ನಮ್ಮ ದೇಶದ ಅಮೃತ ಮಹೋತ್ಸವ ಪರ್ವದ ಸಮಾರೂಪದ ಸಂದರ್ಭದಲ್ಲಿ ಹೈದ್ರಾಬಾದ ಸಂಸ್ಥಾನದ ವಿಮೋಚನೆಯ ಕಲ್ಯಾಣ ಕರ್ನಾಟ ಉತ್ಸವ ಬರುವ ೨೦೨೨ ಸೆಪ್ಟೇಂಬರ ೧೭ರಿಂದ ಕಲ್ಯಾಣ ಅಮೃತ ಮಹೋತ್ಸವ ಪರ್ವ ಆರಂಭವಾಗಲಿದೆ.
ನಮ್ಮ ದೇಶ ಸ್ವತಂತ್ರವಾದ ನಂತರ ಒಂದು ವರ್ಷ ಒಂದು ತಿಂಗಳ ಎರಡು ದಿವಸ ವಿಳಂಬವಾಗಿ ಆಸಾಫ್ ಜಾಯಿ ನಿಜಾಮ ಆಡಳಿತದಿಂದ ಅಖಂಡ ಭಾರತದಲ್ಲಿ ೧೭ನೇ ಸೆಪ್ಟಂಬರ ೧೯೪೮ ರಂದು ವಿಲೀನವಾದ ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶ ಈ ದಿನಾಚಾರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನಾಚಾರಣೆಯ ರೂಪದಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ.
(ಈ ಹಿಂದೆ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚಾರಣೆ ರೂಪದಲ್ಲಿ ಆಚರಿಸಲಾಗುತಿತ್ತು) ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ಯ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೈಸೂರು ಉತ್ಸವ ಮಾದರಿಯಲ್ಲಿ ಒಂದು ವರ್ಷವಿಡಿ ಈ ಭಾಗದ ಕಲೆ, ಸಂಸ್ಕ್ರತಿ ಸಾಹಿತ್ಯ, ಶಿಕ್ಷಣ ಇತಿಹಾಸ ಮತ್ತು ಅಭಿವೃದ್ದಿಯ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಾ ಅರ್ಥಪೂರ್ಣ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಸರಕಾರಕ್ಕೆ ಮನವರಿಕೆ ಮಡಲು ನಿರ್ಧರಿಸಿದೆ.
ಕಲ್ಯಾಣದ ಅಮೃತ ಮಹೋತ್ಸವ ಅಂಗಾಗಿ ಆರಂಬೋತ್ಸವದಿಂದ ಸಮಾರಂಭ ಉತ್ಸವದವರೆಗೆ ಹಮ್ಮಿಕೊಳ್ಳವಬೇಕಾದ ಅರ್ಥಪೂರ್ಣ ಕಾರ್ಯಕ್ರಗಳ ಬಗ್ಗೆ ಮತ್ತು ಈ ಐತಿಹಾಸಿಕ ರಾಷ್ಟ್ರೀಯ ಕಾರ್ಯಕ್ರಮಕ್ಕೆ ರಾಷ್ಟ್ರದ ಗಣ್ಯ ನಾಯಕರಿಗೆ ಅಮಂತ್ರಿಸಲು ರಾಜ್ಯದ ರಾಜ್ಯಪಾಲರು, ಮುಖ್ಯ ಮಂತ್ರಿಗಳು ಮತ್ತು ಆಯಾ ಇಲಾಖೆಯ ಸಚೀವರು ಈ ಐತಿಹಾಸಿಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಲು ಕಲ್ಯಾಣ ಕರ್ನಾಟಕ ಸಚಿವರು ಸಂಸದರು ಶಾಸಕರು ಸೇರಿದಂತೆ ಉತ್ಸವ ಸಮಿತಿಯ ನಿಯೋಗ ಆದಷ್ಟು ಶೀಘ್ರ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬಮ್ಮಾಯಿಯವರಿಗೆ ಅಮೃತ ಮಹೋತ್ಸವ ಆಚರಣೆಗೆ ಸಂಬಂಧಿಸಿ ಈ ಕೆಳಗೆ ನಮೊದಿಸದ ಪ್ರಮುಖ ಅಂಶಗಳ ಪ್ರಸ್ತಾವನೆ ಸಲ್ಲಿಸಲಾಗುವುದು.
೭೫ನೇ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಒಂದು ತಿಂಗಳ ಪೂರ್ವದಿಂದಲೇ ಸಾಂಸ್ಕ್ರತಿಇಕ ಕಾರ್ಯಕ್ರಮಗಳು ಏಳು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕನ್ನಡ ಸಂಸ್ಕ್ರತಿ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಸಂಯುಕ್ತ ಆರ್ಶಯದಲ್ಲಿ ಹಮ್ಮಿಕೊಳ್ಳಲು ಆಗ್ರಹಿಸಲಾಗುವುದು.
ಬರುವ ೧೭ನೇ ಸೆಪ್ಟೇಂಬರ ೨೦೨೨ರಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸದ ಅಂಗವಾಗಿ ವಿಭಾಗಿ ಕೇಂದ್ರ ಕಲಬುರಗಿಯಲ್ಲಿ ಜರಗುವ ಈ ಐತಿಹಾಸಿಕ ದಿನದ ಆರಂಭೋತ್ಸವದ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅವ್ಹಾನಿಸಲು ರಾಜ್ಯ ಸರಕಾರದ ವತಿಯಿಂದ ಅದಿಕೃತ ಅಮಂತ್ರಣ ನೀಡಲು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಅದರಂತೆ ವರ್ಷವಿಡಿ ನಡೆಯುವ ಸಾಂಸ್ಕ್ರತಿಕ ಮತ್ತು ಐತಿಹಾಸಿಕ ಹಾಗೂ ಅಭಿವೃದ್ದಿಪರವಾದ ಕಾರ್ಯಕ್ರಗಳಿಗೆ ಕೇಂದ್ರದ ಆಯಾ ಇಲಾಖೆಯ ಸಚಿವರಿಗೆ ಅಮಂತ್ರಿಸಲು ಸಮಾರೂಪ ಸಮಾರಂಭಕ್ಕೆ ರಾಷ್ಟ್ರಪತಿಗಳಿಗೆ ರಾಜ್ಯ ಸರ್ಕಾರದವತಿಯಿಂದ ಅಧಿಕೃತವಾಗಿ ಅವ್ವಾನಿಸಲು ಮುಖ್ಯಮಂತ್ರಿಗಳಲ್ಲಿ ಕೊರಿಕೊಳ್ಳಲಾಗುವುದು.
ಒಂದು ವರ್ಷ ವರೆಗೆ ಜರಗುವ ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವ ಕಾರ್ಯಕ್ರಮ ನಿಮಿತ್ಯ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ವಿಚಾರ ಸಂಕೀರ್ಣಗಳು ಚರ್ಚೆಕೂಟಗಳು ಆಯಾ ಸ್ಪರ್ದೆಗಳು ವಿಮೋಚನೆಗಾಗಿ ಹೋರಾಡಿದ ವೀರ ಸ್ವತಂತ್ರ ಯೋಧರ ಸ್ಮರಣಾರ್ಥ ಸ್ಮರಣ ಸಂಚಿಕೆಗಳ ಬಿಡುಗಡೆ, ವಿಮೋಚನಾ ದಿನಾಚರಣೆ ಆಚರಣೆಯ ಇತಿಹಾಸದ ವಿಶೇಷ ಸಂಚಿಕೆ ಬಿಡುಗಡೆ, ಆಯಾ ಸ್ಥಳಗಳಿಗೆ ವೀರ ಯೋಧರ ಹೆಸರುಗಳ ನಾಮಕರಣ, ವೀರ ಯೋಧರ ವಂಶದವರಿಗೆ ವೀರ ಯೋಧರ ಪರವಾಗಿ ಸನ್ಮಾನ ಚಟುವಟಿಕೆಗಳು ಹಮ್ಮಿಕೊಳ್ಳುವುದು. ಅದರಂತೆ ಅಮೃತ ಮಹೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕದ ಅಬಿವೃದ್ದಿಯ ಅವಲೋಕನಾ ಪ್ರದರ್ಶನ ಕಾರ್ಯಕ್ರಮಗಳು ಭವಿಷ್ಯದಲ್ಲಿ ಹಮ್ಮಿಕೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚೆಗಳು, ಚಿಂತನೆಗಳು, ಗೋಷ್ಟಿಗಳು ನಡೆಸಲಾಗುವುದು.
ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಜಾರಿಯಾಗಿರುವ ಸಂವಿಧಾನದ ೩೭೧(ಜೇ) ಕಲಂ ತಿದ್ದುಪಡಿಯ ಪರಿಣಾಕಾರಿ ನುಷ್ಟಾನಕ್ಕೆ ಪ್ರತ್ಯೇಕ ಸಚೀವಾಲಯ ಸ್ಥಾಪನೆ, ನೆನೆಗುದಿಗೆ ಬಿದ್ದಿದರುವ ಕಲಬುರಗಿ ರೈಲ್ವೆ ವಿಭಾಗೀಯ ಕಛೇರಿಯ ಸ್ಥಾಪನೆ, ಏಮ್ಸ್ ನಿಮ್ಜ ಹಾಗೂ ಏಳು ಜಿಲ್ಲೆಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಘೋಷಣೆ ಮಡಿರುವ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಪ್ರಸ್ಥಾವನೆಯಲ್ಲಿ ಆಗ್ರಹಿಸಲಾಗುವುದು.
ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವರ ಆಚರಣೆಗೆ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕದ ಸಚಿವರು, ಸಂಸದರು, ಶಾಸಕರು ಉನ್ನತ ಅಧಿಕಾರಿಗಳು ಸೇರಿದಂತೆ ಉತ್ಸವ ಸಮಿತಿಯ ಸದಸ್ಯರೊಳಗೊಂಡು ಸಮಿತಿ ರಚಿಸಲು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಅದರಂತೆ ಅಮೃತ ಮಹೋತ್ಸವ ಆಚರಣೆಗೆ ವಿಶೇಷ ಅನುಧಾನ ಮಂಜೂರು ಮಾಡಲು ಕೋರಲಾಗುವುದು.
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಏಳು ಜಿಲ್ಲೆಗಳಲ್ಲಿ ಎಲ್ಲಾ ಕ್ಷೇತ್ರದ ಪ್ರಮುಖರನ್ನು ಸೇರಿಸಿ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಗಳನ್ನು ಕೇಂದ್ರೀಯ ಕಲಬುರಗಿ ಉತ್ಸವ ಸಮಿತಿಯಿಂದ ರಚಿಸಲಾಗುವುದ.
ಮುಖ್ಯ ಮಂತ್ರಿಗಳ ಹತ್ತಿರ ನಿಯೋಗ ತೆಗೆದುಕೊಂಡು ಹೋಗುವು ವಿಷಯವಾಗಿ ಮತ್ತು ಮುಖ್ಯಮಂತ್ರಿಗಳ ಜೊತೆ ಕಲ್ಯಾಣ ಕರ್ನಾಟಕ ಪ್ರದೇಶದ ಸಚೀರವರು ಸಂಸದರು, ಶಾಸಕರು ಸೇರಿದಂತೆ ಉತ್ಸಚ ಸಮಿತಿಯ ಪದಾದಿಕಾರಿಗಳ ಸಭೆನಡೆಸುವ ದಿನಾಂಕ ನಿಗದಿಮಾಡಲು ಈಗಾಗಲೇ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರಿಗೆ ಮಾತನಡಿ ಮನವರಿಕೆ ಮಾಡಿಕೊ|ಳ್ಳಲಾಗಿದೆ ಆದಷ್ಟು ಶೀಘ್ರವಾಗಿ ಒಂದೆರಡು ದಿನಗಳಲ್ಲಿ ಮುಖ್ಯ ಮಂತ್ರಿಗಳಿಗೆ ನಿಯೋಗ ಭೇಟಿಯಾಗುವ ಮತ್ತು ಸಭೆ ನಡೆಸುವ ದಿನಾಂಕ ನಿಗದಿ ಮಾಡುವ ಬಗ್ಗೆ ಸಚಿವರಾದ ನಿರಾಣಿಯವರು ತಿಳಿಸಿರುತ್ತಾರೆ. ಒಟ್ಟಾರೆ ಬರುವ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಆಚರಣೆಯ ಬಗ್ಗೆ ವಿವಿರವಾದ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ನಂತರ ಸರಕಾರದ ಅಧಿಕೃತ ಆದೇಶದಂತೆ ಅದಷ್ಟು ಶೀಘ್ರ ಅಮೃತ ಮಹೋತ್ಸವ ನಿಮಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
(ಶಶೀಲ್ ಜಿ. ನಮೋಶಿ) (ಬಿ.ಜಿ.ಪಾಟೀಲ್) (ಅಮರನಾಥ ಪಾಟೀಲ್) (ಲಕ್ಷ್ಮಣ ದಸ್ತಿ)
ಶಾಸಕರು ಶಾಸಕರು ಮಾಜಿ ಶಾಸಕರು ಪ್ರಧಾನ ಕಾರ್ಯದರ್ಶಿ
ಅಧ್ಯಕ್ಷರು ಕಾರ್ಯಾದ್ಯಕ್ಷರು ಉಪಾಧ್ಯಾಕ್ಷರು
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…