ಕಲಬುರಗಿ: ಸ್ವಾತಂತ್ರ್ಯ ಅಂದರೆ ಯಾವುದೇ ನಿರ್ಬಂಧನಕ್ಕೆ ಒಳಪಡದಿರುವುದು. ಸ್ವಾತಂತ್ರ್ಯ ಯಾರೂ ಕೊಡುವಂಥದ್ದಲ್ಲ. ಇದನ್ನು ಯಾರೂ ಕೊಡಲಿಕ್ಕೆ ಬರುವುದಿಲ್ಲ. ಅದು ನಮ್ಮೊಳಗೆ ಸೃಷ್ಟಿಯಾಗಬೇಕು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ವಚನೋತ್ಸವ ಸಮಿತಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ನಗರದ ಮಹಾತ್ಮ ಬಸವೇಶ್ವರ ಬಡಾವಣೆಯ ಗೌರೀಶ ಪಾಟೀಲ ಅವರ ಮನೆಯಂಗಳದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶ್ರಾವಣ ವಚನೋತ್ಸವ ಕಾರ್ಯಕ್ರಮದಲ್ಲಿ “ಶರಣರ ನಿಲುವಿನಲ್ಲಿ ಸ್ವಾತಂತ್ರ್ಯ” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ೧೨ನೇ ಶತಮಾನದ ಅನುಭವ ಮಂಟಪವನ್ನು ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದು ಕರೆಯಲಾಗುತ್ತಿದ್ದು, ಶರಣರು ಸ್ವತಂತ್ರ ಧೀರರಾರಗಿದ್ದರು ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ, ಸುಭಾಷ್ಚಂದ್ರ ಭೋಸ್, ನೆಹರೂ ಇನ್ನಿತರ ಸ್ವಾತಂತ್ರ್ಯ ಹೋರಾಟಗಾರರು ಭಾರತೀಯರನ್ನು ಬ್ರಿಟಿಷ್‌ರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿದರೆ, ಬಸವಾದಿ ಶರಣರು ಇಡೀ ಸಮಾಜವನ್ನು ಮಾನಸಿಕ ಗುಲಾಮಗಿರಿಯಿಂದ ಬಂಧಮುಕ್ತಗೊಳಿಸಿದರು. ಕಾಯಕ, ದಾಸೋಹ ಎಂಬ ವಿನೂತನ ಪರಿಕಲ್ಪನೆಗಳ ಮೂಲಕ ಅಂತರಂಗ-ಬಹಿರಂಗ ಶುದ್ಧಿಯ ಸ್ವಾವಲಂಬನೆ ಮತ್ತು ಸ್ವತಂತ್ರ ಬದುಕಿನ ನಿಜವಾದ ಸ್ವಾತಂತ್ರ್ಯ ಒದಗಿಸಿದರು ಎಂದು ವಿವರಿಸಿದರು. ಚನ್ನಬಸಪ್ಪ ಗರೂರ ಅಧ್ಯಕ್ಷತೆ ವಹಿಸಿದ್ದರು. ಸೋಮು ಕುಂಬಾರ ನಿರೂಪಿಸಿದರು. ಗೌರೀಶ ಪಾಟೀಲ ಸ್ವಾಗತಿಸಿ ವಂದಿಸಿದರು.
ಇದೇವೇಳೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ಶಾಮಲಾ ಶಿವಲಿಂಗಯ್ಯ ಮಠ ಅವರನ್ನು ಸತ್ಕರಿಸಲಾಯಿತು. ಬಸವರಾಜ ಶೆಟಗಾರ, ರುದ್ರಪ್ಪ ಪಾಟೀಲ, ವೀರಣ್ಣ ತೊರವಿ, ಬಿ.ಎಸ್. ಮಾಲಿಪಾಟೀಲ, ಶಿವಲೀಲಾ ಕಲಕುರ್ಗಿ, ಸೂರ್ಯಕಾಂತ ಹೊಸೂರು, ಡಾ. ಸಂಗಮೇಶ ಹಿರೇಮಠ, ಶೋಭಾ ಪಾಟೀಲ, ಶಾಂತಾ ಶಷಾಂಕ್ ಗಿರೆಗೋಳ್, ವಿಜಯಲಕ್ಷ್ಮೀ ಶಿವಶಂಕರಯ್ಯ ನೇಪೇರಿ, ಬಸವರಾಜ ಹತ್ತಿ ಇತರರಿದ್ದರು.
ಕಳೆದ ೧೯ ವರ್ಷಗಳಿಂದ ಶ್ರಾವಣಮಾಸದಲ್ಲಿ ಶರಣರ ವಚನಗಳ ಉಪನ್ಯಾಸ ಮಾಲೆ ಕಾರ್ಯಕ್ರಮ ನಡೆಸುತ್ತ ಬರಲಾಗಿದ್ದು, ಯುವಕರು ಈ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗಬೇಕು. ಆ ದಿಸೆಯಲ್ಲಿ ಯುವಕರು ಮುಂದಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. -ಸೋಮಣ್ಣ ಕೊಳಾರ, ವಚನೋತ್ಸವ ಸಮಿತಿ ಸಂಚಾಲಕ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…