ಬಾಗಲಕೋಟೆ : ಕೊಡಗು ಜಿಲ್ಲೆಯಲ್ಲಿ ನೆರೆ ವೀಕ್ಷಣೆಗೆ ತೆರಳಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ವಾಹನಕ್ಕೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಹೊಡೆದದ್ದನ್ನು ಖಂಡಿಸಿ ಬಾಗಲಕೋಟ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವರಾದ ಹೆಚ್ ವಾಯ್ ಮೇಟಿ ಹಾಗೂ ಇವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತು.
ಬಸವೇಶ್ವರ ಸರ್ಕಲ್ ನಲ್ಲಿ ಪ್ರತಿಭಟನೆ ಸಭೆಯ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್ ವೈ ಮೇಟಿ ನಮ್ಮ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ವಿಧಾನಸಭೆ ವಿರೋಧ ಪಕ್ಷ ನಾಯಕರು ಸಿದ್ದರಾಮಯ್ಯನವರಗೆ ಮೊಟ್ಟೆ ಎಸೆದು ಅವಮಾನಿಸಿದ ಬಿಜೆಪಿ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕೂಡಲೆ ತಪಸ್ಥಿತರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಹಾಗೂ ಪೊಲೀಸ್ ಇಲಾಖೆ ಕೂಡ ಭದ್ರತೆ ನೀಡುವ ನಿಟ್ಟಿನಲ್ಲಿ ವಿಫಲವಾಗಿದೆ ಇಂಥ ಘಟನೆಗಳು ಮರಕಳಸದಂತೆ ನೋಡಿಕೊಳ್ಳಬೇಕು ಸಿದ್ದರಾಮಯ್ಯನವರಗೆ ಝೆಡ್ ಪ್ಲಸ್ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ,ರಾಜು ಎಸ್ ಮಣ್ಣಿಕೇರಿ ಜಿಲ್ಲಾಅಧ್ಯಕ್ಷ ಪರಿಶಿಷ್ಟ ವಿಭಾಗ, ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ್ ಹದ್ಲಿ, ಅಲ್ಪಸಂಖ್ಯಾತರ ವಿಭಾಗದ ಬ್ಲಾಕ್ ಅಧ್ಯಕ್ಷ ತೋಹಿದ್ ಅಲಿ ಸಂತಿ ಶಿರೂರು, ಶಬ್ಬೀರ ಎಂ ನದಾಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತರ ವಿಭಾಗ, ಮುಖಂಡ, ಆ ಎಮ್ ಬಳಬಟ್ಟಿ,ಮುಖಂಡ ಅನಿಲ್ ದಡ್ಡಿ, ಮುಖಂಡ ಶಶಿಕಾಂತ ಪೂಜಾರಿ, ಆನಂದ ಜಿಗಜಿನ್ನಿ, ಮುತ್ತು ಜೋಳದ, ರವೀಂದ್ರ ಕಲಬುರಗಿ, ಚಂದ್ರಶೇಖರ್ ರಾಠೋಡ್, ನಗರಸಭೆ ಸದಸ್ಯ ಚೆನ್ನವಿರ ಅಂಗಡಿ, ನಗರ ಸಭೆ ಸದಸ್ಯ ಖಾಜಾಸಾಬ್ ಹೊನ್ನಾಳ್, ನಗರ ಸಭೆ ಸದಸ್ಯ ಹಾಜಿಸಾಬ ದಂಡಿನ, ಅಜೀಜ್ ಬಾಳೆಕಾಯಿ, ಆನಂದ್ ಶಿಲ್ಪಿ ಜಿಲ್ಲಾ ಕಾರ್ಯದರ್ಶಿ, ಕುತುಬುದಿನ ಕಾಜಿ, ಪ್ರೇಮಾನಾಥ ಗರಸಂಗಿ, ತಿಪ್ಪಣ್ಣ ನೀಲನಾಯಕ್ , ಅಮೀನಸಾಬ ರಕ್ಕಸಗಿ, ಶಫಿಕ ದೊಡಕಟಿ, ಮಾಜಿ ನಗರಸಭೆ ಸದಸ್ಯ ಗೋವಿಂದ ಬಳ್ಳಾರಿ, ಬಲರಾಮ ಲಮಾಣಿ, ಮಂಜು ಪುರುತಗೇರಿ, ಬಾಗಲಕೋಟ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಎಸ್.ಎನ್ ರಾಂಪೂರ,ಕೆಪಿಸಿಸಿ ಸಾಮಾಜಿಕ ಜಾಲತಾಣದ ಗ್ರಾಮೀಣ ಘಟಕ ಅಧ್ಯಕ್ಷ ವಿಜಯಕುಮಾರ ನಾಯಕ, ಬಾಗಲಕೋಟ ನಗರ ಬ್ಲಾಕ್ ಅಧ್ಯಕ್ಷ ರಜಾಕ ಬೆಣೂರ, ಯುತ್ಸ ಅಧ್ಯಕ್ಷ ವಿಜಯಕುಮಾರ ಮುಚಖ೦ಡಿ, ಜಿಲ್ಲಾ ಕಾರ್ಯದರ್ಶಿ ಹನಮಂತ ರಾಕುಂಪಿ, ಕಾಂಗ್ರೆಸ್ ಜಿಲ್ಲಾ ಮಹಿಳಾ ಅಧ್ಯಕ್ಷೆ ರಕ್ಷಿತಾ ಈಟಿ, ಮಹಿಳಾ ಬ್ಲಾಕ್ ಅಧ್ಯಕ್ಷ ರೇಣುಕಾ ನ್ಯಾಮಗೌಡ, ಮಲ್ಲು ಲಂಬಾಣಿ, ಬಾಲರಾಜ್ ಚೌಹಾನ್,ಅಭಿಷೇಕ್ ತಳ್ಳಿಕೇರಿ, ಇಬ್ರಾಹಿಂ ಕಲಾದಗಿ, ಬಾಬು ಇಟಗಿ,ಸುನಿಲ್ ಕೊಡಬಾಗಿ, ಅಲ್ತಾಫ್ ಯಾದವಾಡ, ಹನುಮಂತ ಬಜಂತ್ರ, ಮಮ್ತಾಜ್ ಸುತಾರ್, ಮಂಜುಳಾ ಬೋಸಾರಿ, ಮಹಬೂಬಿ ತುರೆದ್, ಜಮೀಲಾ ಮನಿಯರ್, ಪಾರುಬಾಯಿ ಚವನ್, ಜೈಶ್ರೀ ಗುರುಗೋಳ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…