ಕಲಬುರಗಿ: ದೇವೇಗೌಡರು ಮುಖ್ಯಮಂತ್ರಿಯಾಗದಿದ್ದರೆ ಕಲ್ಯಾಣಕರ್ನಾಟಕ ಪ್ರದೇಶ ಬರಡು ಭೂಮಿಯಾಗಿಯೇಇರುತ್ತಿತ್ತು. ಈ ಭಾಗಕ್ಕೆಅವರು ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ ಎಂದುಜೆಡಿಎಸ್ ಪಕ್ಷದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಹೇಳಿದರು.
ನಗರದ ವೀರಶೈವಕಲ್ಯಾಣ ಮಂಟಪದಲ್ಲಿ ಕಲಬುರಗಿದಕ್ಷಿಣ ಮತಕ್ಷೇತ್ರದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದಅವರು, ನಮ್ಮ ಪಕ್ಷಕ್ಕೆ ಸ್ವತಂತ್ರವಾಗಿಅಧಿಕಾರದ ಅವಕಾಶ ನೀಡಿಲ್ಲ. ಜೆಡಿಎಸ್ ಸರ್ಕಾರಅಧಿಕಾರಕ್ಕೆ ಬಂದರೆ ಶಿಕ್ಷಣ ಕ್ಷೇತ್ರದಲ್ಲಿಕ್ರಾಂತಿಕಾರಿ ಬದಲಾವಣೆತರಲಾಗುದು.ಯು.ಕೆ.ಜಿ ಯಿಂದಕಾಲೇಜಿನ ವರೆಗೆ ಶಿಕ್ಷಣ ಉಚಿತವಾಗಿ ನೀಡಲಾಗುವುದು. ಆರೋಗ್ಯಕ್ಷೇತ್ರದಲ್ಲೂ ಸುಧಾರಣೆತರಲಾಗುವುದು.ಬಡ ರೋಗಿಗಳಿಗೆ ಎಲ್ಲ ಕಾಯಿಲೆಗಳಿಗೆ ಉಚಿತಚಿಕಿತ್ಸೆ ನೀಡಲಾಗುವುದು. ಪ್ರತಿಗ್ರಾ.ಪಂ. ಕೇದ್ತದಲ್ಲಿ ,೩೦ ಹಾಸಿಗೆ ಆಸ್ಪತ್ರೆಆರಂಭಿಸಲಾಗುವುದು. ರೈತರ ಸಾಲ ಮನ್ನಾಮಾಡುವುದರಜತೆರೈತರಿಗೆ ಸಹಕಾರ ನೀಡಲಾಗುವುದು ಎಂದರು.
ಮಾಜಿ ಸಚಿವ ಬಂಡೆಪ್ಪಕಾಂಶಂಪೂರೆ ಮಾತನಾಡಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನುಒಂದುತಕ್ಕಡಿಯಲ್ಲಿ ಕೂಡಿಸಿ, ಇನ್ನೊಂದುತಕ್ಕಡಿಯಲ್ಲಿಕುಮಾರಸ್ವಾಮಿಅವರನ್ನು ಕೂಡಿಸಿದರೆ ಕುಮಾರನವರತೂಕ ಹೆಚ್ಚಾಗುತ್ತದೆಎಂದರು. ಬಿಜೆಪಿ ಸುಳ್ಳು ಹೇಳಯವ ಸರ್ಕಾರ ವಾಗಿದೆ.ತಾಕತ್ಇದ್ದರೆರೈತರ ಸಾಲ ಮನ್ನಾ ಮಾಡಲಿ ಎಂದು ಸವಾಲು ಹಾಕಿದರು.
ಪ್ರಾಸ್ತಾವಿಕ ಮಾತನಾಡಿದ ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷಕೃಷ್ಣಾ ರೆಡ್ಡಿ ಮಾತನಾಡಿ, ಬಿಜೆಪಿ ಮತ್ತುಕಾಂಗ್ರೆಸ್ ಪಕ್ಷದವರು ಸಮಾವೇಶಕ್ಕೆಅಡ್ಡಿ ಪಡಿಸಿದ್ದಾರೆ.ಯಾರಿಗೂ ಹೆದರೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.ಜೆಡಿಎಸ್ ಪಕ್ಷದಿಂದ ಶಾಸಕರಾಗಿಆಯ್ಕೆಯಾದಅರುಣಾ ಪಾಟೀಲ್ಜೆಡಿಎಸ್ ಗೆ ಮೋಸ ಮಾಡಿ ಬಿಜೆಪಿಗೆ ಸೇರಿದರು.ನಮೋಶಿ ಬಂದರು, ಅವರು ಹೋದರು.ಬಡಕುಟುಂಬದಿಂದ ಬಂದವನು ನಾನು ಎಂದುಕಣ್ಣೀರು ಹಾಕಿದರು.ಎಂದುಅವರು ಆರೋಪಿಸಿದರು.ಜೆಡಿಎಸ್ಜಿಲ್ಲಾಧ್ಯಕ್ಷಕೇದಾರಲಿಂಗಯ್ಯ ಹಿರೇಮಠ, ಬಾಲರಾಜಗುತ್ತೇದಾರ, ಶೀವಕುಮಾರ ನಾಟೀಕಾರ, ಶಾಮರಾವ ಸೂರನ್, ಸಂಜೀವನ್ಯಾಕಾಪುರ, ಮನೋಹರ ಪೋತ್ದಾರ, ಹಾಗೂ ಮುಖಂಡರುಇದ್ದರು.
ಯುವಕರಿಗೆಉದ್ಯೋಗಕಲ್ಪಿಸುವುದು, ಪ್ರತಿಕುಟುಂಬದ ಮಹಿಳೆಯರಿಗೆ ಸ್ವಯುದ್ಯೋಗದ ಅವಕಾಶ, ಮನೆಯುಲ್ಲದಎಲ್ಲ ಕುಟುಂಬಗಳಿಗೂ ಮನೆ ನಿರ್ಮಿಸುವುದು ಸೇರಿದಂತೆಐದು ಯೋಜನೆಗಳನ್ನು ಹಾಕಿಕೊಂಡಿದ್ದು, ಐದು ಯೋಜನೆಗಳು ಐದು ವರ್ಷದಲ್ಲಿ ಪೂರ್ಣಗೊಳಿಸದಿದ್ದರೆ ನಾನು ರಾಜಕೀಯದಿಂದ ನಿವೃತ್ತ ಹೊಂದುವುದು ಮಾತ್ರವಲ್ಲ. ರಾಜ್ಯದಲ್ಲಿಜೆಡಿಎಸ್ ಪಕ್ಷವನ್ನು ವಿಸರ್ಜಿಸುವೆ. -ಎಚ್.ಡಿ. ಕುಮಾರಸ್ವಾಮಿ
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ…
ಕಲಬುರಗಿ: ವಿದ್ಯಾರ್ಥಿನಿಯರ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣ, ಶಿಕ್ಷಣವೆಂದರೆ ಕೇವಲ ಆನಲೈನ ಮಾಹಿತಿಯಲ್ಲ, ಪುಸ್ತಕದ ಜ್ಞಾನವೂ ಅಲ್ಲ, ವಿದ್ಯಾರ್ಥಿನಿಯರ ಬೌದ್ಧಿಕ, ಮಾನಸಿಕ,…
ಶಹಾಬಾದ: ನಗರದ ಶಿವಯೋಗಿಸ್ವಾಮಿ ಪ್ರೌಢಶಾಲೆಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗದ ವತಿಯಿಂದ ಶುಕ್ರವಾರ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಜನ್ಮ…