ಸುರಪುರ ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಬ್ಯಾಚೂಲರ್ ಆಫ್ ಇಂಜಿನಿಯರಿಂಗ್ (ಃ.ಇ) ಮತ್ತು ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಒಃಂ) ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ಸೆಲೆಬ್ರೇಶನ್ ಆಚರಿಸಲಾಯಿತು. ಈ ಕಾರ್ಯಕ್ರಮವು ಕಾಲೇಜಿನ ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಘುನಾಥರೆಡ್ಡಿ ಸೀನಿಯರ್ ಲೆಚರರ್ ನ್ಯೂ ಕನ್ನಡ ಪಿಯು ಕಾಲೇಜ್ ಯಾದಗಿರಿ ಅವರು ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಮಾತಿನ ಮುಖಾಂತರ ಹುರಿದುಂಬಿಸುತ್ತಾ ಜೀವನದಲ್ಲಿ ನಿಕಟವಾದ ಗುರಿಯನ್ನು ಸಾಧಿಸಲು ಪ್ರೇರೇಪಿಸಿದರು ಹಾಗೆ ಜೀವನದಲ್ಲಿ ದೊಡ್ಡಮಟ್ಟದಲ್ಲಿ ಸಾಧನೆಯನ್ನು ಮಾಡಿ ಈ ಭಾಗಕ್ಕೆ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಕೋರಿದರು.
ಈ ಕಾರ್ಯಕ್ರಮಕ್ಕೆ ಗೌರವ ಅಥಿತಿಗಳಾಗಿ ಪತ್ರಕರ್ತರಾದ ನಾಗರಾಜ ನ್ಯಾಮತಿ , ರಾಜು ಕುಂಬಾರ, ಶ್ರೀಮಂತ ಚಲವಾದಿ ಇವರುಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶರಣಬಸಪ್ಪ ಸಾಲಿಯವರು ಅಂತಿಮ ವರ್ಷದ ಃ.ಇ ಮತ್ತು ಒಃಂ ವಿದ್ಯಾರ್ಥಿಗಳಿಗೆ ಶುಭಕೋರುತ್ತಾ, ಕಾಲೇಜಿನ ಪರಿಚಯ ಮಾಡುತ್ತ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏಳು ಬೀಳು ಇರುತ್ತವೆ ಆದರೂ ಯಾವದಕ್ಕೂ ಹೆದೆಗುಂದದೆ ಜೀವನದಲ್ಲಿ ಮುನ್ನುಗ್ಗುತ್ತ ಗುರಿಯ ಕಡೆ ಸಾಗಲು ಮನದಟ್ಟು ಮಾಡಿದರು.
ಈ ಕಾರ್ಯಕ್ರಮದಲ್ಲಿ ಎಕ್ಸಾಮಿನೇಷನ್ ಡಿನರಾದ ಡಾಕ್ಟರ್ ಅಶೋಕ್ ಪಾಟೀಲ್ ಅಕಡೆಮಿಕ್ ಡಿನರಾದ ಪ್ರೋ.ಶರಣಗೌಡ ಪಾಟೀಲ್ ಮತ್ತು ಇತರ ಎಲ್ಲಾ ಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲಕರು ಭಾಗವಹಿಸಿದ್ದರು. ಪ್ರೋ. ಪ್ರತಿಭಾ ಪಾಟೀಲ್ ಸ್ವಾಗತಿಸಿದರು ಮತ್ತು ಪ್ರೊ. ಸಿದ್ದನಗೌಡ ಪಾಟೀಲ್ ವಂದಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು.ಜ್ಯೋತಿ ಮಠ ಹಾಗೂ ಕು.ಭಾಗ್ಯ ದರಬಾರಿ ನಿರೂಪಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…