ಕಲಬುರಗಿ : ಗ್ರಾಮೀಣ ಭಾಗದ ವೃತ್ತಿ ರಂಗ ಮಾದರಿಯ ಹವ್ಯಾಸಿ ನಾಟಕಗಳನ್ನು ಆಡುವ ಮೂಲಕ ಅನೇಕ ಕಲಾವಿದರಿಗೆ ಅನುಕೂಲ ಕಲ್ಪಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ ಎಂದು ಹಿರಿಯ ರಂಗಕಲಾವಿದ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಹೇಳಿದರು.
ರಂಗಾಯಣ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಂಗಾಂತರಾಳ ಕಾರ್ಯಕ್ರಮದಲ್ಲಿ ತಮ್ಮ ರಂಗ ಅನುಭವಗಳನ್ನು ಹಂಚಿಕೊಂಡ ಅವರು, ಬಿಬ್ಬಳ್ಳಿ ಗ್ರಾಮದ ಒಬ್ಬ ಕಡುಬಡವ ವ್ಯಕಿಯಾಗಿದ್ದ ಬುಗ್ಗಪ್ಪ ಎಂಬುವವರನ್ನು ನಾಟಕದ ಮಾಸ್ಟರ್ ಮಾಡಲು ಪ್ರಯತ್ನ ಮಾಡುವ ಉದ್ದೇಶದಿಂದ ರಂಗಭೂಮಿಗೆ ಬಂದ ನಾನು ಈ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಅನೇಕ ನಾಟಕಗಳನ್ನು ಆಡಿದೆ, ಬೇರೆ ನಾಟ್ಯ ಸಂಘಗಳಿಗೆ ಆಡಿಸಿದೆ ಎಂದು ವಿವರಿಸಿ, ಹಲವು ನಾಟಕಗಳ ದೃಶ್ಯಗಳ ತಮ್ಮ ಪಾತ್ರಗಳ ಸಂಭಾಷಣೆ ಹೇಳಿ ರಂಜಿಸಿದರು.
ಸೇಡಂನ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ ಕಲಾವಿದರ ರಂಗಾನುಭವಗಳನ್ನು ಕೇಳುವ ಮತ್ತು ದಾಖಲಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಈಗಾಗಲೇ ರಂಗಭೂಮಿಯ ವಿವಿಧ ಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಆಹ್ವಾನಿಸಿ ರಂಗಾಂತರಾಳ ಹೇಳಿಸಲಾಗಿದೆ. ಇದು ಐದನೆಯ ಕಾರ್ಯಕ್ರಮ ಆಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚೆನ್ನೂರ್, ಸೇಡಂ ತಾಲೂಕಿನ ಹಿರಿಯ ರಂಗ ನಿರ್ದೇಶಕರಾದ ಶರಣಪ್ಪ ಮಾಸ್ಟರ್ ಹೂಗಾರ, ಸೂರ್ಯಕಾಂತ ಹಂಗನಳ್ಳಿ, ಬುಗ್ಗಪ್ಪ ಮಾಸ್ಟರ್, ಡಾ.ಬಿರಾದಾರ ಶ್ರೀಶೈಲ, ಜಗನ್ನಾಥ ತರನಳ್ಳಿ, ಸುಲೋಚನಾ ಸ್ವಾಮಿ, ಭಾಗ್ಯಶ್ರೀ, ಗಿರಿಮಲ್ಲ ಭಂಟನಳ್ಳಿ, ಹಣಮಂತ ರಾವ, ವಿಠ್ಠಲ ಭರಮಕರ, ದೇವೇಂದ್ರಪ್ಪ ಮೇಳಕುಂದಿ, ವೀರಯ್ಯಸ್ವಾಮಿ ಮೂಲಿಮನಿ, ಮಹಾದೇವಯ್ಯ ಕವಡಿಮಠ, ಸಿದ್ದಣ್ಣ ಕೋಲಾರ, ಗಂಗಾಧರ ಸಾವಳಗಿ, ಸಂತೋಷ ತೊಟ್ನಳ್ಳಿ, ಅವಿನಾಶ ಬೊರಂಚಿ, ಆದಿತ್ಯ ಜೋಶಿ, ಡಾ.ಸುಜಾತ ಜಂಗಮಶೆಟ್ಟಿ, ಶಂಕ್ರಯ್ಯ ಘಂಟಿ, ಬಿ.ಸಂದೀಪ, ಕಲ್ಯಾಣಿ ಭಜಂತ್ರಿ ಹಾಗೂ ರಂಗಾಯಣ ಕಲಾವಿದರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಜಗದೀಶ್ವರಿ ನಾಶಿ, ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…