ಬಿಸಿ ಬಿಸಿ ಸುದ್ದಿ

ಛಾಯಾಗ್ರಾಹಕರು ಸಮೃದ್ಧ ರಾಷ್ಟ್ರ ನಿರ್ಮಾಪಕರು: ಗಂಗಾಧರ ಬಡಿಗೇರ

ಕಲಬುರಗಿ: ಪರರ ಸಂತೋಷದಲಿೢ ತೃಪ್ತಿಪಡುವದರೊಂದಿಗೆ ಸಮೃದ್ಧ ರಾಷ್ಟ್ರ ಕಟ್ಟುವ ಕಾರ್ಯ ಛಾಯಾಗ್ರಾಹಕರು ಮಾಡುತಿದ್ದಾರೆ ಎಂದು ಚಿತ್ರನಟ,ನಿರ್ಮಾಪಕರಾದ  ಗಂಗಾಧರ ಬಡಿಗೇರ ಹೇಳಿದರು.

ನಗರದ  ಆಳಂದ ರಸ್ತೆಯಲ್ಲಿರುವ  ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಆವರಣದಲ್ಲಿ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ವತಿಯಿಂದ ಆಯೋಜಿಸಲಾಗಿರುವ “ವಿಶ್ವ ಛಾಯಾಗ್ರಾಹಕರ ದಿನಾಚರಣೆ” ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಒಂದು ಚಿತ್ರ ಸಾವಿರ ಶಬ್ದಗಳಿಗೆ ಸಮಾನವಾಗುತ್ತದೆ ನಿಜ ಆ ಸತ್ಯ ಘಟನೆಯ  ಚಿತ್ರ ತೆಗೆಯಬೇಕಾದರೆ ಪತ್ರಿಕಾ  ಛಾಯಾಗ್ರಾಹಕರ ಮೇಲೆ ಅನೇಕ ಬಾರಿ ಹಲ್ಲೆಯಾಗಿರುವ ಸಂದರ್ಭ ನೋಡಿದ್ದೇವೆ.

ತಮ್ಮ ಜೀವನವನ್ನೇ ಪಣಕ್ಕಿಟ್ಟು ಸತ್ಯದ ಘಟನೆ ಮತ್ತು ನೈಜವಾದ ಸಂದರ್ಭ ಸಮಾಜದ ಮುಂದೆ ಇಡುತ್ತಿರುವ ಕಾರ್ಯ ಶ್ಲಾಘನಿಯ. ಛಾಯಾ ಗ್ರಾಹಕರಿಂದ ಸಂವಿಧಾನದ ನಾಲ್ಕನೇಯ ಅಂಗವಾದ ಪತ್ರಿಕಾ ರಂಗದ ಬೆಲೆಯನ್ನು ಇನ್ನೂ ಹೆಚ್ಚಿಸಿಕೊಂಡಿದೆ ಎಂದು ಮಾರ್ಮಿಕವಾಗಿ ನುಡಿದರು.ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಡಾ. ಕೆ ಎಸ್ ಬಂದು ಮಾತನಾಡುತ್ತಾ ಕಷ್ಟಗಳನ್ನು ಮೌನವಾಗಿ ದಾಟಬೇಕು, ಪರಿಶ್ರಮ ಸದ್ದಿಲ್ಲದೆ ಸಾಗಬೇಕು, ಸಿಗುವ ಯಶಸ್ಸಿನ ಶಬ್ದ ಜಗತ್ತಿಗೆ ಕೇಳಿಸುವಷ್ಟು ಜೋರಾಗಿರಬೇಕು  ಎನ್ನುವ ಹಾಗೆ ಮೌನವಾಗಿಯೆ ಛಾಯಾಗ್ರಾಹಕರು ಮೋಡದಲ್ಲಿ ಹೊಳೆಯುತ್ತಿರುವ  ನಕ್ಷತ್ರದಂತೆ   ಸೇವೆಗೈಯುತ್ತಿದ್ದಾರೆ.

ಸಂಘವು ಇಂಥವರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಹೇಳಿದರು.ಸನ್ಮಾನ ಸ್ವೀಕರಿಸಿ ಪತ್ರಿಕಾ ಛಾಯಾಗ್ರಾಹಕರಾದ ರಾಜಕುಮಾರ ಉದನೂರ ಮಾತನಾಡುತ್ತಾ ಮೊಬೈಲಗಳು  ಹಲವಾರು ಛಾಯಾಗ್ರಾಹಕರ ವೃತ್ತಿಯನ್ನೆ ಕಸಿದುಕೊಂಡಿವೆ. ಹಲವಾರು ಛಾಯಾಗ್ರಾಹಕರು ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವಲ್ಲಿ ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿಯೂ ತಮ್ಮ ವೃತ್ತಿಯ ಘನತೆ ಹೆಚ್ಚಿಸುವ ಕಾರ್ಯ ಛಾಯಾಗ್ರಾಹಕರು  ಮಾಡುತ್ತಿದ್ದಾರೆ.

ಸರಕಾರ ಛಾಯಾಗ್ರಾಹಕರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಲೆಂದು ವಿನಂತಿಸಿಕೊಂಡರು. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ರಮೇಶ ಕೋರಿಶೆಟ್ಟಿ, ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಖ, ಶಿವರುದ್ರ  ಕಣ್ಣಿ,ಮಲಕಾರಿ ಪೂಜಾರಿ, ರಘುನಂದನ ಕುಲಕರ್ಣಿ, ಸಾಯಬಣ್ಣ ಬೆಳಾಮ, ರಾಜಶೇಖರ ಪಾಟೀಲ,ಶಿಕ್ಷಕರಾದ ಸಿದ್ದಣ್ಣ ಸಜ್ಜನ ,ಕುಮಾರಿ ಪಾಯಲ, ಲಕ್ಷ್ಮಿ ,ರವಿ ಔರಾದ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ತರಬೇತಿದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರಾದ ರಾಜಕುಮಾರ ಉದನೂರ,ರಾಜೂ ಕೋಷ್ಠಿ, ಶಿವಶರಣಪ್ಪ ಬೆನ್ನೂರ, ಅಮ್ಜದ್ ಅಲಿ,ಛಾಯಾಗ್ರಾಹಕರಾದ ಶಿವರಾಜ ರೇವೂರ, ಬಸವರಾಜ ಗಣಜಲಖೇಡ ಅವರಿಗೆ  ವಿಶೇಷವಾಗಿ ಗೌರವಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago