ಬಿಸಿ ಬಿಸಿ ಸುದ್ದಿ

ಜಯನಗರದಲ್ಲಿ ಶ್ರಾವಣ ಮಾಸದ ಅಂಗವಾಗಿ ಅಧ್ಯಾತ್ಮಿಕ ಪ್ರವಚನ: ಲಿಂಗರಾಜ ಸಿರಗಾಪೂರ

ಕಲಬುರಗಿ:ನಗರದ ಜಯನಗರ ಶಿವ ಮಂದಿರದಲ್ಲಿ ಪ್ರತಿ ವರ್ಷದಂತೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರಾವಣ ಮಾಸದ ನಿಮಿತ್ತ ವಿನೂತನ ರೀತಿಯಲ್ಲಿ ಒಂದು ತಿಂಗಳು “ಶರಣರ ಧರ್ಮ -ಅಧ್ಯಾತ್ಮಿಕ ಪ್ರವಚನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ “ಶರಣರ ಧರ್ಮ” ಪ್ರವಚನವನ್ನು 29 ಶುಕ್ರವಾರ ರಿಂದ 28-8-2022 ರವರೆಗೆ ದಿನ ನಿತ್ಯ ಸಾಯಂಕಾಲ 7 ರಿಂದ 8 ಗಂಟೆವರೆಗೆ ಜರುಗುವುದು.ಪ್ರವಚನವನ್ನು ಖ್ಯಾತ ಪ್ರವಚನಕಾರ ಹಾಗೂ ಸಾಹಿತಿ ಪಂ.ವೇ.ಶಿವಕವಿ ಜೋಗೂರ ಅವರು ನಡೆಸಿಕೊಡುವರು.”ಶರಣರ ಧರ್ಮ” ಎಂಬ ಅಧ್ಯಾತ್ಮಿಕ ಪ್ರವಚನ ಸಾರ್ವಕಾಲಿಕಕ್ಕೂ ಶ್ರೇಷ್ಠ.ಶರಣರ ಆಧ್ಯಾತ್ಮಿಕ ಚಿಂತನೆಗಳು,ಶರಣರ ನುಡಿಗಳು ಹಾಗೂ ನಾಡಿಗೆ ನೀಡಿದ ಸಂದೇಶಗಳನ್ನು ಜನರಿಗೆ ಅರ್ಥವಾಗುವಂತೆ ತಿಳಿಸುವ ಉದ್ದೇಶದಿಂದ ಮತ್ತು ಶರಣರ ಮೌಲ್ಯಗಳನ್ನು ಜಗಕೆ ಸಾರಬೇಕೆಂಬ ಸದುದ್ದೇಶದಿಂದ ಪ್ರವಚನ ಕಾರ್ಯಕ್ರಮ ಪ್ರತಿ ವರ್ಷ ಜಯನಗರ ಶಿವಮಂದಿರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ-19 ಹಾವಳಿಯಿಂದ ಪ್ರವಚನವನ್ನು ರದ್ದು ಗೊಳಿಸಿ ದಿನ ನಿತ್ಯ ಸರಳವಾಗಿ ಪೂಜೆ ಪುನಸ್ಕಾರ ಮಾಡುವುದರ ಮೂಲಕ ಶ್ರಾವಣ ಮಾಸದ ಆಚರಣೆ ಮಾಡಲಾಯಿತು.ಈ ವರ್ಷ ಕೊರೊನಾ ಇಲ್ಲದೇ ಇರುವುದರಿಂದ ಮತ್ತು ಜನರ ಆಶಯದಂತೆ ಈ ಬಾರಿ ಹಮ್ಮಿಕೊಳ್ಳಲಾಗಿದೆ.ಪ್ರವಚನದ ಜೊತೆಗೆ ಅಧ್ಯಾತ್ಮಿಕ ಚಿಂತನೆಗಳು ಹಾಗೂ ಉಪನ್ಯಾಸಗಳು ಜರುಗುವವು.ಕಲ್ಯಾಣ ಕರ್ನಾಟಕದ ಪ್ರಮುಖ ಮಠದ ಮಠಾಧೀಶರು ಮತ್ತು ಮಹಾಮನೆಯ ಶರಣರನ್ನು ಆಹ್ವಾನಿಸಲಾಗುವುದು.

ಕಾರ್ಯಕ್ರಮವನ್ನು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷರು ಆಗಿರುವ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಅವರು ಉದ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಶಾಸಕ ಹಾಗೂ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ, ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ,ಸಾಹಿತಿ ಹಾಗೂ ಲೇಖಕ ಬಿ. ಭಾಗವಹಿಸಲಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago