ಶಹಾಬಾದ: ಮಕ್ಕಳಲ್ಲಿ ಕಾವ್ಯ ರಚನೆ ಮಾಡುವ ಆಸಕ್ತಿ, ಕೌಶಲ್ಯ ಬೆಳೆಸುವ ಮೂಲಕ ಉತ್ತಮ ಸಾಹಿತ್ಯ ಹೊರಬರಲು ಸಾಧ್ಯ. ಆ ನಿಟ್ಟಿನಲ್ಲಿ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆ ಹಾಗೂ ಶಹಾಬಾದ ಕನ್ನಡ ಸಾಹಿತ್ಯ ಪರಿ?ತ್ ತಾಲೂಕ ಘಟಕ ಸಹಯೋಗದಲ್ಲಿ ಜುಲೈ.೩೦ ರಂದು ಶನಿವಾರ ಒಂದು ದಿನದ ಕಾಲ ಪ್ರೌಢಶಾಲಾ ಮಕ್ಕಳಿಗೋಸ್ಕರ್ ರಾವೂರಿನಲ್ಲಿ ನಡೆಯುವ ’ ಕಾವ್ಯ ರಚನಾ ತರಬೇತಿ ಶಿಬಿರ ’ವನ್ನು ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ತಿಳಿಸಿದರು.
ಅವರು ಗುರುವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡುತ್ತ, ಜುಲೈ.೩೦ ರಂದು ಬೆಳಗ್ಗೆ ೧೦ ಗಂಟೆಗೆ ಆಯೋಜಿಸಲಾದ ಕಾರ್ಯಕ್ರಮವನ್ನು ಖ್ಯಾತ ಮಕ್ಕಳ ಸಾಹಿತಿ ಎ. ಕೆ. ರಾಮೇಶ್ವರ ಉದ್ಘಾಟಿಸಲಿದ್ದಾರೆ ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಲಿದ್ದಾರೆ. ಸಿದ್ಧಲಿಂಗೇಶ್ವರ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ, ಕಸಾಪ ಶಹಾಬಾದ ತಾಲೂಕಾ ಘಟಕದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಮಕ್ಕಳ ಸಾಹಿತಿ ಎಚ್.ಬಿ.ತೀಥೆ೯,ಉಪನ್ಯಾಸಕ ಡಾ. ಮಲ್ಲಿನಾಥ ತಳವಾರ, ಸಿಆರ್‌ಪಿ ಕವಿತಾ ಸಾಳೂಂಕಿ ಆಗಮಿಸಲಿದ್ದಾರೆ.
ಅಂದು ಬೆಳಗ್ಗೆ ೧೧:೩೦ ಕ್ಕೆ ನಡೆಯುವ ’ಕವನ ರಚಿಸೋಣ ಬನ್ನಿ , ಗೋಷ್ಠಿ -೧ರ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳ ಸಾಹಿತಿ ಎಚ್. ಬಿ. ತೀರ್ಥೆ, ಕಸಾಪ ಶಹಾಬಾದ ಮಾಜಿ ಅಧ್ಯಕ್ಷ ನಾಗಣ್ಣ ರಾಂಪುರೆ ಅಧ್ಯಕ್ಷತೆ, ಕಾರ್ಯನಿರತ ಪತ್ರಕರ್ತ ಸಂಘದ ಶಹಾಬಾದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ, ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕಾಧ್ಯಕ್ಷ ಈರಣ್ಣ ಕೆಂಬಾವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಶಹಾಬಾದ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ್,ಪ್ರಾಥಮಿಕಶಾಲಾ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಶಿವಪುತ್ರಪ್ಪ ಕರಣಿಕ, ಮುಖ್ಯಗುರು ವಿಜಯಕುಮಾರ ಸಿಂದಗಿ ಆಗಮಿಸಲಿದ್ದಾರೆ.
ಮಧ್ಯಾಹ್ನ ೨ ಗಂಟೆಗೆ ನಡೆಯುವ ’ಕವನ ವಾಚನ ಹಾಗೂ ವಿಮರ್ಶೆ’ ಗೋಷ್ಠಿ -೨ ರ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಮಲ್ಲಿನಾಥ ತಳವಾರ, ಸಿದ್ದಲಿಂಗೇಶ್ವರ ಸಂಸ್ಥೆಯ ಸಹಕಾರ್ಯದರ್ಶಿ ಈಶ್ವರಪ್ಪ ಬಾಳಿ ಅಧ್ಯಕ್ಷತೆ, ಕಸಾಪ ಮಾಧ್ಯಮ ಸಲಹೆಗಾರ ಕೆ. ರಮೇಶ ಭಟ್, ಕಸಾಪ ಪಜಾ ಪ್ರತಿನಿಧಿ ಲೋಹಿತ್ ಕಟ್ಟಿ, ಕಸಾಪ ಗೌರವ ಸಲಹೆಗಾರ ಗಿರಿಮಲ್ಲಪ್ಪ ವಳಸಂಗ,ಕಸಾಪ ಮಹಿಳಾ ಪ್ರತಿನಿಧಿ ವೀಣಾ ನಾರಾಯಣ ಆಗಮಿಸಲಿದ್ದಾರೆ. ಮಧ್ಯಾಹ್ನ : ೩:೩೦ ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಸಿದ್ಧಲಿಂಗ ದೇವರು ಸಾನಿಧ್ಯ, ಸಿದ್ದಲಿಂಗೇಶ್ವರ ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಅಧ್ಯಕ್ಷತೆ, ಅಥಿತಿಗಳಾಗಿ ಕಸಾಪ ಶಹಾಬಾದ ತಾಲೂಕಾ ಘಟಕದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಗೌರವ ಕಾರ್ಯದರ್ಶಿಗಳಾದ ಬಸವರಾಜ ಮದ್ರಕಿ ಮತ್ತು ಶರಣು ವಸ್ತ್ರದ, ಕೋಶಾಧ್ಯಕ್ಷ ಬಾಬುರಾವ ಪಂಚಾಳ, ಕಸಾಪ ಗೌರವ ಸಲಹೆಗಾರ ಮಲ್ಲಿನಾಥ ಪಾಟೀಲ, ರಾವೂರ ಕಸಾಪ ಅಧ್ಯಕ್ಷ ಸಿದ್ದಲಿಂಗೇಶ ಜ್ಯೋತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ ತಾಲೂಕ ಘಟಕದ ಅಧ್ಯಕ್ಷ ಶರಣಬಸಪ್ಪ ಕೋಬಾಳ ಹಾಗೂ ಗೌರವ ಕಾರ್ಯದರ್ಶಿ ಶರಣು ವಸ್ತ್ರದ ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…