ಬಿಸಿ ಬಿಸಿ ಸುದ್ದಿ

ಮಹಿಳೆಯರು ತೆರೆಯ ಹಿಂದಿನ ಸಾಧಕರು: ಪರಮೇಶ್ವರ ಮೋದಿ

ಆಳಂದ: ಭಾರತೀಯರ ಸ್ವಾತಂತ್ರ್ಯ ಹೋರಾಟದಇತಿಹಾಸವು ಮಹಿಳೆಯರ ಕೊಡುಗೆಗಳನ್ನು ಉಲ್ಲೇಖಿಸದೆಅಪೂರ್ಣವಾಗಿರುತ್ತದೆಎಂದು ಪರಮೇಶ್ವರ ಮೋದಿ ಅಭಿಪ್ರಾಯಪಟ್ಟರು.

ಶನಿವಾರ ಪಟ್ಟಣದ ಮಾತೋಶ್ರೀ ಪ್ರೇಮಿಳಾಬಾಯಿ ಮಾಧವರಾವಗುತ್ತೇದಾರಕನ್ಯಾ ಪದವಿ ಪೂರ್ವಕಾಲೇಜಿನಲ್ಲಿತಾಲೂಕುಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾತ್ರಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಾರತದ ಮಹಿಳೆಯರು ಮಾಡಿದತ್ಯಾಗವುಅಗ್ರಸ್ಥಾನವನ್ನು ಪಡೆದುಕೊಳ್ಳುತ್ತದೆ.ಅವರುಅತ್ಯಂತಉತ್ಸಾಹದಿಂದ ಹಾಗೂ ನಿರ್ಭೀತವಾಗಿ ಹೋರಾಡಿದರು ಮತ್ತು ಸ್ವಾತಂತ್ರ್ಯವನ್ನು ಗಳಿಸಲು ವಿವಿಧಚಿತ್ರಹಿಂಸೆ, ಶೋ?ಣೆ ಮತ್ತು ಕ?ಗಳನ್ನು ಎದುರಿಸಿದ್ದರು ಎಂದು ಹೇಳಿದರು.

ಹೆಚ್ಚಿನ ಪುರು?ರು ಸ್ವಾತಂತ್ರ್ಯ ಹೋರಾಟಗಾರರುಜೈಲಿನಲ್ಲಿದ್ದಾಗ, ಮಹಿಳೆಯರು ಮುಂದೆ ಬಂದು ಹೋರಾಟದಉಸ್ತುವಾರಿ ವಹಿಸಿಕೊಂಡರು. ಭಾರತದ ಸೇವೆಯಲ್ಲಿನ ಸಮರ್ಪಣೆ ಮತ್ತು ಭಕ್ತಿಗಾಗಿಇತಿಹಾಸದಲ್ಲಿ ಹೆಸರು ಗಳಿಸಿರುವ ಶ್ರೇ? ಮಹಿಳೆಯರ ಪಟ್ಟಿ ಬಹಳ ಉದ್ದವಾಗಿದೆಎಂದುಅಭಿಪ್ರಾಯಪಟ್ಟರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯ ಭಾಗವಹಿಸುವಿಕೆಯು ೧೮೧೭ ರಲ್ಲಿಯೇ ಪ್ರಾರಂಭವಾಯಿತು ಭೀಮಾಬಾಯಿ ಹೊಲ್ಕರ್ ಬ್ರಿಟಿ?ಕರ್ನಲ್ ಮಾಲ್ಕಮ್ ವಿರುದ್ಧಧೈರ್ಯದಿಂದ ಹೋರಾಡಿಗೆರಿಲ್ಲಾಯುದ್ಧದಲ್ಲಿಅವರನ್ನು ಸೋಲಿಸಿದ್ದರು.ಕಿತ್ತೂರಿನರಾಣಿಚೆನ್ನಮ್ಮ, ಅವಧ್‌ನರಾಣಿ ಬೇಗಂ ಹಜರತ್ ಮಹಲ್ ಸೇರಿದಂತೆ ಅನೇಕ ಮಹಿಳೆಯರು ೧೯ ನೇ ಶತಮಾನದಲ್ಲಿ ಬ್ರಿಟಿ?ಈಸ್ಟ್‌ಇಂಡಿಯಾಕಂಪನಿಯ ವಿರುದ್ಧ ಹೋರಾಡಿದರು.ಇದು ೧೮೫೭ ರ ಸ್ವಾತಂತ್ರ್ಯದ ಮೊದಲ ಯುದ್ಧದ ೩೦ ವ?ಗಳ ಮೊದಲೇಆರಂಭವಾಗಿತ್ತುಎಂದರು.
೧೮೫೭ ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ (ಮಹಾ ದಂಗೆ) ಮಹಿಳೆಯರು ವಹಿಸಿದ ಪಾತ್ರವು ಪ್ರಶಂಸೆಗೆ ಪಾತ್ರವಾದದ್ದು ಮತ್ತುದಂಗೆಯ ನಾಯಕರ ಮೆಚ್ಚುಗೆಯನ್ನೂ ಸಹ ಗಳಿಸಿತು.ರಾಮ್‌ಘಡದರಾಣಿ, ರಾಣಿಜಿಂದಾನ್‌ಕೌರ್, ರಾಣಿಟೇಸ್ ಬಾಯಿ, ಬೈಜಾಬಾಯಿ, ಚೌಹಾನ್‌ರಾಣಿ, ತಪಸ್ವಿನಿ ಮಹಾರಾಣಿಧೈರ್ಯದಿಂದತಮ್ಮ ಸೈನ್ಯವನ್ನುಯುದ್ಧಭೂಮಿಗೆಕರೆದೊಯ್ದಿದ್ದರುಎಂದು ನುಡಿದರು.

ಕಸಾಪ ಗೌರವಕೋಶಾಧ್ಯಕ್ಷಅಶೋಕರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಝಾನ್ಸಿಯರಾಣಿ ಲಕ್ಷ್ಮಿ ಬಾಯಿ ಅವರ ಶೌರ್ಯ ಮತ್ತುಅದ್ಭುತ ನಾಯಕತ್ವವು ನಿಜವಾದದೇಶಭಕ್ತಿಗೆಒಂದುಅತ್ಯುತ್ತಮಉದಾಹರಣೆಯಾಗಿದೆ.ರಾಷ್ಟ್ರೀಯ ಚಳವಳಿಗೆ ಸೇರಿದ ಭಾರತೀಯ ಮಹಿಳೆಯರು ವಿದ್ಯಾವಂತ ಮತ್ತುಉದಾರವಾದಿ ಕುಟುಂಬಗಳಿಗೆ ಸೇರಿದವರು, ಹಾಗೆಯೇಗ್ರಾಮೀಣ ಪ್ರದೇಶದವರು ಮತ್ತುಎಲ್ಲಾ ವರ್ಗದವರು, ಎಲ್ಲಾ ಜಾತಿಗಳು, ಧರ್ಮಗಳು ಮತ್ತು ಸಮುದಾಯಗಳ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

೨೦ ನೇ ಶತಮಾನದಲ್ಲಿ ಸರೋಜಿನಿ ನಾಯ್ಡು, ಕಸ್ತೂರಿ ಬಾ ಗಾಂಧಿ, ವಿಜಯಲಕ್ಮಿ ಪಂಡಿತ್ ಮತ್ತುಅನ್ನಿ ಬೆಸಂತ್‌ಅವರುಯುದ್ಧಭೂಮಿಯಲ್ಲಿ ಮತ್ತುರಾಜಕೀಯಕ್ಷೇತ್ರದಲ್ಲಿ ನೀಡಿದಕೊಡುಗೆಗಾಗಿ ಇಂದಿಗೂ ನೆನಪಿನಲ್ಲಿರುವ ಹೆಸರುಗಳಾಗಿವೆ ಎಂದು ಸ್ಮರಿಸಿದರು.

ಬ್ರಿಟಿ?ಈಸ್ಟ್‌ಇಂಡಿಯಾ ಕಂಪನಿ ಮತ್ತು ಬ್ರಿಟಿ? ಸಾಮ್ರಾಜ್ಯದ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ವಿವಿಧರೀತಿಯಲ್ಲಿದೊಡ್ಡ ಮತ್ತು ಶ್ರೀಮಂತ ಕೊಡುಗೆಗಳನ್ನು ನೀಡಿದ ಭಾರತೀಯ ಮಹಿಳೆಯರ ಪಾತ್ರವನ್ನು ಮರೆಯಬಾರದುಎಂದುಕರೆ ನೀಡಿದರು.

ಪಿಯುಸಿಯಲ್ಲಿ ಕನ್ನಡ ಮಾಧ್ಯಮದಲ್ಲಿಅತೀ ಹೆಚ್ಚು ಅಂಕ ಪಡೆದುಕನ್ನಡಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿಗೆ ಆಯ್ಕೆಯಾದಕಾಲೇಜಿನ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಕಸಾಪ ಅಧ್ಯಕ್ಷ ಹಣಮಂತ ಶೇರಿ, ಗೌರವ ಕಾರ್ಯದರ್ಶಿ ಮಲ್ಲಿನಾಥತುಕ್ಕಾಣೆಇದ್ದರು.ರಾಜಶೇಖರಕಡಗನ ನಿರೂಪಿಸಿದರೆ, ಮಲ್ಲಿಕಾರ್ಜುನಎಸ್ ಕೆ ಸ್ವಾಗತಿಸಿದರು.ಸಂಗಮೇಶ ಸ್ವಾಮಿ ವಂದಿಸಿದರು.ಪ್ರಾಚಾರ್ಯ ಮಲ್ಲಿಕಾರ್ಜುನ ಬುಕ್ಕೆ ಅಧ್ಯಕ್ಷತೆ ವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago