ಕಲಬುರಗಿ: ಆಳಂದ ರಸ್ತೆಯಲ್ಲಿನ ಭೂಸಗಾ ಹತ್ತಿರ ಝೂರಿಚ್ ರೆಸಾರ್ಟ ಕ್ಲಬ್‌ನಲ್ಲಿ ಅಗಸ್ಟ್ ೨೬ ರಂದು ಬೆಳಿಗ್ಗೆ ೧೦. ಗಂಟೆಗೆ ಪರಮಪೂಜ್ಯ ಶ್ರೀ ಹವಾ ಮಲ್ಲಿನಾಥ್ ಮಹಾರಾಜ ನಿರಗುಡಿ ಅವರ ಸಮಸ್ತ ಭಕ್ತಾದಿಗಳು ಹಾಗೂ ಅರುಣಕುಮಾರ ಪಾಟೀಲ್ ಕೊಡಲ ಹಂಗರಗಾ ಅವರ ಅಭಿಮಾನಿ ಬಳಗದವರು, ಜೈ ಕರ್ನಾಟಕ ಸಂಘಟನೆ ಹಾಗೂ ವಿವಿಧ ಸಾಮಾಜ ಸೇವಾ ಸಂಘಟನೆಗಳು, ಜೈ ಭಾರತ ಮಾತಾ ಸೇವಾ ಸಮಿತಿ ನವದೆಹಲಿಯ ವತಿಯಿಂದ ಪೂಜ್ಯರ ೫೫ ನೇ ಜನ್ಮದಿನವನ್ನು ಆಚರಿಲಾಗುವುದು.
ಈ ಕಾರ್ಯಕ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ, ಪೂಜ್ಯರಿಂದ ಭಕ್ತಾದಿಗಳಿಗೆ ಸಸಿ ವಿತರಣೆ, ವಿವಿಧ ಕಲಾತಂಡದವರು, ಸಂಗೀತಗಾರರಿಂದ ದೇಶಭಕ್ತಿಯ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರಿಗೂ ಪೂಜ್ಯರ ದರ್ಶನದ ವ್ಯವಸ್ಥೆ ಮಾಡಲಾಗಿದೆ ಹಾಗೂ ಎಲ್ಲರಿಗೂ ಕೂಡ ಅಚ್ಚು ಕಟ್ಟಿನ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ.
ನಂತರ ಸಾಯಿಂಕಾಲ ೭.ಗಂಟೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಕೊಹಿನೂರ ವಾಡಿಯ ಶ್ರೀ ಭಾವಲಿಂಗ ದೆವಸ್ಥಾನ ಕೈಲಾಸ ಆಶ್ರಮದ ಕಮಿಟಿ ವತಿಯಿಂದ ಹಾಗೂ ಭಕ್ತಾದಿಗಳ ವತಿಯಿಂದ ಮತ್ತು ಜೈ ಭಾರತ್ ಮಾತಾ ಸೇವಾ ಸಮಿತಿ ವತಿಯಿಂದ ಪೂಜ್ಯರ ಜನ್ಮದಿನದ ಸಂಭ್ರಮಾಚರಣೆಯನ್ನು ಸುಕ್ಷೇತ್ರ ಕೊಹಿನೂರು ವಾಡಿ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸಲಿದ್ದಾರೆ. ಈ ಒಂದು ಜನ್ಮದಿನದ ಕಾರ್ಯಕ್ರಮಕ್ಕೆ ಸರ್ವರನ್ನು ಸಮಿತಿ ವತಿಯಿಂದ ಹಾರ್ದಿಕವಾದ ಸ್ವಾಗತ ಕೋರಲಾಗಿದೆ ಎಂದು ಜೈ ಭಾರತ್ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರರಾದ ವೈಜನಾಥ ಎಸ್ ಝಳಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…