ಇಂದು ಜುಲೈ 26 2019 ಏಳು ವರ್ಷಗಳ ಹಿಂದೆ, ಇದೆ ದಿವಸ ಅಂದರೆ ಜುಲೈ 26 2012 ರಂದು ವಿಶ್ವಾರಾಧ್ಯ ಸತ್ಯಂಪೇಟೆ ಅವರ ತಂದೆಯ ಕೊಲೆಯಾದ ದಿನ, ಇಂದು ಅವರು ಬರೆದ
“ಅಪ್ಪನ ನೆನಪುಗಳು” ಪುಸ್ತಕ ನನ್ನ ಕೈಯಲ್ಲಿ .ಇತ್ತಿತ್ತಲಾಗಿ ಪುಸ್ತಕ ಓದುವದು ನನಗೆ ಉದಾಸಿನ,ಅನೇಕ ಪುಸ್ತಕಗಳನ್ನು ಕೊಳ್ಳುತ್ತೇನೆ. ಸಭೆ ಸಮಾರಂಭಗಳಲ್ಲಿ ಪುಸ್ತಕಗಳನ್ನು ಕಾಣಿಕೆಯಾಗಿ ನೀಡುತ್ತಾರೆ. ಅನೇಕ ಬಾರಿ ಮಧ್ಯದ ಒಂದೆರಡು ಪುಟ ಓದಿ ಪಕ್ಕಕ್ಕೆ ಸರಿಸುತ್ತೇನೆ. ಆದರೆ ಇಂದು ಪುಸ್ತಕವನ್ನು ನಾನು ೮ ಘಂಟೆ ೧೦ ನಿಮಿಷಕ್ಕೆ ಓದಲು ಕೈಗೆತ್ತಿಕೊಂಡೆ, ೧೬೦ ಪುಟಗಳ ಪುಸ್ತಕದ ಪುಟಗಳು ತಮ್ಮನ್ನು ತಾವೇ ತೆರೆದು ಕೊಳ್ಳುತ್ತಿದ್ದವು. ೧೦ಘಂಟೆ ೧೦ ನಿಮಿಷ ಕ್ಕೆ ಓದು ಮುಗಿಯಿತು, ಕೊನೆಯ ಅಧ್ಯಾಯ ಓದುವಾಗ ಕಣ್ಣಿರ ಹನಿಗಳು ! ಓಡುತ್ತಿರುವ ರೈಲಿನ ಮೊದಲ ದರ್ಜೆಯ ಹವಾ ನಿಯಂತ್ರಿತ ಬೋಗಿಯ ಮಲಗುವ ಹಾಸಿಗೆಯನ್ನು ಒದ್ದೆ ಮಾಡಿದವು. ಪುಸ್ತಕ ರಾತ್ರಿ ನಿದ್ದೆ ಗೆಡಿಸಿತು.
೨೦೧೨,ರಾತ್ರಿ ೧೦ ಗಂಟೆಯ ಸಮಯ, ಒಬ್ಬ ಅಸಹಾಯಕ ಯುವಕ ಕಾಣೆಯಾದ ತನ್ನ ತಂದೆಯನ್ನು ಕಲಬುರ್ಗಿ ನಗರದ ಗಲ್ಲಿ ಗಲ್ಲಿಗಳಲ್ಲಿ ಹುಡುಕುತ್ತಿದ್ದಾನೆ.ಅವನ ಮನದಲ್ಲಿ ಬೇಡ ಬೇಡ ವೆಂದರು ತನ್ನ ತಂದೆ ದಾರಿಯ ಹೆಣವಾಗಿರಬಹುದೆ ? ಎಂಬ ದುಗುಡ, ಅರ್ಧ ರಾತ್ರಿಯಾದರು ಸುಳಿವಿಲ್ಲ, ಮೋಬೈಲ್ ಸ್ವಿಚ್ ಆಫ್. ಸಂಬಂಧಿಗಳ ಮನೆಯಲ್ಲಿ ಒಂದೆರಡು ಗಂಟೆ ಸಮಾಲೋಚನೆ.ಕಾಣದ ತಂದೆಯ ಚಿಂತೆ, ನಿದ್ರೆ ದೂರ, ನಸುಕಿನ ನಾಲ್ಕು ಗಂಟೆಗೆ ಮತ್ತೆ ಮನೆಯವರೆಲ್ಲರಿಂದಲೂ ಹುಡುಕಾಟ ಪ್ರಾರಂಭ. ಕಾಣೆಯಾದ ತಂದೆಯ ಬಗ್ಗೆ ಪೋಲಿಸ್ ಸ್ಟೇಷನ್‌ನಲ್ಲಿ ಮಗನ ಕಂಪ್ಲೆಂಟ್, ಪೋಲಿಸಪ್ಪ ಅದನ್ನ ನೋಂದಣೆ ಮಾಡುವಾಗ ಲೇಖಕನ ತಮ್ಮನಿಂದ ದೂರವಾಣೆ ಕರೆ ” ಅಪ್ಪ ಕೊಲೆಯಾಗಿದ್ದಾನೆ ,ಅವನ ಶವ ಅಪ್ಪ ಶರಣ ಬಸಪ್ಪನ ದೇವಸ್ಥಾನದ ಎದುರು ಚರಂಡಿಯಲ್ಲಿ ಇದೆ, ದೆಹದ ಮೇಲೆ ಬಟ್ಟೆಗಳಿಲ್ಲ”. “ಅಣ್ಣಾ ಬಾ” ಎಂದು ಬಿಕ್ಕಳಿಸುತ್ತಾನೆ.
ಲೇಖಕ, ಅವನಪ್ಪ ಜೀವನದಲ್ಲಿ ಎಂದು ಕಾಣದ ದೇವರಿಗೆ ಕೈ ಮುಗಿದಿಲ್ಲ, ಬಸವಣ್ಣನೇ ತಂದೆ ಬಸವಣ್ಣನೇ ತಾಯಿ ಎಂದು ನಂಬಿದ ಬಸವ ಭಕ್ತನಿಗೆ ಶರಣ ಬಸಪ್ಪ ಎಂಬ ಶರಣ ಇಂದು ವೈದಿಕರ ದೇವರಾಗಿ ತನ್ನ ತತ್ವಗಳನ್ನು ಸಾರುವ ಜಂಗಮ, ತನ್ನ ಹಿಂಬಾಲಕ ಶರಣನನ್ನು ಶರಣಾಗತಿಗೆ ದೂಡಿದನೇ?. ಅನೇಕ ಬಾರಿ ಶರಣ ಬಸಪ್ಪನ ದೇವಸ್ಥಾನದ ಪೌಳಿಯಲ್ಲಿಯೇ ಸುತ್ತಾಡಿದರೂ ಅವನ ದರ್ಶನ ಮಾಡದ ವಿಶ್ವಾರಾಧ್ಯ ಹಾಗೂ ಅವನ ತಂದೆಯನ್ನು ತನ್ನದೆ ಕಂಪೌಂಡಿನ ಚರಂಡಿಯಲ್ಲಿ ಬತ್ತಲೆ ಮಲಗಿಸಿ ನಿರ್ದಯಿಯಾಗಿ ಕೊಂದನೇ? !!! (ಲಿಂಗಣ್ಣ ಸತ್ಯಂಪೇಟೆಯವರ ಬತ್ತಲೆ ಶವ ಅಂದು ಪತ್ತೆಯಾಯಿತು) ಅಪ್ಪಶರಣ ಬಸಪ್ಪ ತನಗೆ ಕೈ (ಶರಣಾಗದ) ಮುಗಿಯದ ಒಬ್ಬ ಭಕ್ತನನ್ನು ಈ ರೀತಿಯಾಗಿ ಶಿಕ್ಷಿಸಿದನೆ?ದೇವರೇ ಇಲ್ಲ ಎಂಬುವವನಿಗೆ ತನ್ನ ಅಸ್ತಿತ್ವನ್ನಲ್ಲದೆ ತಾನೇಷ್ಟು ಬಲಶಾಲಿ ಎಂಬುದನ್ನು ತೋರಿಸಿದನೆ ?
೦ ಜಿ.ಬಿ.ಪಾಟೀಲ ಬೆಂಗಳೂರು
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…