ಬಿಸಿ ಬಿಸಿ ಸುದ್ದಿ

ಸಾತ್ವಿಕ ರಾಜಕೀಯ ಹುಟ್ಟು ಹಾಕಿದ ಬಿ.ಎಂ. ಪಾಟೀಲ: ಶಾಸಕ ಎಚ್.ಕೆ. ಪಾಟೀಲ

ವಿಜಯಪುರ: ಎಲ್ಲ‌ ಮರಣಗಳಿಗೂ ಸ್ಮರಣೆ ಇರುವುದಿಲ್ಲ.‌ ಮರಣಕ್ಕೆ ಸಮಾಜ ಕೈ ಜೋಡಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ರಾಜಶೇಖರ ಮಠಪತಿ (ರಾಗಂ) ಅಭಿಪ್ರಾಯಪಟ್ಟರು.

ಬಿಎಲ್ ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಚಿಂತನ-ಸಾಂಸ್ಕೃತಿಕ ಬಳಗ ಬಂತನಾಳ ಸಂಗನಬಸವ ಶಿವಯೋಗಿ, ಬಿ.ಎಂ. ಪಾಟೀಲ, ಬಂಗಾರಮ್ಮ ಸಜ್ಜನ್ ಅವರ ಸ್ಮರಣೋತ್ಸವ ಅಂಗವಾಗಿ ಬಿಎಲ್ ಡಿ ವೈದ್ಯಕೀಯ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ ಜರುಗಿದ ‘ಬೆಳಕಿನ‌ ದಾರಿಯಲ್ಲಿ ಭಾರತದ ಬಾವುಟ’ ವಿಷಯ ಕುರಿತು ಮಾತನಾಡಿದ ಅವರು, ಬಿ.ಎಂ. ಪಾಟೀಲರು ಎಂ.ಬಿ. ಪಾಟೀಲ ಎಂಬ ಬಾವುಟವನ್ನು ಹಾರಿಸಿದ್ದಾರೆ ಎಂದು ಪಾಟೀಲರ ಕೆಲಸ ಕಾರ್ಯಗಳನ್ನು ಸ್ಮರಿಸಿದರು.

ಬಾವುಟದಲ್ಲಿ ನಾಲ್ಕು ಬಣ್ಣಗಳಿದ್ದರೂ ತಿರಂಗಾ ಧ್ವಜ ಎನ್ನುತ್ತೇವೆ. ಮಧ್ಯದ ಚಕ್ರದ ನೀಲಿ ಬಣ್ಣ ಎಣಿಸುವುದಿಲ್ಲ. ಗರಗದಲ್ಲಿ ಬಾವುಟದ ಬಟ್ಟೆ ನೇಯ್ಗೆ ಮಾಡಲಾಗುತ್ತದೆ.  -ರಾಗಂ

ಯಾವುದನ್ನು ಅಪಾರ್ಥ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಭಾರತದ ಬಾವುಟದ ಬಗ್ಗೆ ಮಾತನಾಡುವುದು, ತಿಳಿದುಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದರು. ಬುದ್ದನ ಕಾಲದಿಂದಲೂ ಬಾವುಟಗಳಿವೆ. ಅಶೋಕ ಕಲ್ಲಿನ ಬಾವುಟಗಳಲ್ಲಿ ಬುದ್ಧ ಸಂದೇಶ ಕೆತ್ತಿಸುತ್ತಾನೆ. ಎಲ್ಲ ಧರ್ಮಗಳನ್ನು ಹೊಂದಿರುವ ಭಾರತ ಜಗತ್ತಿನ ಶ್ರೇಷ್ಠ ದೇಶ. ಅದರಂತೆ ಭಾರತದ ಬಾವುಟವೂ ಅಷ್ಟೇ ಶ್ರೇಷ್ಠ. ‌ಬಾವುಟಕ್ಕೆ ಮತ, ಜಾತಿ, ಧರ್ಮ ಇಲ್ಲ ಎಂದು ತಿಳಿಸಿದರು.
ಬಾವುಟ ನಮ್ಮ ಸಂಸ್ಕೃತಿಯ ಸಂಕೇತ. ರಾಮಾಯಣ, ಮಹಾಭಾರತ, ಮೊಗಲ್, ಶಿವಾಜಿ ಕಾಲದಲ್ಲಿಯೂ ಅವರುಗಳು ಬಾವುಟಗಳನ್ನು ಬಳಸುತ್ತಿದ್ದರು ಎಂದರು.

ಇದೀಗ ನಮ್ಮ ಕೈಯಲ್ಲಿ ಇರುವ ತಿರಂಗಾ 11ನೇ ಬಾವುಟ. ದೇಶಿಯರು ಒಪ್ಪುವಂತಹ ಬಾವುಟವನ್ನು ಸಿಸ್ಟರ್ ನಿವೇದಿತಾ 1900ರಲ್ಲಿ ಕಲ್ಪಿಸಿಕೊಟ್ಟಿದ್ದರು. ಎಲ್ಲ ಕಾಲಕ್ಕೂ ಕೆಂಪು, ಹಸಿರು ಬಿಳಿ ಬಣ್ಣಗಳಿದ್ದವು. ಜೂನ್ 27, 1947ರಲ್ಲಿ ಅಶೋಕ ಚಕ್ರ ಕೊಂಡಿತು.  ಪಿಂಗಳಿ ವೆಂಕಯ್ಯರಚಿಸಿದ ಗಾಂಧೀಜಿಯ ಚರಕ ಇರುವ ಬಾವುಟವನ್ನು ಕೂಡ ನಾವು ಒಪ್ಪಲಿಲ್ಲ.‌ ಇದೀಗ ಜಾತಿ, ಲಿಂಗದ ಹೆಸರಿನಲ್ಲಿ ಮನಷ್ಯನನ್ನು ಛಿದ್ರಗೊಳಿಸಲಾಗಿದೆ. ಭಾರತ ಯಾರ ಸ್ವತ್ತಲ್ಲ. ಭಾರತ ಇರುವವರೆಗೆ ಬಾವುಟ ಇರುತ್ತದೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ವಚನಗಳಿಗೆ ಚೌಕಟ್ಟು ಒದಗಿಸಿದ ವಚನ ವಿನ್ಯಾಸಕಾರ ಫ.ಗು ಹಳಕಟ್ಟಿ, ಬಿಎಲ್ ಡಿ ಸಂಸ್ಥೆ ಹುಟ್ಟಿಗೆ ಕಾರಣರಾದ ಬಂತನಾಳ ಶಿವಯೋಗಿ, ಭೂದಾನ ಮಾಡಿದ ತ್ಯಾಗಮಯಿ ಬಂಗಾರಮ್ಮ ನಿಜಕ್ಕೂ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು. ನನ್ನ ಸಾರ್ವಜನಿಕ ಬದುಕಿಗೆ ಪ್ರೇರಣೆ ನೀಡಿದ ಬಿ.ಎಂ. ಪಾಟೀಲರು, ನನ್ನ ಸಿನೆಟ್, ಸಿಂಡಿಕೇಟ್, ವಿಧಾನಪರಿಷತ್ ಚುನಾವಣೆಗೆ ದೊಡ್ಡ ಪ್ರಮಾಣದ ಶಕ್ತಿಯಾಗಿದ್ದರು ಎಂದು ಸ್ಮರಿಸಿದರು. ದೊಡ್ಡಸ್ತಿಕೆಯ ಘನ ವ್ಯಕ್ತಿತ್ವ ಅವರದು. ನನ್ನ ಈ ಬೆಳವಣಿಗೆಗೆ ಬಿ.ಎಂ. ಪಾಟೀಲರೆ ಕಾರಣ ಎಂದು ಕೊಂಡಾಡಿದರು.

ಬಿಎಲ್ ಡಿ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಫ.ಗು. ಹಳಕಟ್ಟಿ ಅಧ್ಯಯನ ಮತ್ತು ಸಂಶೋದನ ಕೇಂದ್ರದ ಎಂ.ಎಸ್. ಮದಭಾವಿ ವೇದಿಕೆಯಲ್ಲಿದ್ದರು. ಬಳಗದ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಸ್ವಾಗತಿಸಿದರು. ರಾಜಕೀಯ ಧುರೀಣರಾದ ಎಂ.ಎಲ್.ಸಿ ಸುನಿಲ್ ಪಾಟೀಲ, ಖೇಡ, ಅಲಗೂರ, ನಂಜಯ್ಯನಮಠ ಇತರರು ಇದ್ದರು.

ಇದೇವೇಳೆಯಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಬಹುಮಾನ ಪಡೆದ ಐವರಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago