ಕರ್ನಾಟಕ ರಾಜ್ಯದ ಹೆಮ್ಮೆಯ ಮಠ ಭಾಲ್ಕಿಯ ಹಿರೇಮಠ ಸಂಸ್ಥಾನದ ನಡೆದಾಡುವ ದೇವರು ಎಂದೇ ಜನಮನದಲ್ಲಿ ನೆಲೆಸಿರುವ ಪೂಜ್ಯ ಶ್ರೀ ಮ.ಘ. ಚ. ಡಾ. ಚನ್ನಬಸವ ಪಟ್ಟದೇವರು ರವರ ಪರಿಶ್ರಮ ಹಾಗೂ ತಪಸ್ಸಿನ ಫಲವಾಗಿ ಬಸವಾದಿ ಶರಣರ ಕ್ರಾಂತಿಯ ಕಹಳೆಯನ್ನು ಮೊಳಗಿಸುತ್ತಿರುವ ಸಾಂಸ್ಕೃತಿಕ ಶ್ರೀಮಂತಿಕೆಯ ಮಠವೆಂದು ಪ್ರಸಿದ್ಧವಾಗಿದೆ.
ನಂತರ ಪೂಜ್ಯ ಶ್ರೀ ಮ. ಘ. ಚ. ಡಾ. ಬಸವಲಿಂಗ ಪಟ್ಟದೇವರು ರವರ ನೇತೃತ್ವದಲ್ಲಿ ಉನ್ನತಿಯ ಶಿಖರವನ್ನು ಏರಿರುವ ಶ್ರೀ ಮಠವು ಬಸವ ಭಕ್ತರ ಅಭಿಮಾನದ ತಾಣ , ನಿರ್ಗತಿಕ ಮಕ್ಕಳ ಮಮತೆಯ ಆಶ್ರಯಧಾಮ , ಕನ್ನಡದ ಮಠವೇಂದೆ ಹೆಸರಾದ ಐತಿಹಾಸಿಕ ಹಿನ್ನೆಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದ ಉತ್ತರಾಧಿಕಾರಿ ಯಾಗಿ ಸೌಭಾಗ್ಯ ಪಡೆದಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದೇವರನ್ನು ಕಂಡು ಬಸವ ಭಕ್ತರಲ್ಲಿ ಅತೀವ ಆನಂದವಾಗುತ್ತದೆ.
ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಕರ್ತವ್ಯ ಶಕ್ತಿಯ ಕ್ರಿಯಾಶೀಲ ಚೇತನ: ಅವರು ಅನುಭವದ ಖಣಿಯಾಗಿದ್ದು ಆಧ್ಯಾತ್ಮ ಮತ್ತು ಆಡಳಿತದ ಸಂಪೂರ್ಣ ಅನುಭವ ಹೊಂದಿದ್ದು ಈ ಸಮಾಜದ ಪುಣ್ಯವಾಗಿದೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಇವರು ಶ್ರೀ ಮಠದ ಪ್ರತಿಯೊಂದು ನೂತನ ಯೋಜನೆಗಳು ಪೂಜ್ಯ ಶ್ರೀ ಗುರುಬಸವ ಪಟ್ಟದೇವರ ಚಿಂತನದ ಫಲಗಳು. ಭೃಹದಾಕರವಾಗಿ ಬೆಳೆದು ನಿಂತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ , ಕರ್ನಾಟಕ , ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಬಸವಾದಿ ಶರಣರ ತತ್ವವನ್ನು ಮನೆಮನೆಗೆ ಮುಟ್ಟಿಸುವ ಕಾರ್ಯದಲ್ಲಿ ಗುರುಬಸವ ಪಟ್ಟದೇವರುಗಳ ಪಾತ್ರ ಅತ್ಯಂತ ಮಹತ್ವದ್ದು.
ದಾಸೋಹ ಮೂರ್ತಿಗಳಾದ ಪೂಜ್ಯರು ಶ್ರೀಮಠಕ್ಕೆ ಬಂದ ಭಕ್ತರಿಗೆ ತಾಯಿ ಸ್ವರೂಪಿಯಾಗಿ ನಿಂತು ಪ್ರಸಾದ ಮಾಡಿಸಿ ಅವರ ಯೋಗಕ್ಷೇಮವನ್ನು ವಿಚಾರಿಸುವಲ್ಲಿ ಭಕ್ತರ ಮನ ಪುಳಕಿತವಾಗುತ್ತದೆ.
ಅಂತಹ ವಿಶಿಷ್ಟ ಶ್ರೇಷ್ಠ ಮತ್ತು ಆಧ್ಯಾತ್ಮಿಕ ಚಿಂತನೆ ಯುಳ್ಳ ಕ್ರಿಯಾಶೀಲ ವ್ಯಕ್ತಿತ್ವವುಳ್ಳ ಅಪ್ಪಟ ಬಸವತತ್ವ ನಿಷ್ಠ ಪೂಜ್ಯರು ನಾಡಿನ ಸೌಭಾಗ್ಯ ವಾಗಿದ್ದರೆ. ನಯ ವಿನಯ ಸಂಪನ್ನರು ಶಿಸ್ತು ಸೌಜನ್ಯದ ಮೂರ್ತಿಗಳು ಗುರುಸೇವೆ ಯನ್ನು ತ್ರಿಕರಣ ಪೂರ್ವಕವಾಗಿ ಮಾಡುತ್ತಾ ಗುರುಕೃಪೆ ಗೆ ಪಾತ್ರರಾದವರು.
ಮೂಕನು ಮಾತನಾಡುತ್ತಾನೆ, ಹೇಳವನು ಪರ್ವತಾರೋಹಣ ಮಾಡುತ್ತಾನೆಂದು ಅನುಭಾವಿಗಳು ಹೇಳಿರುವುದನ್ನು ಕೇಳಿದ್ದೇವೆ. ಆದರೆ ಆ ಮಾತಿಗೆ ಪ್ರತ್ಯಕ್ಷ ನಿದರ್ಶನ ವಾದವರು ಪೂಜ್ಯ ಶ್ರೀ ಗುರುಬಸವ ಪಟ್ಟದೇವರು.
ಗುರುಕೃಪೆಯಿಂದಲೇ ಅವರು ಎಲ್ಲವನ್ನೂ ಸಾಧಿಸಿದ್ದಾರೆ. ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರ ಜ್ಞಾನ ಶಕ್ತಿಯೆ ಕ್ರಿಯಾಶಕ್ತಿಯಾಗಿ ಶ್ರೀಮಠದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ.
ಲೋಕ ಜ್ಞಾನ ವ್ಯವಹಾರ ಕೌಶಲ್ಯತೆ ಹೊಂದಿರುವ ಅವರು ಶ್ರೀಮಠದ ಭವಿಷ್ಯದ ಆಶಾಜ್ಯೋತಿಯಾಗಿದ್ದಾರೆ. ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ನಿರ್ಮಿಸಿದ ಭವ್ಯಭವನಕ್ಕೆ ಸುವರ್ಣ ಕಳಸವನ್ನು ಇಡುವ ಅತುಳ ಸಾಮರ್ಥ್ಯವನ್ನು ಹೊಂದಿದ್ದಾರೆ.
ಬೀದರ ಜಿಲ್ಲೆಯ ಔರಾದ ತಾಲೂಕಿನ ಚಟಣಾಳ ಗ್ರಾಮದ ಪ್ರತಿಷ್ಠಿತ ಮೂಲಗೆ ಪರಿವಾರದ ತಾಯಿ ಪುತಳಬಾಯಿ ತಂದೆ ಸುಭಾಷ ಮುಲಗೆರವರ ಸುಪುತ್ರನಾಗಿ ದಿನಾಂಕ 6-8-1982 ರಂದು ಜನಿಸಿದ ರಾಜಕುಮಾರ ( ಪೂಜ್ಯ ಶ್ರೀ ಗುರುಬಸವ ಪಟ್ಟದೇವರ ಪೂರ್ವಾಶ್ರಮದ ಹೆಸರು) ಒಂದರಿಂದ ಐದನೇ ತರಗತಿಯ ವರೆಗೆ ಬೀದರನ ಔರದದಲ್ಲಿ ಓದಿ, ಮುಂದೆ 1993ರಲ್ಲಿ
ಭಾಲ್ಕಿಯ ಸಂಸ್ಥಾನ ಮಠದ ಶ್ರೀ ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯದಲ್ಲಿ ಪ್ರವೇಶಪಡೆದು ಡಾ. ಚನ್ನಬಸವ ಪಟ್ಟದೇವರ ಜೀವಿತ ಕಾಲದಲ್ಲಿಯೇ ಅವರ ಗುರುಕಾರಣ್ಯದ ಪ್ರೀತಿಗೆ ಪಾತ್ರರಾಗಿದ್ದು ಅವರ ಬದುಕಿನ ಅವಿಸ್ಮರಣೀಯ ಕ್ಷಣಗಳು.
ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನದ ಎಲ್ಲಾ ಕಾರ್ಯಗಳಲ್ಲಿ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರ ದಿವ್ಯ ಮಾರ್ಗದರ್ಶನದಲ್ಲಿ 28 ವರ್ಷಗಳಿಂದ ನಿಷ್ಠೆಯಿಂದ ಸಕ್ರಿಯವಾಗಿ ಸೇವೆಸಲ್ಲಿಸಿದ್ದಾರೆ.
ಶ್ರೀಮಠಕ್ಕೆ ಮತ್ತು ಅಪಾರ ಶಿಷ್ಯವೃಂದಕ್ಕೆ ಇವರು ಬಹಳ ಬೇಕಾದವರಾಗಿ ಎಲ್ಲರ ಪ್ರೀತಿ ವಿಶ್ವಾಸ ಗೌರವ ಗಳಿಸಿದ್ದಾರೆ.
ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು 22 – 12- 2011 ರಂದು ಶ್ರೀಮಠದ ಭಕ್ತರ ಸದಿಚ್ಚೆಯಂತೆ ಪೂಜ್ಯ ಶ್ರೀ ಗುರುಬಸವ ಪಟ್ಟದೇವರನ್ನು ಉತ್ತರಾಧಿಕಾರಿ ಎಂದು ನೇಮಿಸಿದರು.
ದಿನಾಂಕ 22-4-2016ರಂದು ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಸ್ಥಿರ ಚರ
ಪಟ್ಟಾಧಿಕಾರ ಸಮಾರಂಭವನ್ನು ಬಹು ಅದ್ಧೂರಿಯಾಗಿ ಆಚರಿಸಲಾಯಿತು.
ಪೂಜ್ಯ ಶ್ರೀ ಗುರುಬಸವ ಪಟ್ಟದೇವರಿಗೆ ಇದು 41ನೇ ಹುಟ್ಟುಹಬ್ಬ , ಉತ್ತರಾಧಿಕಾರಿಯಾಗಿ ನೇಮಕಗೊಂಡು 12ವರ್ಷ , ಪಟ್ಟಾಧಿಕಾರಿಯಾಗಿ ಇವರಿಗೆ 6 ವರ್ಷ ಗತಿಸಿವೆ. ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರ ಹೆಜ್ಜೆಯಲ್ಲಿ ಹೆಜ್ಜೆಯನ್ನು ಇಡುತ್ತಾ ಗುರುವಿಗೆ ಶಿಷ್ಯರಾಗಿ ನಡೆದುಕೊಂಡು ಬಂದಿದ್ದಾರೆ.
ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದೇವರಿಗೆ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ಇವರಿಗೆ ಗುರುಬಸವ ಪಟ್ಟದೇವರು ಎಲ್ಲಾ ಕಾರ್ಯಗಳನ್ನು ಭಕ್ತಿ , ಶ್ರದ್ಧೆಯಿಂದ ಮುಂಜಾನೆ 5ಗಂಟೆಯಿಂದ ರಾತ್ರಿ 11ಗಂಟೆಯವರಗೆ ನಿರಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಭಕ್ತರ ದುರ್ಗುಣ , ದುಶ್ಚಟಗಳ ನಿರ್ಮೂಲನೆಗಾಗಿ ಪಣತೊಟ್ಟು ಭಿಕ್ಷೇಬೇಡುತ್ತ ಶ್ರೀಮಠದ ವಿಧಾಯಕ ಕಾರ್ಯಗಳ ಜೊತೆಗೆ ಜೀವಪರ ಜನಪರ ಕೆಲಸಗಳಿಗೆ ತಮ್ಮನ್ನು ತಾವು ಕಾಯಾ – ವಾಚಾ – ಮನಸಾ ತ್ರಿಕರಣ ಶುದ್ಧಿಯಾಗಿ ಆಧ್ಯಾತ್ಮ ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳಿಗೆ ತೊಡಗಿಸಿಕೊಂಡಿದ್ದಾರೆ ಎಂದು ಶಾಂತಯ್ಯ ಸ್ವಾಮಿ ಹೇಳಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…