ಕಲಬುರಗಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯಉಪಾಧ್ಯಕ್ಷರು, ಕನ್ನಡ ನಾಡು ಲೇಖಕರ ಮತ್ತುಓದುಗರ ಸಹಕಾರ ಸಂಘದ ಅಧ್ಯಕ್ಷರು ಆಗಿರುವ ಅಪ್ಪಾರಾವ ಅಕ್ಕೋಣಿಯವರಿಗೆ ೮೦ ವರ್ಷಗಳು ತುಂಬಿದ ಶುಭ ಸಂದರ್ಭದಲ್ಲಿ ಅವರ ಸ್ನೇಹ ಹಾಗೂ ಅಭಿಮಾನಿ ಬಳಗ “ಅವಿಶ್ರಾಂತ” ಅಭಿನಂದನ ಸಂಪುಟ ಲೋಕಾರ್ಪಣೆ ಮತ್ತು ದಾಂಪತ್ಯ ಜೀವನದ ಶಷ್ಟಬ್ದಿ ಸಮಾರಂಭವನ್ನು ೭- ೮ -೨೦೨೨ ರಂದುರವಿವಾರ ಬೆಳಿಗ್ಗೆ ೧೦.೩೦ ಕ್ಕೆ ಶ್ರೀ ವಿರೇಂದ್ರ ಪಾಟೀಲ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ಡಾ.ಬಸವಲಿಂಗ ಪಟ್ಟದೇವರು, ಶ್ರೀಶೈಲ ಸಾರಂಗ ಮಠದ ಪೂಜ್ಯಶ್ರೀ ಜಗದ್ಗುರುಡಾ. ಸಾರಂಗದರ ದೇಶಿ ಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಹಿರಿಯ ಸಾಹಿತಿಗಳು, ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪಅವರು” ಅವಿಶ್ರಾಂತ” ಸಂಪುಟ ಲೋಕಾರ್ಪಣೆಗೊಳಿಸುತ್ತಿದ್ದು, ಅಪ್ಪಾರಾವಅಕ್ಕೋಣೆಯವರು ರಚಿಸಿರುವ” ಹುತಾತ್ಮಧನಶೆಟ್ಟಿ ಮಲ್ಲಪ್ಪ” ಕೃತಿಯನ್ನುಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಡಾ.ದಯಾನಂದಅಗಸರ ಬಿಡುಗಡೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಂ.ವೈ.ಪಾಟೀಲ, ಭಾರತೀಯರೆಡ್‌ಕ್ರಾಸ್ ಸಂಸ್ಥೆ ಕರ್ನಾಟಕರಾಜ್ಯ ಶಾಖೆಯಚೇರ್ಮನರಾದ ವಿಜಯಕುಮಾರ ಪಾಟೀಲ ಹಾಗೂ ಸಾರ್ವಜನಿಕಗ್ರಂಥಾಲಯಇಲಾಖೆಯ ನಿರ್ದೇಶಕರಾದಡಾ.ಸತೀಶಕುಮಾರ ಹೊಸಮನಿ ಭಾಗವಹಿಸಲಿದ್ದಾರೆ.
ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವಕುಲಕರ್ಣಿಅಭಿನಂದನ ನುಡಿಗಳನ್ನು ಆಡಲಿದ್ದಾರೆ.ಅಧ್ಯಕ್ಷತೆಯನ್ನು ಬಸವರಾಜ ಮತ್ತಿಮುಡ ವಹಿಸುತ್ತಿದ್ದು, ಅಭಿನಂದನ ಸಮಿತಿಯಅಧ್ಯಕ್ಷ, ನಿವೃತ್ತ ಪ್ರಾಚಾರ್ಯರಾದ ಪ್ರೊ. ಕೆ.ವಿಶ್ವನಾಥ ಹಾಗೂ ಕಾರ್ಯಧ್ಯಕ್ಷರಾದ ಶ್ರೀ ನಾಗಣ್ಣಗಣಜಲಖೇಡರವರು ಉಪಸ್ಥಿತರಿರುವರು.ಎಂದುಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…