ಬಿಸಿ ಬಿಸಿ ಸುದ್ದಿ

ಬಾಹ್ಯಾಕಾಶದವರೆಗೂ ಗ್ರಾಫ್ ಸಿದ್ಧಾಂತ ಅನ್ವಯ: ಡಾ. ಮೇಘಾ ಖಂಡೇಲ್ವಾಲ

ಕಲಬುರಗಿ: ಗ್ರಾಫ್ ಸಿದ್ಧಾಂತ ಅನ್ವಯ ಕೇವಲ ಗಣಿತಕ್ಕಷ್ಟೇ ಸೀಮಿತವಾಗಿರದೆ ಎಲ್ಲಾ ವಿಷಯದಲ್ಲಿದೆ. ಯಾವುದೇ ವಿಷಯವನ್ನು ಅತ್ಯಂತ ಸರಳ ಮತ್ತು ವೇಗವಾಗಿ ತಿಳಿದುಕೊಳ್ಳಲು ಗ್ರಾಫ್ಗಳು ಸಹಾಯಕ ಎಂದು ಕೇಂದ್ರೀಯ ವಿಶ್ವವಿದ್ಯಾಲಯ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಾ ಖಂಡೇಲ್ವಾಲ ಹೇಳಿದರು.

ಕೆಬಿಎನ್ ವಿಶ್ವವಿದ್ಯಾಲಯದ ಗಣಿತ ವಿಭಾಗದಿಂದ ಶನಿವಾರ ಏರ್ಪಡಿಸಲಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಗ್ರಾಫ್ ಸಿದ್ಧಾಂತ, ಗ್ರೂಪ್ ಸಿದ್ಧಾಂತ, ಅಲ್ಗೊರೋತಮ್, ಟೊಪೋಗ್ರಾಫಿಕಲ್, ಕೂಮ್ಯುನಿಟೊರಿಯಲ್ ಗ್ರಾಫ್ ಸಿದ್ಧಾಂತ ಇವುಗಳ ವ್ಯಾಖ್ಯೆ, ಸ್ವರೂಪ ಮತ್ತು ವ್ಯಾಪ್ತಿಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಗ್ರಾಫ್ ಸಿದ್ಧಾಂತ ಎಂಬುದು ಬಹಳ ವ್ಯಾಪಾಕವಾಗಿ ಹರಡಿದೆ. ಗ್ರಾಫ್ ಸಿದ್ಧಾಂತ ಭೌತ ವಿಜ್ಞಾನ, ರಾಸಾಯಶಾಸ್ತ್ರ, ಮನೋವೈಜ್ಞಾನ, ಸಮಾಜಶಾಸ್ತ್ರ, ಸಮೂಹ ಸಂವಹನ, ಮುಂತಾದ ಕ್ಷೇತ್ರಗಳ್ಳಲ್ಲೂ ಅತಿಯಾಗಿ ಬಳಕೆಯಾಗುತ್ತದೆ. ವಿದ್ಯಾರ್ಥಿಗಳು ಸ್ವಂತ ಅಧ್ಯಯನ ನಡೆಸಬೇಕು. ಸಂಶೋಧನ ಮನೋಭಾವನೆ ಇಟ್ಟು ಕೊಳ್ಳಬೇಕು. ನವ ಆವಿಷ್ಕಾರವನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಬಹುದು. ವಿದ್ಯಾರ್ಥಿಗಳು ಹೊಸದನ್ನು ಕಲಿಯುತ್ತಿರಬೇಕು. ಅಂತರ್ಜಾಲ ಬಳಕೆ ಗೊತ್ತಿರಬೇಕು. ಉನ್ನತ ವ್ಯಾಸಂಗದ ವೇಬ್ಸೈಟಗಳಾದ ಯುಜಿಸಿ, ಎಂಎಚ್ ಆರ್ ಡಿ ಗಳನ್ನು ಬ್ರೌಸ್ ಮಾಡುತ್ತಿರಬೇಕು. ತಮಗೆ ದೊರಕುವ ಫೇಲೋಶಿಪ್ ಗಳ ಸದ್ಭಾಳಿಕೆ ಮಾಡಿಕೊಳ್ಳಿ ಎಂದು ನುಡಿದರು.

ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ಕೆಬಿಎನ್ ವಿವಿಯ ಕಲಾ, ಭಾಷಾ, ಮಾನವೀಯ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ನಿಕಾಯದ ಡೀನ್, ಡಾ ನಿಶಾತ ಆರೀಫ್ ಹುಸೇನಿ ಮಾತನಾಡುತ್ತ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕ ಹಾಗೆ ತಮ್ಮ ಜ್ಞಾನವನ್ನು ಬೆಳೆಸಿಕೊಳ್ಳುತ್ತಿರಬೇಕು. ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು ಕೇವಲ ಮನೋರಂಜಣೆಗಾಗಿ ಅಲ್ಲˌ ಅಲ್ಲಿಂದ ಮಾಹಿತಿಯನ್ನೂ ಪಡೆಯಬಹುದು. ಶೈಕ್ಷಣಿಕೆವಾಗಿ ಅಭಿವೃದ್ಧಿ ಹೊಂದಲು ಸಾಮಾಜಿಕ ಜಾಲತಾಣ ಅನುಕೂಲ ಕರ. ತಮ್ಮ ಸುತ್ತ ಮುತ್ತಲಿನ ಜಗತ್ತಿನ ಪ್ರಚಲಿತ ವಿದ್ಯಮಾನ ಅವರಿಗೆ ಗೊತ್ತಿರಬೇಕು. ಪಿಎಚ್ಡಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ: ಚಿಂಚೋಳಿ- ದ್ವಿ ಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರ ಸಾವು

ವಿವಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ನಮ್ರತಾ ರಾವುತ, ಡಾ ಹಮೀದ್ ಅಕ್ಬರ್, ಡಾ.ಮೈಮುನ ಸರಡಗಿ, ಡಾ ಅಥರ್ ಮೊಯಿಸ್, ಡಾ. ನಗ್ಮಾ, ಡಾ. ಸುನಿಲ್, ಡಾ.ಜಹಾರಾನ, ಡಾ.ಅತಿಯಾ ಸುಲ್ತಾನ, ಡಾ.ಜಾವೆದ್ ಅಕ್ತರ್, ಡಾ. ಸೀಮಾ, ಸನಾ ಇಜಾಜ್, ಡಾ ಫಿರ್ದೋಸ್, ಡಾ ನಾಝಿಯಾ, ಪ್ರಿಯಾಂಕಾ, ಟೆಚ್ನಿಷಿಯನ್ ಸಂಗೀತ ಮತ್ತು ಗಣಿತ ವಿಭಾಗದ ವಿದ್ಯಾರ್ಥಿಗಳಿದ್ದರು.

ಈ ಕಾರ್ಯಕ್ರಮವನ್ನು ಗಣಿತ ವಿಭಾಗದ ವಿದ್ಯಾರ್ಥಿಗಳೆ ನಡೆಸಿಕೊಟ್ಟರು. ಫೋಜಿಯಾ ಘಜಲ ಪ್ರಾರ್ಥನೆ ಪ್ರಸ್ತುತ ಪಡಿಸಿದರೆ, ನಾಹೀದ ಅಕ್ತರ್ ಸ್ವಾಗತಿಸಿದರು. ಅಫೀಫ್ ನಸ್ರಿನ್ ಅತಿಥಿ ಪರಿಚಯಿಸಿದರೆ, ಸಬಾ ನೌಷೀನ್ ವಂದಿಸಿದರು. ಸೈದ ಐಮನ್ ಸುಲ್ತಾನ ನಿರೂಪಿಸಿದರು.

ಇದನ್ನೂ ಓದಿ: ಶಹಬಾದ್ ಕಾಂಗ್ರೆಸ್ ಮುಂಡನ ಕೊಲೆ ಪ್ರಕರಣ: ಆರೋಪಿ ಮೇಲೆ ಪೊಲೀಸರಿಂದ ಪೈರಿಂಗ್

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

4 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

11 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

11 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

11 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

22 hours ago