ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉೀವಾಡಗಿ, ಜಿಲ್ಲೆಯ ಅಭಿವೃದ್ಧಿಯನ್ನೇ ಮರೆತಿರುವ ಸಂಸದ ಡಾ.ಉಮೇಶ ಜಾಧವ್ ಅವರು ಸೇರಿದಂತೆ ಜಿಲ್ಲೆಯ ಬಿಜೆಪಿಗರಿಗೆ ಖರ್ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಹೇಳಿದರು.
ಅಕ್ರಮ ಮರಳು ಸಾಗಣೆಯಲ್ಲಿ ತೊಡಗಿದ್ದ ಪಕ್ಷದ ಕಾರ್ಯಕರ್ತನಿಗೆ ಜಾಡಿಸಿದ್ದವರು ಪ್ರಿಯಾಂಕ್. ಡಾ.ಜಾಧವ್ ಅವರು ಕಾಂಗ್ರೆಸ್‍ನಿಂದಲೇ ಹೋದವರು. ರz್ದÉೀವಾಡಗಿ ಅವರಿಗೆ ಏನು ತಿಳಿದಿಲ್ಲ. ಡಾ.ಉಮೇಶ ಜಾಧವ್ ಚಿಂಚೋಳಿ ತಾಲೂಕಿನ ಎಂಪಿ ಆಗಿದ್ದಾರೆ. ಡಾ.ಖರ್ಗೆ ತಂದ ಅಭಿವೃದ್ಧಿಯನ್ನೇ ಮುಂದುವರಿಸಲು ಆಗುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅಫಜಲಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುರಿತ ಚರ್ಚೆ ಗಮನಕ್ಕೆ ಬಂದಿದ್ದು, ಹಾದಿ ಬೀದಿಯಲ್ಲಿ ಚರ್ಚಿಸದಂತೆ ಸೂಚಿಸಿz್ದÉೀವೆ. ಪಕ್ಷದ ಹಂತದಲ್ಲಿ ಮಾತುಕತೆ ನಡೆದಿದೆ. ಅಭ್ಯರ್ಥಿಗಳ ಕುರಿತು ಜಿಲ್ಲಾ, ರಾಜ್ಯ, ಎಐಸಿಸಿ ಸಹ ಸಮೀಕ್ಷೆ ನಡೆಸುತ್ತಿದೆ. ಇಲ್ಲಿ ಯಾರು ಏನೇ ಹೇಳಿದರೂ ಮುಖ್ಯವಲ್ಲ. ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ.- ಜಗದೇವ ಗುತ್ತೇದಾರ್, ಜಿಲ್ಲಾಧ್ಯಕ್ಷ ಕಾಂಗ್ರೆಸ್
ಪ್ರಿಯಾಂಕ್ ಖರ್ಗೆ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬೆಚ್ಚಿ ಬೀಳುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಏಕೈಕ ಗಟ್ಟಿ ಧ್ವನಿಯ ನಾಯಕ ಖರ್ಗೆ. ಜಾತಿ ಎಂದೂ ಮಾಡಿಲ್ಲ. ಸಚಿವರಾಗಿದ್ದಾಗ ಸೇವಾಲಾಲ್ ಪೀಠಕ್ಕೆ 150 ಕೋಟಿ ರೂ. ನೀಡಿದ್ದರು. ಎಂಟು ವರ್ಷದಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆ ಏನು?, ಡಿಎಪಿ ಸಿಗುತ್ತಿಲ್ಲ, ವೇಶ್ಯಾವಾಟಿಕೆ, ಇಸ್ಪಿಟ್ ಅಡ್ಡೆಗಳು ಹೆಚ್ಚುತ್ತಿವೆ, ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್‍ಗೆ ಅವಮಾನವಾದಾಗ ಎಲ್ಲಿದ್ದೀರಿ? ಸನ್ನತಿ ಅಭಿವೃದ್ಧಿ ಏನಾಯ್ತು? ಎಂಬುದರ ಬಗ್ಗೆ ರz್ದÉೀವಾಡಗಿ ಉತ್ತರಿಸಲಿ ಎಂದು ಆಗ್ರಹಿಸಿದರು.
ಅಕ್ಕಿ ಕಳ್ಳ ಮಣಿಕಂಠ ರಾಠೋಡ್ ಜತೆ ಸಂಸದರು ಓಡಾಡುತ್ತಿದ್ದಾರೆ. ಮಣಿಕಂಠನಿಗೆ ರಾಷ್ಟ್ರೀಯ ನಾಯಕ ಖರ್ಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ರz್ದÉೀವಾಡಗಿ ಅವರಿಗೆ ಅನುಭವದ ಕೊರತೆ ಇದೆ. ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರೂ ಯಾರೇ ಬಂದರೂ ಚರ್ಚೆಗೆ ಸಿದ್ಧ ಎಂದರು.
ಜಿಪಂ ಮಾಜಿ ಅಧ್ಯಕ್ಷ ಶಿವಾನಂದ ಪಾಟೀಲ್ ಮರತೂರ ಮಾತನಾಡಿ, ಚಿತ್ತಾಪುರ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ ಕೆಲಸ ಆಗಿದ್ದು, ರಾಜಕೀಯಕ್ಕಾಗಿ ವಿನಾಕಾರಣ ಜಾತಿ ಜಗಳ ಹಚ್ಚಲಾಗುತ್ತಿದೆ. ಸರ್ವ ಜಾತಿ, ಜನಾಂಗದವರನ್ನು ವಿಶ್ವಾಸಕ್ಕೆ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂ ಪ್ರಭು ಪಾಟೀಲ್ ಮಾತನಾಡಿ, ಸಚಿವರಾಗಿದ್ದಾಗ ಎಲ್ಲ ಸಮಾಜದವರ ರುದ್ರಭೂಮಿಗೆ ಜಮೀನು ನೀಡಿದ್ದರು. ಬಿಜೆಪಿಯವರು ಹೊಸತು ಮಾಡುವುದಕ್ಕಿಂತ ಹಿಂದಿನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರಲಿ ಸಾಕು ಎಂದರು. ಹಿಂದುಳಿದ ವರ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಕುಪೇಂದ್ರ ಧೂಳೆ ಇತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…