ಕಲಬುರಗಿ: ಬಿಜೆಪಿ ಸರಕಾರದ ದೂರದೃಷ್ಟಿ ಇಲ್ಲದ ಆರ್ಥಿಕ ನೀತಿಯಿಂದ ದೇಶದ ಜನರು ಬೆಲೆ ಏರಿಕೆಗೆ ತತ್ತರಸುತ್ತಿದ್ದಾರೆ. ದೇಶದ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗಿದೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಹೇಳಿದರು.
ಅವರು ಇಂದು ಫಿರದೋಸ್ ನಗರ ಕಾಲೋನಿಯಲ್ಲಿ ಫಿರದೋಸ್ ನಗರ ವೇಲ್ಫರ್ ಸೊಸೈಟಿಯಿಂದ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂವಿಧಾನ ಬಂದಲಾವಣೆ ಮಾಡುವ ಯೋಚನೆಯಿಂದ ಬಿಜೆಪಿ ಅಧಿಕಾರಕ್ಕಾಗಿ ಹಂಬಲಿಸುತ್ತಿದೆ. ಜನರು ಒಪ್ಪಿಕೊಂಡ ದೇಶದ ಸಂವಿಧಾನವನ್ನು ಕಸಿದುಕೊಳ್ಳಲು ಬಿಜೆಪಿ ಪ್ರತಿಹಂತದಲ್ಲಿ ಪ್ರಯತ್ನ ಪಡುತ್ತಿದ್ದಾರೆ. ಸಂವಿಧಾನ ಮತ್ತು ಜನರ ಹಕ್ಕುಗಳನ್ನು ರಕ್ಷಿಸಲು ಮುಂದಾಗುತ್ತಿರುವ ನಮ್ಮ ನಾಯಕರನ್ನು ಈ.ಡಿ ಮೂಲಕ ಹತ್ತಿಕ್ಕುವ ಕೆಲಸ ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಮಜಹರ್ ಆಲಮ್ ಖಾನ್ ಆರೋಪಿಸಿದರು.
ಚುನಾವಣೆಗೆ ಮುನ್ನ ಊಳಿದ ಅಭಿವೃದ್ಧಿ ಕೆಲಸಗಳನ್ನು ಫುರ್ಣಗೊಳ್ಳಿಸಲಾಗುತ್ತಿದೆ. ಎಲ್ಲ ಸಮಸ್ಯೆಗಳಿಗೆ ತ್ವರಿತ ನಿವಾರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಾಸಕಿ ಪುತ್ರ ಯುವ ಮುಖಂಡ ಫರಾಜು ಉಲ್ ಇಸ್ಲಾಂ ಅವರು ಹೇಳಿದರು.
ದಿವಂಗತ ಖಮರುಲ್ ಇಸ್ಲಾಂ ಅವರು ಪಾಲಿಸಿಕೊಂಡು ಬಂದಿರುವ ಶರಣಬಸವೇಶ್ವರ್ ಮತ್ತು ಬಂದಾ ನವಾಜ್ ಅವರ ತತ್ವ ಸಿದ್ಧಾಂತವನ್ನು ಕಾಪಾಡಲು ಶಾಸಕಿ ಕನೀಜ್ ಫಾತೀಮಾ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಅಬ್ದುಲ್ ಖದೀರ್ ಚೋಂಗೆ ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ, ಲಾಲ್ ಅಹ್ಮದ್ ಬೊಂಬೆ ಸೇಠ್ , ಅಜಮಲ್ ಗೋಲಾ, ಅಬ್ದಲ್ ಸಮದ್ ಕಮ್ಮು, ಕಾಶೀಫ್, ವಾಹೇದ್ ಅಲಿ ಫಾತೇಖಾನಿ, ಫಿರದೋಸ್ ನಗರ ವೇಲ್ಫರ್ ಸೊಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್, ಶೇಕ್ ಚಾಂದ್, ಅಜಹರ್ ಅಲಿ, ಸರಫರಾಜ್, ಸಾದೀಕ್, ಜೀಲಾನಿ, ಹಸನ್ ಅಲಿ ಸುಲ್ತಾನ್ಪುರಿ, ಸೌಕತ್ವಾಲಿ ಖಾನ್, ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…