ಬಿಸಿ ಬಿಸಿ ಸುದ್ದಿ

ಯೋಗಾಸನದಲ್ಲಿ ಗಿನ್ನಿಸ್‌ ದಾಖಲೆಗೆ ಅಕ್ಷರ್‌ ಯೋಗ ಪ್ರಯತ್ನ

  • ಯೋಗ ಆಸನಗಳಲ್ಲಿ ವಿಶ್ವ ದಾಖಲೆಗಳನ್ನು ಬರೆಯುವರಿಗಾಗಿ ‘ಬೆಂಗಳೂರು ಯೋಗೋತ್ಸವ’

ಬೆಂಗಳೂರು: ಅಕ್ಷರ ಯೋಗ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಯೋಗಾಸನದಲ್ಲಿ ಗಿನ್ನಿಸ್‌ ದಾಖಲೆ ನಿರ್ಮಿಸಲು ಸಿದ್ದತೆಗಳನ್ನು ಮಾಡಿಕೊಂಡಿದೆ. ಆಗಸ್ಟ್ 27, ಶನಿವಾರದಂದು ‘ಬೆಂಗಳೂರು ಯೋಗೋತ್ಸವ’ವನ್ನು ಆಯೋಜಿಸಿದ್ದು, ಯೋಗಾಸನಗಳಲ್ಲಿ ವಿಶ್ವದಾಖಲೆ ಬರೆಯಲು ಆಸಕ್ತಿಯುಳ್ಳವರು ಈ ಬೆಂಗಳೂರು ಯೋಗೋತ್ಸವದಲ್ಲಿ ಭಾಗವಹಿಸಬಹುದಾಗಿದೆ.

ಯಲಹಂಕ ಬಳಿಯಿರುವ ಪಡುಕೋಣೆ-ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ ನಲ್ಲಿ ನಡೆಯಲಿರುವ ಈ ಯೋಗ ಫೆಸ್ಟಿವಲ್‌ ನಲ್ಲಿ 250 ಯೋಗಪಟುಗಳು ಗಿನ್ನಿಸ್‌ ವಿಶ್ವ ದಾಖಲೆ ಸಾಧಿಸುವ ಪ್ರಯತ್ನ ಮಾಡಲಿದ್ದಾರೆ. ಹೆಚ್ಚಿನ ಜನರು ಧನುರಾಸನ ಮಾಡುವುದು (ಎರಡು ನಿಮಿಷಗಳ ಬೋ ಪೋಸ್) ಮತ್ತು ವಲ್ಡ್ ಬುಕ್ ಆಫ್ ರೆಕಾರ್ಡ್ ಗಾಗಿ 1 ನಿಮಿಷಕ್ಕೆ ಚಕ್ರಾಸನ/ಚಕ್ರ ಭಂಗಿ ಮಾಡಲಿದ್ದಾರೆ. ಹಿಮಾಲಯನ್ ಸಿದ್ಧರಾದ ಅಕ್ಷರ್ ಜಿ ಅವರ ನೇತೃತ್ವದಲ್ಲಿ ಯೋಗ ಆಸನಗಳು, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಪಠಣ, ಧ್ಯಾನ, ಮುದ್ರಾ ಅಭ್ಯಾಸ ದ ಜೊತೆಗೆ 90 ನಿಮಿಷಗಳ ನಿರಂತರ ಅಭ್ಯಾಸ ಇದರಲ್ಲಿ ವಿಶೇಷವಾಗಿರಲಿದೆ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

24 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago