ಬೆಂಗಳೂರು: ರಾಜ್ಯದಲ್ಲಿರುವ ವಿವಿಧ ಸಮಾಜಗಳ ಮಠ, ದೇವಸ್ಥಾನ, ಸಂಘ ಸಂಸ್ಥೆಗಳು/ಟ್ರಸ್ಟ್‍ಗಳು, ಸಮುದಾಯ ಚಟುವಟಿಕೆಗಳು, ಅಭಿವೃದ್ದಿ / ಜೀರ್ಣೋಧ್ಧಾರ ಕಾರ್ಯಗಳು ಹಾಗೂ ಸಮುದಾಯ ಭವನ/ ವಿದ್ಯಾರ್ಥಿನಿಲಯ ಕಟ್ಟಡಗಳ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು, ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ನೀಡಿದ್ದಾರೆ ಎಂದು ಕೇಂದ್ರ ಸಚಿವರಾದ ಭಗವಂತ ಖೂಬಾರವರು ಮಾಹಿತಿ ನೀಡಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಬೀದರ ಲೋಕಸಭಾ ಕ್ಷೇತ್ರದ ಮಠಗಳಾದ ಶ್ರೀ ಶಿವಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆ (ಟ್ರಸ್ಟ್) ಮಾದನಹಿಪ್ಪರಗಾ ತಾ; ಆಳಂದ ಮಠಕ್ಕೆ ರೂ. 50 ಲಕ್ಷ, ಶ್ರೀ ಭೃಂಗಿ ಪಾಚೇಶ್ವರ ಸಂಸ್ಥಾನ ಕಟ್ಟಿಮಠ ಪ್ರತಿಷ್ಠಾನ ಟ್ರಸ್ಟ್ರ ಚಂದನಕೇರಾ ತಾ: ಚಿಂಚೋಳಿ ಮಠಕ್ಕೆ ರೂ. 25 ಲಕ್ಷ, ಶ್ರೀ ರುದ್ರಮುನೀಶ್ವರ ಹಿರೇಮಠ ಸೂಗುರು, ತಾ: ಕಾಳಗಿ ಮಠಕ್ಕೆ ರೂ. 25 ಲಕ್ಷ, ಕಂಚಾಳಕುಂಟಿ ನಂದೀಶ್ವರ ಮಠ ನಿಡಗುಂದಾ ತಾ: ಚಿಂಚೋಳಿ ಮಠಕ್ಕೆ ರೂ. 25 ಲಕ್ಷ, ಪೂಜ್ಯ ಶ್ರೀ ಚನ್ನಮಲ್ಲದೇವರು ಹೊಸಮಠ ನರೋಣ ತಾ: ಆಳಂದ ಮಠಕ್ಕೆ 50 ಲಕ್ಷ, ಶ್ರೀ ಗುರು ಗಂಗಾಧರೇಶ್ವರ ಹಿರೇಮಠ ಸಂಸ್ಥಾನ, ಕಲ್ಲಹಿಪ್ಪರಗಿ ತಾ: ಕಾಳಗಿ ಮಠಕ್ಕೆ 50 ಲಕ್ಷ, ಶ್ರೀ ಶಾಂತಲಿಂಗೇಶ್ವರ ಹಿರೇಮಠ ಕಿಣ್ಣಿ ಸುಲ್ತಾನ ತಾ: ಆಳಂದ ಮಠಕ್ಕೆ 30 ಲಕ್ಷ, ಶ್ರೀ ಚರಂತೇಶ್ವರ ಹಿರೇಮಠ ಬಂಗರಗಾ ತಾ: ಆಳಂದ ಮಠಕ್ಕೆ 50 ಲಕ್ಷ, ಅನುದಾನ ನೀಡಿದ್ದಾರೆ.
ಮುಂದುವರೆದು ಬೀದರ ಜಿಲ್ಲೆಯಲ್ಲಿರುವ ಮಠಗಳಾದ ಶ್ರೀ ಹಾವಗಿಲಿಂಗೇಶ್ವರ ಮಠ ಗಡಿಗೌಡಗಾಂವ ತಾ. ಬಸವಕಲ್ಯಾಣ ಮಠಕ್ಕೆ 50 ಲಕ್ಷ, ಶ್ರೀ ಶಾಂತಲಿಂಗೇಶ್ವರ ಮಠ, ಸುಕ್ಷೇತ್ರ ಹಿರನಾಗಾಂವ ತಾ. ಬಸವಕಲ್ಯಾಣ ಮಠಕ್ಕೆ 50 ಲಕ್ಷ, ಶ್ರೀ ಗುರುವರ್ಯರ ತತ್ವ ದರ್ಶನ ಪೀಠ (ರಿ) ಹಿರೇಮಠ, ಹಳ್ಳಿಖೇಡ (ಕೆ) ತಾ. ಹುಮನಾಬಾದ ಮಠಕ್ಕೆ 25 ಲಕ್ಷ, ಶ್ರೀ ಗವಿಮಠ ಕಮಠಾಣಾಕ್ಕೆ 50 ಲಕ್ಷ, ಶ್ರೀ ಗುರು ಸಿದ್ದೇಶ್ವರ ಸಂಸ್ಥಾನ ಚಿಕ್ಕಮಠ, ಹಳ್ಳಿಖೇಡ (ಬಿ) ತಾ. ಹುಮನಾಬಾದ 50 ಲಕ್ಷ, ಶ್ರೀ ಪೂಜ್ಯ ಚನ್ನಮಲ್ಲಸ್ವಾಮಿಗಳು ಕೆಂಪೇನ್ ವಿರಕ್ತಮಠ ಪರ್ತಾಪೂರ ತಾ. ಬಸವಕಲ್ಯಾಣಕ್ಕೆ 50 ಲಕ್ಷ, ಶ್ರೀ ಚನ್ನಮಲ್ಲೇಶ್ವರ ವಿರಕ್ತಮಠ ಟ್ರಸ್ಟ್ (ರಿ) ಹುಡಗಿ ತಾ. ಹುಮನಾಬಾದ 50 ಲಕ್ಷ, ಶ್ರೀ ಷ.ಬ್ರ. ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಹಿರೇಮಠ, ರಾಜೇಶ್ವರ ತಾ. ಬಸವಕಲ್ಯಾಣಕ್ಕೆ 50 ಲಕ್ಷ ಅನುದಾನ ಕಲ್ಪಿಸಿದ್ದಾರೆ.
ಕ್ಷೇತ್ರದ ದೇವಸ್ಥಾನಗಳಾದ ಶ್ರೀ ಚನ್ನರುದ್ರಮುನಿಶ್ವರ ಪ್ರತಿಷ್ಠಾನ (ರಿ) ಹಿರೇಮಠ ಸುಂಠಾಣ ತಾ. ಕಾಳಗಿ ದೇವಸ್ಥಾನಕ್ಕೆ ರೂ. 50 ಲಕ್ಷ, ಶ್ರೀ ರುದ್ರಮುನೀಶ್ವರ ಗ್ರಾಮೀಣಾಭಿವೃದ್ದಿ ಟ್ರಸ್ಟ್, ಶ್ರೀ ದ್ವಾದಶ ಜ್ಯೋತಿರ್ಲಿಂಗ್ ಗುಂಡುಗುರ್ತಿ ತಾ. ಚಿತ್ತಾಪೂರ ದೇವಸ್ಥಾನಕ್ಕೆ 50 ಲಕ್ಷ, ಭಾಲ್ಕಿ ತಾಲೂಕಿನ ಅಟರ್ಗಾ ಗ್ರಾಮದ ಶ್ರೀ ಮಹಾದೇವ ದೇವಸ್ಥಾನಕ್ಕೆ 20 ಲಕ್ಷ ಹಾಗೂ ಶ್ರೀ ವಿಠಲ ಮಂದಿರ ಅಟ್ಟರ್ಗಾ 20 ಲಕ್ಷ, ಭಾಲ್ಕಿ ನಗರದ ದೇಶಪಾಂಡೆ ಗಲ್ಲಿಯ ಶ್ರೀ ಬಲಭಿಮ್ ಹನುಮಾನ ದೇವಸ್ಥಾನಕ್ಕೆ 10 ಲಕ್ಷ, ಬೀದರ ತಾಲೂಕಿನ ಯಾಕತಪೂರ ಹನುಮಾನ ದೇವಸ್ಥಾನಕ್ಕೆ 10 ಲಕ್ಷ, ಔರಾದ ತಾಲೂಕಿನ ಡೋಣಗಾಂವ (ಎಮ್) ಶ್ರೀ ಗುರು ಹಾವಗಿಸ್ವಾಮಿ ಮಠ ಸಂಸ್ಥಾನ ಟ್ರಸ್ಟ್ ದೇವಸ್ಥಾನಕ್ಕೆ 50 ಲಕ್ಷ, ಬಸವಕಲ್ಯಾಣ ತಾಲೂಕಿನ ಪರ್ತಾಪೂರ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ 50 ಲಕ್ಷ, ಶ್ರೀ ವೀರಭದ್ರೇಶ್ವರ ಮಂದಿರ ಹುಲಸೂರಗೆ 25 ಲಕ್ಷ, ಮಹಾದೇವ ಮಂದಿರ ಮೇಹಕರ ತಾ. ಭಾಲ್ಕಿಗೆ 25 ಲಕ್ಷ, ಶ್ರೀ ಹನುಮಾನ ಮಂದಿರ ಚಳಕಾಪೂರ ತಾ. ಭಾಲ್ಕಿಗೆ 50 ಲಕ್ಷ ಅನುದಾನ ನೀಡಲಾಗಿದೆ.
ಸಮುದಾಯ ಭವನ ನಿರ್ಮಾಣಕ್ಕಾಗಿ, ಭಾಲ್ಕಿ ಪಟ್ಟಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 100 ಲಕ್ಷ ಅನುದಾನ ನೀಡಲಾಗಿದೆ.
ಸಂಸ್ಥೆ/ಟ್ರಸ್ಟಗಳಡಿ ಕಟ್ಟಡಗಳ ನಿರ್ಮಾಣ/ಜಿರ್ಣೋದ್ಧಾರಕ್ಕಾಗಿ ಕಾಳಗಿಯ ಶ್ರೀ ಗುರು ರುದ್ರಮುನೀಶ್ವರ ಜನಕಲ್ಯಾಣ ಪ್ರತಿಷ್ಟಾನ (ರಿ) ಸಂಸ್ಥಾನ ಹಿರೇಮಠಕ್ಕೆ 25 ಲಕ್ಷ, ಶ್ರೀ ಎಸ್.ಜಿ.ಎಸ್.ಬಿ.ವ್ಹಿ ಟ್ರಸ್ಟ್ ಬಸವತಿರ್ಥ ಮಠ, ತಾ. ಹುಮನಾಬಾದಗೆ 50 ಲಕ್ಷ, ಶ್ರೀ ಗುರು ಪತ್ರಿಸ್ವಾಮಿ ಚಾರಿಟೇಬಲ್ ಟ್ರಸ್ಟ್ (ರಿ) ಜೊನ್ನಿಕೇರಿ ತಾ. ಔರಾದ 50 ಲಕ್ಷ, ಶ್ರೀ ಗುರುಸಿದ್ದೇಶ್ವರ ಜನಕಲ್ಯಾಣ ಪ್ರತಿಷ್ಠಾನ ಟ್ರಸ್ಟ್ ಕಿಟ್ಟಾ ತಾ. ಬಸವಕಲ್ಯಾಣಕ್ಕೆ 50 ಲಕ್ಷ, ಅನುದಾನ ನೀಡಿದ್ದಾರೆ.
ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ದಿ, ವಿದ್ಯಾರ್ಥಿನಿಲಯ/ಕಟ್ಟಡಗಳ ನಿರ್ಮಾಣಕ್ಕಾಗಿ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿರುವ ಶ್ರೀ ಶಿವಲಿಂಗೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಟ್ರಸ್ಟ್ ಕಮಿಟಿಗೆ 50 ಲಕ್ಷ, ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಜಗದ್ಗೂರು ಶ್ರೀ ರೇವಣಸಿದ್ದೇಶ್ವರ ಸಾಂಸ್ಕøತಿಕ ಮತ್ತು ಶೈಕ್ಷಣೀಕ ಅಭಿವೃದ್ದಿ ಸಂಸ್ಥೆಗೆ 50 ಲಕ್ಷ, ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಶ್ರೀ ರಂಭಾಪೂರಿ ಶಿಕ್ಷಣ ಪ್ರತಿಷ್ಥಾನಕ್ಕೆ 50 ಲಕ್ಷ ಅನುದಾನ ನೀಡಿದ್ದಾರೆ.
ಮಾತೃಹೃದಯಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ಸಮಸ್ತ ಮಠಾಧೀಶರ ಪರವಾಗಿ, ದೇವಸ್ಥಾನಗಳ ಆಡಳಿತ ಮಂಡಳಿಯ ಪರವಾಗಿ, ಎಲ್ಲಾ ಸಮುದಾಯದ ಮುಖಂಡರ ಪರವಾಗಿ, ವಿವಿಧ ಟ್ರಸ್ಟ್, ಸಂಘಸಂಸ್ಥೆಗಳ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮುಖಂಡರ ಪರವಾಗಿ ಕೇಂದ್ರ ಸಚಿವರಾದ ಭಗವಂತ ಖೂಬಾರವರು ಧನ್ಯವಾದಗಳು ತಿಳಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…