ಬಿಸಿ ಬಿಸಿ ಸುದ್ದಿ

ಶರಣಬಸವೇಶ್ವರ ಪುಣ್ಯಕ್ಷೇತ್ರದಲ್ಲಿ 40 ದಿನಗಳ ವಿಶೇಷ ಸಾಮಾಜಿಕ ಧಾರ್ಮಿಕ ಪ್ರವಚನ

ಕಲಬುರಗಿ; ಅಖಿಲ ಭಾರತ ಶಿವಾನುಭವ ಮಂಟಪ, ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಫ್ಯಾಮಿಲಿ ಟ್ರಸ್ಟ್ ಮತ್ತು ಶರಣಬಸವೇಶ್ವರ ಸಂಸ್ಥಾನ ಜಂಟಿಯಾಗಿ, ೧೮ನೇ ಶತಮಾನದ ಶ್ರೀ ಶರಣಬಸವೇಶ್ವರರ ಪುಣ್ಯತಿಥಿ ಸ್ಮರಣಾರ್ಥ, ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಪುಣ್ಯಕ್ಷೇತ್ರದ ಆವರಣದಲ್ಲಿ ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿಯವರ ಪೀಠದ ೪೦ನೇ ವಾರ್ಷಿಕೋತ್ಸವ ಮತ್ತು ಪವಿತ್ರ ಶ್ರಾವಣ ಮಾಸದಂಗವಾಗಿ ಜುಲೈ ೨೮ ರಿಂದ ಸೆಪ್ಟೆಂಬರ್ ೦೫ ರವರೆಗೆ ೪೦ ದಿನಗಳ ಕಾಲ ವಿಶೇಷ ಸಾಮಾಜಿಕ-ಧಾರ್ಮಿಕ ಪ್ರವಚನಗಳನ್ನು ಆಯೋಜಿಸುತ್ತಿದೆ.

ನಗರದ ದಾಸೋಹ ಮಹಾಮನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಉದ್ಘಾಟನಾ ದಿನದಿಂದ ಸಂಸ್ಥಾನದ ೭ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರ ಪುಣ್ಯತಿಥಿ ಸ್ಮರಣಾರ್ಥ ಎಂಟು ದಿನಗಳ ಕಾಲ ವಿಶೇ? ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಶಿವಲಿಂಗ ಶಾಸ್ತ್ರಿ ಗರೂರು ಅವರಿಂದ ಒಂದು ತಿಂಗಳ ಕಾಲ ಶರಣಬಸವೇಶ್ವರ ದೇವರ ಪುರಾಣ ಪ್ರವಚನ ನಡೆಯಲಿದ್ದು, ಬ್ರಹ್ಮಚಾರಿ ಮಹೇಶ ಗುರೂಜಿ ಅವರಿಂದ ಕಾರ್ಯಕ್ರಮ ನಡೆಯಲಿದೆ. ಶ್ರಾವಣ ಮಾಸದ ಆರಂಭದ ಈ ಎಲ್ಲಾ ವಿಶೇಷ ಕಾರ್ಯಕ್ರಮಗಳನ್ನು ಸಾರಂಗ ಮಠದ ಮತ್ತು ಸುಲಫುಲ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದು, ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಆಗಮಿಸಲಿದ್ದಾರೆ. ಡಾ. ಅಪ್ಪಾಜಿ, ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಹಾಗೂ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಇವರ ಸಾನಿಧ್ಯದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಉಪಸ್ಥಿತರಿರುವರು ಎಂದು ತಿಳಿಸಿದರು.

ಪ್ರತಿದಿನ ಸಂಜೆ ೫.೩೦ರಿಂದ ೬.೩೦ರವರೆಗೆ ಒಂದು ಗಂಟೆ ಕಾಲ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡು ನಂತರ ಸಾಮಾಜಿಕ-ಧಾರ್ಮಿಕ ಪ್ರವಚನ ನಡೆಯಲಿದೆ ಎಂದರು. ಈ ವ?ದ ಶ್ರಾವಣ ಮಾಸದ ಕಾರ್ಯಕ್ರಮದ ವೈಶಿ?ವೆಂದರೆ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಅವರ ಸಹೋದರಿಯರಾದ ಕುಮಾರಿ ಶಿವಾನಿ ಎಸ್ ಅಪ್ಪಾ, ಕುಮಾರಿ ಭವಾನಿ ಎಸ್ ಅಪ್ಪಾ ಮತ್ತು ಕುಮಾರಿ ಮಹೇಶ್ವರಿ ಎಸ್ ಅಪ್ಪಾ ಅವರಿಂದ ಭಕ್ತಿಗೀತೆಗಳ ಗಾಯನ ನಡೆಯಲಿದೆ ಎಂದರು.

ಶರಣಬಸವೇಶ್ವರರ ಪವಿತ್ರ ಕಾರ್ಯಗಳು ಮತ್ತು ಪವಾಡಗಳ ಕುರಿತು ಸಾಮಾಜಿಕ ಧಾರ್ಮಿಕ ಪ್ರವಚನಗಳು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ನಿರಂಜನ್ ವಿ. ನಿಷ್ಠಿ ಅವರ ಮೊದಲ ದಿನದ ಪ್ರವಚನದೊಂದಿಗೆ ಪ್ರಾರಂಭವಾಗಲಿವೆ.ಮತ್ತು ಎರಡನೇ ದಿನ ಡಾ. ಅಪ್ಪಾಜಿ ಅವರ ಪುತ್ರಿಯರಾದ ಕುಮಾರಿ ಶಿವಾನಿ ಮತ್ತು ಕುಮಾರಿ ಭವಾನಿಯವರ ಜೊತೆಯೊಂದಿಗೆ ಪ್ರೊ.ಶಿವರಾಜ್ ಶಾಸ್ತ್ರಿ ಹೇರೂರು ವಿ?ಯದ ಕುರಿತು ವಿಶೇ? ಪ್ರವಚನ ನೀಡಲಿದ್ದಾರೆ ಎಂದು ಹೇಳಿದರು.

ಸೆ. ೦೫ರವರೆಗೆ ವಿವಿಧ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ನುರಿತ ಬುದ್ಧಿಜೀವಿಗಳು ಮತ್ತು ಶಿಕ್ಷಣತಜ್ಞರಿಂದ ವಿಶೇಷ ಉಪನ್ಯಾಸಗಳು ಮತ್ತು ಪ್ರವಚನಗಳು ನಡೆಯಲಿದ್ದು, ೮ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ೯ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರಿಂದ ಶ್ರಾವಣ ಮಾಸದ ವಿಶೇ? ಪಾದಪೂಜೆ, ಪ್ರತಿದಿನ ಚಿ. ದೊಡ್ಡಪ್ಪ ಅಪ್ಪಾಜಿ ಅವರಿಂದ ಮಹಾ ಪಲ್ಲಕ್ಕಿ ಉತ್ಸವ ನಡೆಯಲಿದೆ. ಶ್ರಾವಣ ಮಾಸದ ಎರಡನೇ ಮತ್ತು ನಾಲ್ಕನೇ ಸೋಮವಾರದಂದು ದೂರದೂರುಗಳಿಂದ ಆಗಮಿಸುವ ಭಕ್ತರಿಂದ ವಿಶೇ? ಭಜನೆ ನಡೆಯಲಿದೆ. ಮತ್ತು ಎಲ್ಲಾ ೪೦ ದಿನಗಳಲ್ಲಿ ದೇವಸ್ಥಾನದ ಸಂಕೀರ್ಣದಲ್ಲಿ ಬೆಳಿಗ್ಗೆ ೬.೩೦ ರಿಂದ ೭.೩೦ ರವರೆಗೆ ವಿಶೇ? ಯೋಗ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಶಿವರಾಜ ಶಾಸ್ತ್ರಿ ಹೇರೂರ, ಡಾ. ನೀಲಾಂಬಿಕಾ ಪಾಟೀಲ ಶೇರಿಕಾರ, ಪ್ರೊ. ವಾಣಿಶ್ರೀ ಸಿ ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

56 mins ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

58 mins ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

1 hour ago