ಬಿಸಿ ಬಿಸಿ ಸುದ್ದಿ

ಋಗ್ವೇದ ಉಪಾಕರ್ಮ ಸಂಭ್ರಮ- ಯಜ್ಞೋಪವೀತ ಧರಿಸಿದ ವಿಪ್ರರು

ಕಲಬುರಗಿ :ಇಲ್ಲಿನ ರಾಮ ಮಂದಿರ ರಿಂಗ್ ರಸ್ತೆಯ ರವೀಂದ್ರನಾಥ್ ಟ್ಯಾಗೋರ್ ನಗರದಲ್ಲಿರುವ ಮಾಣಿಕರಾವ ಕುಲಕರ್ಣಿಯವರ ಮನೆಯಲ್ಲಿ ಮಂಗಳವಾರ ಋಗ್ವೇದೀಯ ನಿತ್ಯ ನೂತನ ಉಪಾಕರ್ಮ ಹಾಗೂ ಯಜ್ಞೋಪವೀತ ಧಾರಣೆ ಸಮಾರಂಭ, ಅದರ ನಿಮಿತ್ಯದ ಹೋಮ- ಹವನಾದಿಗಳು ಸಾಂಗೋಪಾಂಗವಾಗಿ ನಡೆದವು.

ವಿಶ್ವ ಮಹಾ ಪರಿಷತ್ ಅಡಿಯಲ್ಲಿ ಹಂಸ ನಾಮಕ ಪಾರಾಣ ಸಂಘದ ವತಿಯಿಂದ ನಡೆದ ಸಮಾರಂಭದಲ್ಲಿ ಪಂ. ಸಮೀರಾಚಾರ್ಯ ಹೋಳಗಿಯವರು ಹಾಜರಿದ್ದು ಹೋಮ- ಹವನ, ಸಂಕಲ್ಪಾದಿಗಳನ್ನು ನೆರವೇರಿಸುತ್ತ ನೂತನ ಯಜ್ಞೋಪವೀತ ಧಾರಣೆ ವಿಧಿ ವಿಧಾನ ನೆರವೇರಿಸಿದರು. ಯಜ್ಞೋಪವೀತ ಧಾರಣೆಯ ಈ ಸಂಭ್ರಮದ ಉಪಾಕರ್ಮ ಸಮಾರಂಭ ಹಾಗೂ ಹೋಮ- ಹವನದ ಪ್ರಕ್ರಿಯೆಗಳಲ್ಲಿ ಬಡಾವಣೆಯ ವಿಪ್ರ ಬಾಂಧವರು ಪಾಲ್ಗೊಂಡಿದ್ದರು.

ಹಂಸನಾಮಕ ಪಾರಾಯಣ ಸಂಘದ ಅಧ್ಯಕ್ಷ ಪದ್ಮನಾಭಾಚಾರ್ಯ ಜೋಷಿ, ಆನಂದಾಚಾರ್ಯ, ರಾಜು ಕುಲಕರ್ಣಿ, ಮನೋಹರ ಕುಲಕರ್ಣಿ, ಶೇಷಮೂರ್ತಿ ಅವಧಾನಿ, ಸುರೇಶರಾವ್ ಹರವಾಳ ಸೇರಿದಂತೆ ಅನೇಕ ಮಹನೀಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಪದ್ಮನಾಭಾಚಾರ್ಯ ಜೋಷಿಯವರು ಉಪಾಕರ್ಮಕ್ಕೆ ಸ್ಥಲಾವಕಾಶ ಮಾಡಿಕೊಟ್ಟು ಸಕಲ ಸವಲತ್ತುಗಳನ್ನು ಒದಗಿಸಿದ್ತಂಹ ಮಾಣಿಕರಾವ್ ಅವರಿಗೂ, ಪಂಚಿಡತಾರದ ಸಮೀರಾಚಾರ್ಯ ಹೋಳಗಿಯವರಿಗೂ ಧನ್ಯವಾದ ಅರ್ಪಿಸಿದರು.

ಇದೇ ಆ. ೪ ರ ಗುರುವಾರದಿಂದ ಆರ್ಟಿ ನಗರದಲ್ಲಿರುವ ಮಾಣಿಕರಾವ್ ಕುಲಕಣಿರ್ಯವರ ಪದ್ಮಾವತಿ ನಿವಾಸದಲ್ಲಿ ಮಳಖೇಡ ಉತ್ತರಾದಿ ಮಠದ ವ್ಯವಸ್ಥಾಪಕರು ಹಾಗೂ ವಿದ್ವಾಂಸರು ಆದಂತಹ ಪಂ. ವೆಂಕಣ್ಣಾಚಾರ್ಯ ಪೂಜಾರಿಯವರಿಂದ ಒಂದು ವಾರಕಾಲ ಭಾಗವತ ಸಪ್ತಾಹ ನಡೆಯಲಿದೆ.

ಆ. ೪ ರಿಂದ ಆ. ೧೦ ರ ವರೆಗೂ ಪ್ರತಿನಿತ್ಯ ಸಂಜೆ ೫. ೩೦ ಗಂಟೆಯಿಂದ ೭ ಗಂಟೆಯವರೆಗೆ ಆಚಾರ್ಯರು ಭಾಗವತ ಹೇಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರಾವಣ ಮಾಸದ ಪುಣ್ಯ ಪರ್ವ ಕಾದಲಲ್ಲಿ ಬಾಗವತ ಶ್ರವಣದಲ್ಲಿ ಪಾಲ್ಗೊಂಡು ಪುನೀತರಾಗಬೇಕು, ಆ. ೧೦ ರಂದು ಭಾಗವತ ಮಹಾ ಮಂಗಳ ಮಹ್ಸೋವ ನೆರವೇರಲಿದ್ದು ಈ ಸಮಾರಂಭದಲ್ಲಿಯೂ ಸರ್ವರು ಪಾಲ್ಗೊಳ್ಳುವಂತೆ ಮಾಣಿಕರಾವ್ ಕುಲಕರ್ಣಿ ಕೋರಿದ್ದಾರೆ.

ಕಲಬುರಗಿಯಲ್ಲಿರುವ ಆರ್ಟಿ ನಗರದ ಮಾಣಿಕರಾವ ಕುಲಕರ್ಣಿಯಲರ ಪದ್ಮಾವತಿ ನಿಲಯದಲ್ಲಿ ಮಂಗಳವಾರ ನಡೆದ ಋಗೇವೇದೀಯ ಉಪಾಕರ್ಮದಲ್ಲಿ ವಿಪ್ರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನೂತನ ಯಜ್ಞೋಪವೀತ ಧಾರಣ ಮಾಡಿದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

57 mins ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

12 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

23 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

23 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago