ಅಫ್ಜಲಪುರ: ತಾಲೂಕಿನ ದೇವಲಗಣಗಪುರದ ಸಚ್ಚಿದಾನಂದ ಆಶ್ರಮದಲ್ಲಿ ೨೩ನೆಯ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಜರಿಗಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಮಹಾಂತೇಶ್ವರ ಮಠದ ವೀರ ಮಹಾಂತ ಶಿವಾಚಾರ್ಯರು ದೇಶ ಕಾಯುವ ವೀರಯೋಧರನ್ನು ನಾವೆಲ್ಲರೂ ಗೌರವಿಸಬೇಕು ಎಂದರು. ಮಾಜಿ ಯೋಧರಾದ ಬಾಲಕೃಷ್ಣ ಮುದುಕಣ್ಣ, ರಾಜೇಂದ್ರಕುಮಾರ್ ಲೋಖಂಡ, ವನರಾಜ ಲವಟೆ, ಕಾಳೇ ಬಾಲಾಜಿ ಗಣಪತಿ, ಕರಣ್ ಬಿರಾದಾರ ಕಮಾಂಡೋ ಮಾತನಾಡಿದರು.
ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಲಾಯಿತು. ವಿಠ್ಠಲ್ ಹೇರೂರು ಯುವ ಬ್ರಿಗೇಡ್‌ನ ಜಿಲ್ಲಾಧ್ಯಕ್ಷರಾದ ಶ್ರೀಪಾದ್ ಬಳಗುಂಪಿ ಸ್ವಾಗತಿಸಿದರು. ಶ್ರೀಪಾದ್ ಸೆಂಡಗೆ ಕಾರ್ಗಿಲ್ ಯೋಧರ ವೀರ ಮರಣದ ಹಾಗೂ ವೀರ ವಿಜಯಪತಾಕೆಯನ್ನ ಹಾರಿಸಿದ ಬಗ್ಗೆ ಮಾತನಾಡಿದರು. ಬ್ರಿಗೇಡ್ನ ಈನ್ನೋರ್ವ ಕಾರ್ಯಕರ್ತ ಮಲಿಕ್ ಪಟೇಲ್ ಕಾರ್ಗಿಲ್ ವೀರಯೋಧರ ಹುತಾತ್ಮರನ್ನು ಸ್ಮರಿಸಿದರು. ದಿವ್ಯ ಸಾನಿಧ್ಯ ವಹಿಸಿಕೊಂಡ ಶ್ರೀ ವೀರ ಮಹಾಂತ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಎಲ್ಲಪ್ಪ ತಳವಾರ್ ನಿರೂಪಿಸಿದರು. ಯುವ ಬ್ರಿಗೇಡ್ ನ ಗೌರವಾಧ್ಯಕ್ಷರಾದ ರಾಮ ಹೇರೂರು ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಾವರ್ ಇಸ್ಮಾಯಿಲ್, ಹೇರೂರು ಪ್ರೌಢಶಾಲೆಯ ಮುಖ್ಯಗುರುಳಾದ ರಾಜಶೇಖರ್ ತಲಾರಿ, ಯತಿರಾಜ ಪ್ರೌಢಶಾಲೆಯ ಮುಖ್ಯ ಗುರುಗಳಾದ ಗೋವಿಂದ ಚೌಡಾಪುರಕರ್, ಗಂಗಾಪರಮೇಶ್ವರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸುಜಾತ, ನಿರ್ಮಲ ವಡಗೇರಿ, ಸವಿತಾ ಮುದುಕಣ್ಣ, ಶರಣು ಪಾಟೀಲ್, ಭೀಮಣ್ಣ ಜಮಾದಾರ್, ರಂಗರಾವ್ ಕೇಡಗಿ, ದತ್ತಪ್ಪ ನಡೆವಿನಕೆರ ಹಾಗೂ ಸ್ಥಳೀಯ ಎಲ್ಲಾ ಶಾಲಾ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…