ಶಹಾಬಾದ: ಅರಮನೆಯಲ್ಲಿದ್ದು ಸಾಧನೆ ಮಾಡುವುದಕ್ಕಿಂತ ಗುಡಿಸಲಿನಲ್ಲಿ ಬೆಳೆದು ಬಡತನದಲ್ಲಿಯೇ ಸಾಧನೆ ಮಾಡುವುದೇ ನಿಜವಾದ ಸಾಧನೆ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಶುಕ್ರವಾರ ನಗರದ ಮರಗೋಳ ಕಾಲೇಜಿನಲ್ಲಿ ಕಸಾಪ ತಾಲೂಕಾ ಘಟಕದ ವತಿಯಿಂದ ಪ್ರಸಕ್ತ ವರ್ಷದ ಹತ್ತನೇ ತರಗತಿ ಹಾಗೂ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದಾಘಟಿಸಿ ಮಾತನಾಡಿದರು.
ಅಂತಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದರ ಜತೆಗೆ ಬೆನ್ನು ತಟ್ಟಿ ಇನ್ನೂ ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಹಾಗೂ ಸಮಾಜದಲ್ಲಿ ಅವರು ಮಾಡಿದ ಕಾರ್ಯವನ್ನು ತೋರಿಸುವ ಕೆಲಸ ಕಸಾಪದಿಂದ ನಡೆದಿರುವುದು ಶ್ಲಾಘನೀಯ ಕಾರ್ಯ. ಈ ವಿದ್ಯಾರ್ಥಿಗಳು ಕುಟುಂಬದ ಆಸ್ತಿಗಳಲ್ಲ.ಇವರು ಸಮಾಜದ ಆಸ್ತಿ. ಅಲ್ಲದೇ ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಹೆಚ್ಚು ಕಲಿಕೆಗೆ ಸಹಕಾರಿಯಾಗುತ್ತದೆ.
ಅಲ್ಲದೇ ಜೀವನದಲ್ಲಿ ಅತಿ ಬೇಗ ಯಶಸ್ವಿಯಾಗಲು ಸಾಧ್ಯ.ರಾಷ್ಟ್ರಕವಿ ಕುವೆಂಪು ಅವರು ಮೊದಲು ಇಂಗ್ಲೀಷ ಕವಿತೆಗಳನ್ನು ಬರೆಯುತ್ತಿದ್ದರು.ತದನಂತರ ಕನ್ನಡ ಬರೆಯಲು ಪ್ರಾರಂಭ ಮಾಡಿ, ಕನ್ನಡದ ಪ್ರಥಮ ಜ್ಞಾನಪೀಠ ಪ್ರಶ್ತಿ ಪಡೆದ ಮೊದಲಿಗರಾದರು.ಅವರು ಕನ್ನಡಕ್ಕೆ ಕೊಟ್ಟ ಅಮೂಲಾಗ್ರ ಕೊಡುಗೆ ಮರೆಯುವಂತಿಲ್ಲ .ಕಸಾಪದವರು ಸಮಾಜಮುಖಿ ಕಾರ್ಯದ ಮೂಲಕ ಕಮರಿ ಹೋಗುವ ಹಾಗೂ ಸಾಧನೆ ಮಾಡಿದ ಪ್ರತಿಭೆಗಳಿಗೆ ನೀರೆರುಯುವ ಕೆಲಸ ಮಾಡುತ್ತಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾಧನೆ ಮಾಡಿದ ಪ್ರತಿಭೆಗಳನ್ನು ಅವರ ಪಾಲಕರ ಹಾಗೂ ಶಿಕ್ಷಕರ ಸಮ್ಮುಖದಲ್ಲಿಯೇ ಸನ್ಮಾನ ಮಾಡುತ್ತಿರುವುದು ಇದೊಂದು ಜೀವಂತವಾಗಿರುವ ಸನ್ನಿವೇಶ.ಕನ್ನಡ ಅತ್ಯಂತ ಶ್ರೀಮಂತಿಕೆಯನ್ನು ಹೊಂದಿದ ಭಾಷೆ.ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಭಾಷೆಗಿದೆ ಎಂದರು.
ತಾಪಂ ಇಓ ಬಸಲಿಂಗಪ್ಪ ಡಿಗ್ಗಿ ಮಾತನಾಡಿ, ಕನ್ನಡದ ಬಗ್ಗೆ ಕೀಳಿರಿಮೆ ಪಡದೇ ಕನ್ನಡದಲ್ಲಿಯೇ ಪ್ರಭುತ್ವ ಸಾಧಿಸಬಹುದು.ಅಲ್ಲದೇ ಯಾರು ಮಹಾನ್ ಸಾಧಕರಾಗಿದ್ದಾರೆ ಅವರ ಜೀವನ ಬಹಳ ಶ್ರಮದಿಂದ ಕೂಡಿದೆ ಎಂಬುದು ಮರೆಯಬಾರದು.ಸಾಧನೆಗೆ ಪರಿಶ್ರಮ ಮುಖ್ಯ.ಆದ್ದರಿಂದ ವಿದ್ಯಾರ್ಥಿಗಳು ಯಾವಗಲೂ ಪ್ರತ್ನಶೀಲರಾಗಬೇಕೆಂದು ತಿಳಿಸಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಕಸಾಪ ತಾಲೂಕಾಧ್ಯಕ್ಷ ಅಧ್ಯಕ್ಷ ಶರಣಬಸಪ್ಪ ಕೋಬಾಳ ಮಾತನಾಡಿದರು.ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ,ಹೈ.ಕ.ಶಿ.ಸಂ.ಸದಸ್ಯ ಅನೀಲಕುಮಾರ ಮರಗೋಳ, ಕ.ರಾ.ಸ.ನೌ.ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ,ಯಶ್ವಂತರಾವ ಅಷ್ಟಗಿ, ಪ್ರಾಂಶುಪಾಲ ಅನೀಲಕುಮಾರ ಕೊಪ್ಪಳಕರ್,ಜಿಲ್ಲಾ ಖಜಾಂಚಿ ಶರಣರಾಜ ಚಪ್ಪರಬಂಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ವೇದಿಕೆಯ ಮೇಲಿದ್ದರು.
ಲೋಹಿತ್ ಕಟ್ಟಿ ನಿರೂಪಿಸಿದರು,ಬಸವರಾಜ ಮದ್ರಿಕಿ ಸ್ವಾಗತಿಸಿದರು, ರಾಜು ಕೋಬಾಳ,ದಶರಥ ಕೋಟನೂರ್ ಹಾಗೂ ಭಾವನಾ ನಾಡಗೀತೆ ಹಾಡಿದರು, ಶರಣು ವಸ್ತ್ರದ್ ವಂದಿಸಿದರು.
ಈ ಸಂದರ್ಭದಲ್ಲಿಕಸಾಪ ಪದಾಧಿಕಾರಿಗಳಾದ ವಿಜಯಕುಮಾರ ಮುಟ್ಟತ್ತಿ, ಶರಣಗೌಡ ಪಾಟೀಲ,ಕನಕಪ್ಪ ದಂಡಗುಲಕರ್, ನಾಗಣ್ಣ ರಾಂಪೂರೆ, ಅಶೋಕ ಇಂಗಿನಶೆಟ್ಟಿ, ಬಾಬುರಾವ್ ಪಂಚಾಳ, ಕಸಾಪ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ,ಮಹ್ಮದ್ ಅಜೀಮ್, ಉಪನ್ಯಾಸಕ ಮಹ್ಮದ್ ಇಫಾ೯ನ, ಮಲ್ಲಿಕಾರ್ಜುನ ಇಟಗಿ, ಗುರುಪ್ರಸಾದ್ ಕೋಬಾಳ, ರಾಜಶೇಖರ ದೇವರಮನಿ ಇತರರು ಇದ್ದರು.
ಬಡತನದಲ್ಲಿ ಓದಿ ಬೆಳೆದ ಪ್ರತಿಭಾವಂತ ಮಕ್ಕಳಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಅಂತಹ ಮಕ್ಕಳನ್ನು ಗುರುತಿಸಿ ಸಮಾಜದ ಜನರು ಅವರಿಗೆ ಸಹಾಯಹಸ್ತ ಚಾಚಿದರೇ ಅವರ ಬದುಕು ಉಜ್ವಲವಾಗುತ್ತದೆ.ಮುಂದೆ ಉತ್ತಮ ಸಾಧನೆ ಮಾಡಿ ನಾಲ್ಕಾರು ಪ್ರತಿಭೆಗಳಿಗೆ ಸಹಾಯ ಮಾಡುವಂತರಾಗುತ್ತಾರೆ.ಇಂತಹ ಕಾರ್ಯಗಳಿಗೆ ಸಾರ್ವಜನಿಕರು ಮುಂದೆ ಬರಬೇಕಾಗಿದೆ-ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷೆ ನಗರಸಭೆ ಶಹಾಬಾದ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…