ಬಿಸಿ ಬಿಸಿ ಸುದ್ದಿ

ವಾರ್ಡ್ ಸಮಿತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ: ವಾಸ್ತುಶಿಲ್ಪಿ ಪಿ.ಎಸ್ ಮಹಾಗಾಂವ್ಕರ್

ಕಲಬುರಗಿ: ವಾರ್ಡ ಸಮಿತಿ ಸದಸ್ಯತ್ವದ ಕುರಿತು ನಗರದ ಸಾರ್ವಜನಿಕರಲ್ಲಿ ಸಮಿತಿ ಸದಸ್ಯತ್ವದ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ನಗರದಾದ್ಯಂತ ಜನರಿಗೆ ಮಹಾನಗರ ಪಾಲಿಕೆ ಅರಿವು ಮೂಡಿಸುವ ಕೈಂಕರ್ಯದಲ್ಲಿ ತೊಡಗಬೇಕಾದ ಅವಶ್ಯಕತೆ ಇದೆ ಎಂದು ಕಲಬುರಗಿ ಸ್ಮಾರ್ಟ ಸಿಟಿ ಕ್ಲಬ್ ಅಧ್ಯಕ್ಷ ಮತ್ತು ವಾರ್ಡ ಸಮಿತಿ ಬಳಗದ ಸದಸ್ಯರು ಆಗಿರುವ ವಾಸ್ತುಶಿಲ್ಪಿ ಪಿ.ಎಸ್ ಮಹಾಗಾಂವ್ಕರ್ ಹೇಳಿದರು.

ಸೋಮವಾರ ಜನಾಗ್ರಹ ಸಂಸ್ಥೆ, ವಾರ್ಡ ಸಮಿತಿ ಬಳಗ, ಮಹಾನಗರ ಪಾಲಿಕೆ ಮತ್ತು ನಗರದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ವಾರ್ಡ ಸಮಿತಿ ಜಾಗೃತಿ ಜಾಥಾ ,ನಾಗರಿಕರ ನಡಿಗೆ ವಾರ್ಡ ಸಮಿತಿ ಕಡೆಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಹಾನಗರ ಪಾಲಿಕೆ ಕಳೆದ ಹಲವು ತಿಂಗಳಿಂದ ವಾರ್ಡ ಸಮಿತಿ ಸದಸ್ಯತ್ವಕ್ಕಾಗಿ ಅರ್ಜಿ ಕರೆದಿದ್ದು ಹಲವು ವಾರ್ಡಗಳಲ್ಲಿ ಸಮರ್ಪಕ ಅರ್ಜಿ ಬಾರದಿರುವುದಕ್ಕೆ ಸೂಕ್ತ ತಿಳುವಳಿಕೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪಕ ತಿಳುವಳಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೆಕೆಂದರು.ಇದೇ ವೇಳೆ ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಕೆ.ಎಸ್ ವಾಲಿ ಮಾತನಾಡಿ, ಮಹಾನಗರ ಪಾಲಿಕೆ ಇನ್ನು ಮುಂದೆ ವಾರ್ಡ ಸಮಿತಿ ರಚನೆ ಮಾಡಲು ತಡಮಾಡದೇ ಮುಂಬರುವ ದಿನಗಳಲ್ಲಿ ಮುಂದಿನ ಹೆಜ್ಜೆ ಇಡಲು ಈಗಿನಿಂದಲೇ ತಯಾರಾಗಬೇಕು.ನಗರದ ವಾರ್ಡಗಳ ಸಮಸ್ಯೆಗಳಿಗೆ ಮುಕ್ತಿ ಸಿಗಲು ಮತ್ತು ನಗರದ ಅಭಿವೃದ್ಧಿಗೆ ಸಮಿತಿ ರಚನೆ ಮಾಡಿದರೆ ಪಾಲಿಕೆಯ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ತಿಳಿಸಿದರು.

ಕಡಿಮೆ ಅರ್ಜಿ ಬಂದಿರುವ ವಾರ್ಡಗಳಲ್ಲಿ ಪಾಲಿಕೆ ಜಾಗೃತಿ ಮೂಡಿಸಬೇಕು. ಕಸ ಸಂಗ್ರಹ ವಾಹನಗಳಲ್ಲಿ ತುರ್ತಾಗಿ ಜಿಂಗಲ್ ಹಾಕಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್ಸಗಳಲ್ಲಿ ವಾರ್ಡ ಸಮಿತಿ ಸದಸ್ಯರಾಗಲು ಅರ್ಜಿ ಸಲ್ಲಿಸುವ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ಬ್ಯಾನರ‍್ಗಳನ್ನು ಹಾಕಲು ಆಯುಕ್ತರು ಸೂಕ್ತ ನಿರ್ದೇಶನ ನೀಡಬೇಕು. ನಗರದಲ್ಲಿರುವ ಎಂ.ಎಸ್.ಡಬ್ಲು ,ಎಲ್ ಎಲ್ ಬಿ, ಪತ್ರಿಕೋದ್ಯಮ ಕಾಲೇಜಿನ ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸುವ ಕಾರ್ಯಕ್ಕೆ ತರಬೇತಿಗೊಳಿಸಿದರೆ ವಿದ್ಯಾರ್ಥಿಗಳಿಗೂ ನಗರ ಆಡಳಿತದಲ್ಲಿ ನಾಗರಿಕರ ಸಹಭಾಗಿತ್ವದ ಕುರಿತ ಸಂಪೂರ್ಣ ಜ್ಞಾನಾರ್ಜನೆಗೆ ಅನುಕೂಲವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪಾಲಿಕೆಯ ಕೌನ್ಸಿಲ್ ಸೆಕ್ರೆಟರಿ ಸಂತೋಷ ಪಾಟೀಲ್ ಅವರು ಚರ್ಚೆ ಮಾಡಿ, ವಾರ್ಡ ಸಮಿತಿ ಸದಸ್ಯತ್ವಕ್ಕಾಗಿ ಅಗತ್ಯ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ವಾರ್ಡ ಸಮಿತಿ ಜಾಗೃತಿ ಜಾಥಾದಲ್ಲಿ ಜನಾಗ್ರಹ ಸಂಸ್ಥೆಯ ಸಂಯೋಜಕ ಅಧಿಕಾರಿ ಶ್ರಾವಣಯೋಗಿ ಹಿರೇಮಠ, ಜಯನಗರ ಅಭಿವೃದ್ಧಿ ಸಂಘಧ ಅಧ್ಯಕ್ಷ ಡಾ.ಕೆ.ಎಸ್ ವಾಲಿ, ರೋಟರಿಕ್ಲಬ್ ಅಧ್ಯಕ್ಷ ರಮೇಶ್ ಪಾಟೀಲ್, ನಿವೃತ್ತ ಪೊಲೀಸ್ ಅಧಿಕಾರಿಗಳ ಕಟ್ಟಡ ಸಮಿತಿ ಸಂಘದ ಅಧ್ಯಕ್ಷ ಜಿ.ಎಂ.ಯಾತನೂರ್,ಇನ್ಸ್ಟಿಟುಶನ್ ಆಫ್ ಎಂಜಿನಿಯರ್ಸ ಸಂಘದ ಸದಸ್ಯರು, ನಯಾ ಸವೇರಾ ಸಂಘಟನೆ ಅಧ್ಯಕ್ಷ ಮೊದಿನ್ ಪಟೇಲ್ ಅಣಬಿ,ಮುಕ್ತಿ ಆರ್ಗನೈಜೇಶನ್ ಸಂಘದ ಸದಸ್ಯರು ಹಾಗೂ ಅಧ್ಯಕ್ಷ ಜೈಭೀಮ್ ಧರ್ಗೆ,ನಾಗರಿಕ ಸೇವಾ ಸಮಿತಿಯ ಕಾರ್ಯದರ್ಶಿ ಬಿ ಎಂ ರಾವೂರ್,ರಾಮು ಪವಾರ್, ವಾರ್ಡ ಸಮಿತಿ ಬಳಗದ ಸದಸ್ಯರು ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳು ವಾರ್ಡ ಸಮಿತಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದವು.

emedialine

Recent Posts

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

8 hours ago

ಬಡವರಿಗೆ ಹಣ್ಣು-ಹಂಪಲು ವಿತರಣೆ

ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ  ಜೈ ಕನ್ನಡಿಗರ…

8 hours ago

ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆಗೊಳ್ಳುವ ಚಲನ ಚಿತ್ರ ಸ್ಕ್ರೀನ್

ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…

8 hours ago

ಕನ್ನಡ ದೀಪೋತ್ಸವ: ವಿಜಯೀಭವ ಕೃತಿ ಜನಾರ್ಪಣೆ 24 ರಂದು

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…

8 hours ago

ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದಿಂದ ವಿಭಾಗಿಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…

8 hours ago

ಅಭಿವೃದ್ಧಿ ಪರ ಚಿಂತನೆಯಳ್ಳ ಪ್ರಬುದ್ದ ರಾಜಕಾರಣಿ ಪ್ರಿಯಾಂಕ್ ಖರ್ಗೆ

ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…

8 hours ago