೆ. ಕ್ರೀಡಾಂಗಣವೂ ಮುಖ್ಯ ಪೆವಿಲಿಯನ್‍ನಲ್ಲಿ 3 ಕೆನಾಪಿ ಗಳನ್ನು ಹೊಂದಲಿದೆ. ಆ. 10 ರೊಳಗಾಗಿ ಎಲ್ಲಾ ಕಾಮಗಾರಿಗಳು ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಡೀ ಕ್ರೀಡಾಂಗಣಕ್ಕೆ ಆವರಣ ಗೋಡೆ ನಿರ್ಮಿಸಲು ಉz್ದÉೀಶಿಸಲಾಗಿದೆ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಕ್ರೀಡಾಂಗಣಕ್ಕೆ ಪ್ರವೇಶಕ್ಕಿರುವ 5 ದ್ವಾರಗಳು, ಆವರಣ ಗೋಡೆ, ಪ್ರಖರ ದೀಪದ ವ್ಯವಸ್ಥೆಯ ಕಾಮಗಾರಿಗಳನ್ನೂ ಬೇಗ ಮಾಡಿ ಮುಗಿಸಲು ಸೂಚಿಸಲಾಗಿದೆ. ಇಡೀ ಕ್ರೀಡಾಂಗಣ 4 ಕೋಟಿ ರು ವೆಚ್ಚದಲ್ಲಿ ತಲೆ ಎತ್ತುತ್ತಿದೆ. ನೀರಿನ ಸವಲತ್ತಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ. ಮುಖಂಡರಾದ ರಾಜಶೇಖರ ಸಿರಿ, ವಿವಿಧ ಇಲಾಖೆ ಅಧಿಕಾರಿಗಳು, ಕ್ರೀಡಾ ಪಟುಗಳು, ಜೇವರ್ಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago