ಬಿಸಿ ಬಿಸಿ ಸುದ್ದಿ

ಮನುಸಂಸ್ಕೃತಿ ಹೇರುತ್ತಿರುವ ಸರಕಾರದ ವಿರುದ್ಧ ಹೋರಾಡಬೇಕಿದೆ: ಮರಿಯಂ ಧವಳೆ

ಕಲಬುರಗಿ : ಮನುವಾದಿ ಸರ್ಕಾರ ಮಹಿಳಾ ಧ್ವನಿಯನ್ನು ಕುಗ್ಗಿಸುತ್ತಿದೆ, ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆಗಳು ನಡೆಯುತ್ತಲೆ ಇವೆ, ಮನುಸ್ಮೃತಿಯನ್ನು ಒಪ್ಪಕೊಳ್ಳುವಂತೆ ಮಹಿಳೆಯರ ಮೇಲೆ ಒತ್ತಡ ಹೆರಲಾಗುತ್ತಿದೆ. ಇದನ್ನು ನಾವೆಲ್ಲ ತಡೆಯಬೇಕಿದೆ. ಮಹಿಳಾ ಸಮಾನತೆಯತ್ತ ಹೋರಾಟವನ್ನು ರೂಪಿಸಬೇಕಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮರಿಯಂ ಧವಳೆ ಕರೆ ನೀಡಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 11 ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ದೇಶದ ಜನರು ಕರೋನಾಕ್ಕಿಂತೂ ಹೆಚ್ಚು ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ ತತ್ತರಿಸಿ ಹೋಗಿದ್ದಾರು, ಈಗ ಬೆಲೆ ಏರಿಕೆಯಿಂದಾಗಿ ಬಡವರ ಬದುಕು ಬಿದಿಗೆ ಬಂದಿದೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಮೋದಿ ಸರ್ಕಾರ ಗ್ಯಾಸ್ ಕೊಟ್ಟಿದೆ ಆದರೆ ಗ್ಯಾಸ್ ಬೆಲೆ ಮಾತ್ರ ಅವರ ಕೈಗೆ ಏಟಕುವುದಿಲ್ಲ.

ಮಕ್ಕಳು ಶಿಕ್ಷಣದಿಂದ ವಂಚಿತ್ತಾಗಿದ್ದಾರೆ, ದೇಶದ ಸಂಪತ್ತು ಇಂದು ಖಾಸಗೀಕರಣವಾಗಿದೆ. ರೈಲು,ಆಸ್ಪತ್ರೆ, ವಿದ್ಯುತ್, ಕುಡಿಯುವ ನೀರು ಎಲ್ಲವನ್ನು ಖಾಸಗೀಕರಣ ಮಾಡಿ ನಾವು ಪ್ರಶ್ನೆ ಮಾಡದಂತೆ ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಜನರನ್ನು ಒಡೆಯುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಮಾಡಿ ಕೊಡುವುದು ಬೇಡ ನಾವೆಲ್ಲರೂ ಸಂಘಟನೆ ಕಟ್ಟೋಣಾ ಹೋರಾಟ ಮಾಡೋಣಾ ದೇಶ ನಡೆಯುತ್ತಿರುವದು ನಮ್ಮ‌ ಟ್ಯಾಕ್ಸ್ ದುಡ್ಡಿನಿಂದ, ದೇಶದ ಸಂಪತ್ತು ನಮ್ಮದು ನಮಗೆ ಇದರ ಮೇಲೆ ಹಕ್ಕಿದೆ. ಅದನ್ನು ಪಡೆಯುವುದಕ್ಕಾಗಿ ಹೋರಾಟ ಬಲಗೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ ವಹಿಸಿದ್ದರು,  ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ, ಐಡ್ವಾ ರಾಷ್ಟ್ರ ನಾಯಕಿ ಯು ವಾಸಕಿ, ಕೆ. ನೀಲಾ ಸೇರಿದಂತೆ ಅನೇಕರಿದ್ದರು.  ಪದ್ಮಿನಿ ಕಿರುಣಗಿ ನಿರೂಸಿದರೆ ಡಾ. ಕನಿಜ್ ಫಾತಿಮಾ ಬೀಬೀ ರಜಾ ಮಹಿಳಾ ಪದವಿ ಮಹಾವಿದ್ಯಾಲಯ ಕಲಬುರಗಿ ಇವರು ಸ್ವಾಗತಿಸಿದರು. ಸುನೀತಾ ಮಂಡ್ಯ ವಂದಿಸಿದರು.‌

ಅಗಸ್ಟ್ 1 ರಿಂದ 3 ರ ವರೆಗೆ ಬಿಸಿಲ ನಾಡಿನ ಕಲಬುರಗಿಯ ಶ್ರೀ ಗುರು ವಿದ್ಯಾಪೀಠ ಖಣದಾಳ ನಲ್ಲಿ ನಡೆಯುತ್ತದೆ. ಜನವಾದಿ ಸಂಘಟನೆಯು 41 ವರ್ಷ ಪೊರೈಸಿದ ಪ್ರಯುಕ್ತ 41 ಜನ ಯುವತಿಯರು ಮಹಿಳಾ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಮೂರು ದಿನಗಳ ಕಾಲ ಮಹಿಳೆಯ ಹಕ್ಕುಗಳ ಕುರಿತು ಹಾಗೂ ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ. ಕೊನೆಯ ದಿನ ನೂತನ ಸಮಿತಿ ಆಯ್ಕೆಯಾಗಲಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago