ಕಲಬುರಗಿ: ಕಾಂಗ್ರೆಸ್ ಜನಜಾಗೃತಿ ಯಾತ್ರೆಗೆ ಕಲಬುರಗಿ ದಕ್ಷಿಣದಲ್ಲಿ ಭಾರಿ ಜನ ಬೆಂಬಲ ವ್ಯಕ್ತವಾಗಿದೆ. ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿ ಆರಂಭವಾಗಿರುವ 2 ನೇ ಹಂತದ ಪಾದಯಾತ್ರೆಯು ಮಂಗಳವಾರ ಗುಲ್ಲಾಬಾವಡಿ, ರಾಮ ಮಂದಿರ, ಕರುಣೇಶ್ವ ರ ನಗರ, ಇಂದಿರಾ ನಗರ, ಜೀವನ ಪ್ರಕಾಶ ಸಾಲೆ ಪ್ರದೇಶಲ್ಲೆಲ್ಲಾ ಸಂಚರಿಸಿತು.
ಕರುಣೇಶ್ವರ ನಗರದಲ್ಲಂತೂ ಸುಮಂಗಲೀಯರು ಸಾಲಾಗಿ ನಿಂತು ಕಲಶದೊಂದಿಗೆ ಅಲ್ಲಂಪ್ರಭು ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖರೆಲ್ಲರನ್ನು ಸ್ವಾಗತಿಸಿ ಬೆಂಬಲಿಸಿದರು. ಇದಲ್ಲದೆ ಪಾದಯಾತ್ರೆ ಸಾಗಿದ ಬಡಾವಣೆಗಳಲ್ಲೆಲ್ಲಾ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ತಮ್ಮ ಸ್ಪಂದನೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಸರ್ದಾರ್ ಪಟೇಲ್ ವೃತ್ತದಲ್ಲಿ ಪಟೇಲರಿಗೆ ಮಾಲೆ ಹಾಕುವ ಮೂಲಕ ಅಲ್ಲಂಪ್ರಭು ಪಾಟೀಲರು ಉಕ್ಕಿನ ಮನುಷ್ಯನಿಗೆ ಗೌರವ ಸಲ್ಲಿಸಿದರು. ಕೆಪಿಸಿಸಿ ಪ್ರ. ಕಾರ್ಯದರ್ಶಿ ಶರಣು ಮೋದಿ, ಸಂತೋಷ ಬಿಲಗುಂದಿ, ಡಾ. ಕಿರಣ ದೇಶಮುಖ, ವಾಣಿಶ್ರೀ ಸಗರಕರ್, ಲತಾ ರಾಠೋಡ, ಮಹೇಶ ಹೊಸೂರಕರ್, ಹುಲಿಗೆಪ್ಪ ಕನಕಗಿರಿ, ಹಮೀದ್, ಶೀನು ಲಾಖೆ, ದಿಗಂಬರ ಬೆಳಮಗಿ, ಸಂತೋಷ ಪಾಟೀಲ್ ದಣ್ಣೂರ, ಬ್ಲಾಕ್ ಕಾಂಗ್ರೆಸ್ ಅದ್ಕ್ಷರಾದ ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ ಸೇರಿದಂತೆ ಪಕ್ಷದ ಪ್ರಮುಖರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಂಪ್ರಭು ಪಾಟೀಲ್ ನೇತ್ವದ ಕಾಂಗ್ರೆಸ್ ಜನ ಜಾಗೃತಿಯ ಈ ಪಾದಯಾತ್ರೆ ಇನ್ನೂ ನಾಲ್ಕು ದಿನ ಮುಂದುವರಿಯಲಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…