ಕಲಬುರಗಿ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾಲದಲ್ಲಿ ದೇಶಕ್ಕಾಗಿ ಪಕ್ಷ ನೀಡಿರುವ ನೀಡಿರುವ ಕೊಡುಗೆಗಳನ್ನು ಜನತೆಗೆ ತಿಳಿಸಲು ಕಲಬುರಗಿ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ 2 ನೇ ಹಂತದ ಜನಜಾಗೃತಿ ಪಾದಯಾತ್ರೆ ಕಳೆದೊಂದು ವಾರದಿಂದ ಮುಂದುವರಿದಿದೆ.
ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ನೇತೃತ್ವದಲ್ಲಿನ ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಲಿಂಗರಾಜ ಕಣ್ಣಿ, ಲಿಂಗರಾಜ ತಾರಪೈಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ಜನತೆಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ವಿವರಿಸುತ್ತ ಹೊರಟಿದ್ದಾರೆ.
ಪಕ್ಷದ ಮುಖಂಡರಾದ ನೀಲಕಂಠ ಮೂಲಗೆ, ಗುಂಡಪ್ಪಾ ಲಂಡನಕರ್, ಲತಾ ರವಿ ರಾಠೋಡ್ ವಾಣಿಶ್ರೀ ಸಗರಕರ್, ಶೋಭಾ ಕಾಳೆ, ಅವಿನಾಶ್ ಭಾಸ್ಕರ ಪP್ಷÀದ ಹಿರಿಯ – ಕಿರಿಯ ಮುಖಂಡರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.
ಮಂಗಳವಾ ಪಾದಯಾತ್ರೆ ಪಾಣೆಗಾಂವ, ನಾಗನಳ್ಳಿ, ಕೋಟನೂರ್À, ಉದನೂರ್, ಹುಣÀಸಿಹಡಗಿಲ್, ಸುಲ್ತಾನಪುರ್, ನಾಗನಹಳ್ಳಿ ಗ್ರಾಮಗಳಲ್ಲಿ ಬಿರುಸಿನಿಂದ ನಡೆಯಿತು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಹೇಳುತ್ತಲೇ ಕಾಂಗ್ರೆಸ್ಸಿಗರು ತಮ್ಮ ಪಕ್ಷದ ಕೊಡುಗೆಗಳನ್ನು ಮೆಲಕು ಹಾಕಿ ಜನರ ಗಮನ ಸೆಳೆದರು.
ಕೊಟನೂರಲ್ಲಿ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯ್ತು. ಮುಖಂಡರಾದ ಮಹಾದೇವಪ್ಪ ಪಟೀಲ್, ಸಂತೋಷ ಪಾಟೀಲ್, ಜಗು ಸಿರಸಗಿ, ಸುನೀಲ ಗೌನಳ್ಳಿ, ಶ್ರೀಶೈಲ ಹೂಗಾರ್, ಚೇತನ ಸಾವಳಗಿ, ಅಂಬರೀಶ ಜಾನಿ, ಮಲ್ಲಿಕಾರ್ಜುನ ಗುಡೂರ್ ಇವರು ತಮ್ಮ ಅಭಿಮಾನಿಗಳೊಂದಿಗೆ ವಿವಿಧ ಪಕ್ಷಗಳನ್ನು ತೆರೆದು ಕಾಂಗ್ರೆಸ್ ಸೇರಿದರು. ಇವರೆಲ್ಲರಿಗೂ ಕಾಂಗ್ರೆಸ್ ಪಕ್ಷದ ಮುಖಂಡÀ, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲರು ಕಾಂಗ್ರೆಸ್ ಧ್ವಜ ನೀಡಿ, ಪಕ್ಷದ ತತ್ವ- ಸಿದ್ದಾಂತಗಳನ್ನು ತಿಳಿ ಹೇಳಿ ಬರಮಾಡಿಕೊಂಡರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…