ಕಲಬುರಗಿ: ಸಕ್ರಿಯ ವಿರೋಧ ಪಕ್ಷ ಹಾಗೂ ಸಕ್ರೀಯವಾಗಿ,ಸ್ವಾತಂತ್ರವಾಗಿ ಮತ್ತು ಸ್ವಾಭಿಮಾನಿಗಳಾಗಿ ಕೆಲಸ ಮಾಡುವ ಪತ್ರಕರ್ತರು ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ಆಶಯಗಳು ಗಟ್ಟಿಯಾಗಿ ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟ ಮಾಜಿ ಸಚಿವರಾದ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಯಾವುದೇ ಯೋಜನೆಗಳನ್ನಾಗಲೀ ನೀತಿಗಳನ್ನಾಗಲೀ ವಿಮರ್ಶಿಸಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಶಹಾಬಾದ್ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗಾಳಿ ಸುದ್ದಿ ತಡೆಯಲು ಹಾಗೂ ಸತ್ಯವನ್ನು ಜನರಿಗೆ ಬಿತ್ತರಿಸಲು ಪ್ರಾರಂಭವಾದ ಪತ್ರಿಕೋದ್ಯಮ ಇಂದು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದೆಯಾ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ಅವರು ಓಪಿಯನ್ ಮೇಕರ್ಸ್ ಹಾಗೂ ಇಮೇಜ್ ಬಿಲ್ಡರ್ಸ್ ಎರಡೂ ಕೆಲಸವನ್ನು ಮಾಧ್ಯಮಗಳು ಮಾಡುತ್ತಿರುವುದರಿಂದ ತುಂಬಾ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಮಾಧ್ಯಮಗಳ ತನಿಖಾ ವರದಿಗಳಿಂದಾಗಿ ಸರ್ಕಾರಗಳ ನೀತಿಗಳು ಬದಲಾಗಿವೆ, ರಾಜಕಾರಣಿಗಳು ರಾಜಿನಾಮೆ ನೀಡಿದ್ದಾರೆ, ಭ್ರಷ್ಟಾಚಾರ ಬಯಲಿಗೆ ಬಂದಿವೆ, ಇದು ಮಾಧ್ಯಮಗಳ ನಿಜವಾದ ಶಕ್ತಿ. ಇದನ್ನು ಸರಿಯಾಗಿ ಬಳಸಿಕೊಂಡು ತನಿಖಾ ಪತ್ರಿಕೋದ್ಯಮದ ಮೂಲಕ ಹಗರಣಗಳನ್ನು ಬಲಿಗೆಳೆಯುವ ಪ್ರಯತ್ನ ನಡೆಯುತ್ತಿಲ್ಲ ಎಂದು ಒತ್ತಿ ಹೇಳಿದ ಶಾಸಕರು ಮಹಿಳೆಯರ ಅಕ್ರಮ ಮಾರಾಟ ಬಯಲಿಗೆಳೆದ ತನಿಖಾ ವರದಿಯೇ ಈ ದೇಶದ ಕೊನೆಯ ತನಿಖಾ ವರದಿಯಾಗಿದೆ. ಆದರೂ ಕೂಡಾ ರಾಜ್ಯ ಪತ್ರಿಕೆಗಳು ಇತ್ತೀಚಿಗೆ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಇತಿಹಾಸಕ್ಕೆ ಅಪಚಾರ ಎಸಗಿದ ಸುದ್ದಿಯನ್ನು ಪತ್ರಿಕೆಗಳು ಸರಣಿ ರೂಪದಲ್ಲಿ ಪ್ರಕಟಿಸಿದ್ದವು. ಅದರಂತೆ ಪಿಎಸ್ ಐ ಅಕ್ರಮ ನೇಮಕಾತಿ ಕುರಿತಂತೆ ಪತ್ರಿಕೆಯೊಂದು ಸರಣಿ ವರದಿ ಪ್ರಕಟಿಸಿದೆ ಇದರಿಂದ ಸರ್ಕಾರ ಪಿಎಸ್ಐ ನೇಮಕಾತಿ ಹಗರಣದ ಕುರಿತು ತನಿಖೆ ನಡೆದು ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವಾರು ಪೊಲೀಸ್ ಅಧಿಕಾರಿಗಳು ಅರೆಸ್ಟ್ ಆಗಿದ್ದಾರೆ ಎಂದರು.
ಕ್ವಾಲಿಟಿ ಆಫ್ ಜರ್ನಲಿಸಂ ಕುರಿತಂತೆ ಮಾತನಾಡುವುದೇ ಬೇಡದಂತಾಗಿದೆ. ಮಾಧ್ಯಮಗಳೂ ಕೂಡಾ ಉದ್ಯಮಗಳಾಗಿ ಬದಲಾಗಿವೆ. ಜಾಹೀರಾತಿನ ಮೂಲಕ ಆರ್ಥಿಕತೆ ನಿರೀಕ್ಷೆ ಮಾಡುತ್ತಿರುವುದರಿಂದಾಗಿ ಕ್ವಾಲಿಟಿ ಕಡಿಮೆಯಾಗಿದೆ ಇದರಲ್ಲಿ ಜನಪ್ರತಿನಿಧಿಗಳ ಪಾಲು ಕೂಡಾ ಇದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗ ಕೂಡಾ ಸರಿ ದಾರಿಯಲ್ಲಿ ನಡೆಯಬೇಕು. ಕೆಲ ಪಾಲಸಿಗಳನ್ನು ನ್ಯಾಯಾಂಗ ಮಾಡುತ್ತಿದೆ. ಕಾರ್ಯಾಂಗ ಜೀ ಹೂಜೂರ್ ಕೆಲಸ ಮಾಡುತ್ತಿದೆ. ನ್ಯಾಯಾಂಗ ಕಾರ್ಯಾಂಗದ ಕೆಲಸ ಮಾಡುತ್ತಿದೆ. ಮಾಧ್ಯಮರಂಗ ನ್ಯಾಯಾಂಗದ ಕೆಲಸ ಮಾಡುತ್ತಿದೆ. ಇದರ ಬದಲು ಈ ಎಲ್ಲಾ ಅಂಗಗಳು ಪ್ರಭುದ್ದ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸದಸ್ಯರಾದ ಶಿವರಂಜನ್ ಸತ್ಯಂಪೇಟ ಮಾತನಾಡಿ ಪತ್ರಕರ್ತರು ಏಕತಾನತೆ ಸುದ್ದಿಗಳ ಕಡೆಗೆ ಗಮನ ಕೊಡದೆ ವಿಭಿನ್ನ ತರದ ಸುದ್ದಿಗಳ ಕಡೆಗೆ ಪತ್ರಕರ್ತರು ಗಮನ ಕೊಡಬೇಕು. ವೈಜ್ಞಾನಿಕತೆ ಹಾಗೂ ಬೇರೆ ಬೇರೆ ವಿಷಯಗಳ ಕುರಿತು ಅರಿವು ಬಿತ್ತರಿಸುವ ಸುದ್ದಿಗಳನ್ನು ಬರೆಯಬೇಕು ಎಂದರು. ಸಾರ್ವಜನಿಕ ಸಮಸ್ಯೆಗಳು, ಗ್ರಾಮೀಣ ಭಾಗದ ಸಮಸ್ಯೆಗಳ ಕಡೆಗೆ ಪತ್ರಕರ್ತರು ಗಮನ ಹರಿಸಬೇಕು ಎಂದು ಒತ್ತಿ ಹೇಳಿದ ಅವರು, ಹಳ್ಳಿಯ ಬದುಕು ಸುದ್ದಿಯಾಗಬೇಕು. ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಗ್ರಾಮೀಣ ಸೊಗಡಿನ ಸುದ್ದಿಗಳು ಮಾಯವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಬಾಬುರಾವ ಯಡ್ರಾಮಿ ಮಾತನಾಡಿ ಬದಲಾದ ವ್ಯವಸ್ಥೆಯಲ್ಲಿ ಮಾಧ್ಯಮದ ಧ್ಯೇಯ ಹಾಗೂ ಧೋರಣೆ ಕೂಡಾ ಬದಲಾಗಿದೆ. ಗ್ರಾಮೀಣ ಭಾಗದ ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಸ್ ಪಾಸ್ ನೀಡಲು ಸರ್ಕಾರ ಈ ಹಿಂದೆ ಹೇಳಿತ್ತು ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಹಾಗಾಗಿ ಶಾಸಕರಾದ ಪ್ರಿಯಾಂಕ್ ಖರ್ಗೆ ಹಾಗೂ ಬಸವರಾಜ ಮತ್ತಿಮೂಡ ಅವರು ಸರ್ಕಾರದ ಮೇಲೆ ಒತ್ತಡ ತಂದು ಬಸ್ ಪಾಸ್ ವಿತರಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಖರ್ಗೆ ಅವರು ಚಿತ್ತಾಪುರ ಪಟ್ಟಣದ ಪತ್ರಕರ್ತರಿಗಾಗಿ ನಿವೇಶನ ಒದಗಿಸಲು ಎರಡು ಎಕರೆ ಜಮೀನು ಕೊಟ್ಟಿದ್ದಾರೆ. ಹಾಗೆ ಪತ್ರಿಕಾ ಭವನ ನಿರ್ಮಾಣಕ್ಕಾಗಿ 40× 80 ಅಳತೆಯ ನಿವೇಶನ ಹಾಗೂ ರೂ 50 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಯಡ್ರಾಮಿ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕನಸು ಹೊಂದಿದೆ. ಇದೆಲ್ಲದರ ನಡುವೆ ಗ್ರಾಮ ದತ್ತು ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಯಾವುದಾದರೂ ಒಂದು ಹಳ್ಳಿಗೆ ಭೇಟಿ ನೀಡಿ ಆ ಊರಿನ ಸಮಸ್ಯೆಯನ್ನು ಆಡಳಿತ ನಡೆಸುವ ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡಲಾಗುವುದು ಎಂದರು.
ಇಲಿಯಾಸ್ ಭಾಗವಾನ ಮಾತನಾಡಿ ದೇಶದ ಅಭಿವೃದ್ದಿಯಲ್ಲಿ ಮಾಧ್ಯಮದ ಮಹತ್ವ ಪಾತ್ರವಿದೆ. ಮಾಧ್ಯಮದಿಂದಾಗಿ ಜನರಿಗೆ ಒಳ್ಳೆಯ ಹಾಗೂ ಕೆಟ್ಟ ಸುದ್ದಿಗಳು ಲಭ್ಯವಾಗಲಿವೆ. ದೇಶದಲ್ಲಿ ಕೆಟ್ಟ ಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದಲ್ಲಿ ನಮ್ಮ ದೇಶದ ಹೆಸರು ಕೆಡುತ್ತಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳು ಪಾತ್ರ ನಿರ್ಣಾಯಕವಾಗಿದೆ. ಹಿಂದೂಸ್ಥಾನದಲ್ಲಿ ಎಲ್ಲಾ ಧರ್ಮದ ಜಾತಿಯ ಜನರು ಜೀವಿಸುತ್ತಿದ್ದಾರೆ. ಹೊರಗಡೆ ಬಂದಾಗ ನಾವೆಲ್ಲ ಹಿಂದೂಸ್ಥಾನಿಯರೇ ಆಗಿದ್ದೇವೆ. ದೇಶದ ಜನರಿಗೆ ನಿಮ್ಮ ಮೂಲಕ ಈ ಸಂದೇಶ ಹೋಗಬೇಕು ಎಂದರು.
ಸಮಾರಂಭದಲ್ಲಿ ಗೋರಕನಾಥ ಪಟ್ಟಣ, ಇಲಿಯಾಸ್ ಭಾಗವಾನ, ಬಾಬುರಾವ ಯಡ್ರಾಮಿ, ಶಿವರಂಜನ ಸತ್ಯಂಪೇಟ, ಭವಾನಿಸಿಂಗ್ ಠಾಕೂರು, ಸುರೇಶ್ ವರ್ಮಾ, ಶಿವಾನಂದ ಪಾಟೀಲ, ಅಣವೀರ, ಡಾ ರಷೀದ್ ಮರ್ಚಂಟ್,ಡಾ ರವಿ ಚವ್ಹಾಣ್, ಕನಕಪ್ಪ, ರಾಜ ಮಹಮ್ಮದ್, ಶಿವಕುಮಾರ ಇಂಗನಶೆಟ್ಟಿ, ವಿಶ್ವಾರಾಧ್ಯ ಬಿರಾಳ, ರಘುವೀರ್ ಸಿಂಗ ಠಾಕೂರು, ದೇವಿಂದ್ರಪ್ಪ ಅವಂಟಿ, ಸಿದ್ದುಗೌಡ ಅಫಜಲಪುರಕರ್, ಸಂಗಮನಾಥ ರೇವತಕರ್ ಸೇರಿದಂತೆ ಮತ್ತಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…