ಸೇಡಂ ಶೈಕ್ಷಣಿಕ ಜಿಲ್ಲೆಯಲ್ಲಿ ಶಹಾಬಾದ ತಾಲೂಕಾವನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೆನೆ ಎಂದು ಕರೆ ಮಾಡಿ ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ- ಬಸವರಾಜ ಮತ್ತಿಮಡು ಶಾಸಕ.
ಶಹಾಬಾದ: ಸೇಡಂ ಶೈಕ್ಷಣಿಕ ಜಿಲ್ಲೆಯಲ್ಲಿ ಶಹಾಬಾದ ತಾಲೂಕಾವನ್ನು ಸೇರ್ಪಡೆ ಮಾಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ಶಹಾಬಾದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಾಡಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರೇವುನಾಯಕ ಬೆಳಮಗಿ, ಸೇಡಂ ಶೈಕ್ಷಣಿಕ ಜಿಲ್ಲೆಯಲ್ಲಿ ಶಹಾಬಾದ ತಾಲೂಕಾವನ್ನು ಸೇರ್ಪಡೆ ಮಾಡುತ್ತಿರುವುದು ಅವೈಜ್ಞಾನಿಕ.ಇದಕ್ಕೆ ಶಹಾಬಾದ ತಾಲೂಕಿನ ಎಲ್ಲಾ ಜನರಿಂದ ವಿರೋಧ ವ್ಯಕ್ತವಾಗಿದೆ. ಶಹಾಬಾದ ತಾಲೂಕಾದಿಂದ ಕಲಬುರಗಿ ಜಿಲ್ಲಾ ಕೇಂದ್ರ ಕೇವಲ ೨೫ ಕಿಮೀ ದೂರದಲ್ಲಿದೆ.ಆದರೆ ಸೇಡಂ ಸುಮಾರು ೭೦ ಕಿಮೀ ದೂರವಿದೆ.ಇದರಿಂದ ಸಾಕಷ್ಟು ಸಮಯ ಹಾಗೂ ಹಣ ಕೂಡ ವ್ಯಯವಾಗುತ್ತದೆ. ಆನರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಶಹಾಬಾದ ತಾಲೂಕಾವನ್ನು ಸೇಡಂ ಶೈಕ್ಷಣಿಕ ಜಿಲ್ಲೆಗೆ ಸೇರ್ಪಡೆ ಅಸಂಜಸವಾಗಿದೆ.ಅಲ್ಲದೇ ಜನಪ್ರತಿನಿಧಿಗಳಾದವರೂ ಜನರ ಸಮಸ್ಯೆಗಳಿಗೆ ಪರಿಹಾರ ಮಾಡುವುದು ಅವರ ಕರ್ತವ್ಯ.ಆದ್ದರಿಂದ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹಾಕಿ ಕಲಬುರಗಿ ಜಿಲ್ಲೆಯಲ್ಲಿಯೇ ಉಳಿಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಡಾ.ರಶೀದ್ ಮರ್ಚಂಟ ಮಾತನಾಡಿ, ಈಗಾಗಲೇ ಶಹಾಬಾದನ ಎರಡು ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕಲ್ಲು ಗಣಿ, ಪಾಲಿಷ್ ಮಶಿನ್ ವ್ಯಾಪಾರವೂ ಡೋಲಾನಮಯವಾಗಿದೆ.ತಾಲೂಕಾವಾಗಿ ಅನೇಕ ವರ್ಷಗಳು ಉರುಳಿದರೂ ಇಲ್ಲಿಯವರೆಗೆ ಯಾವುದೇ ಕಚೇರಿಗಳು ಬಂದಿಲ್ಲ. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಯುವಕರಿಗೆ ಉದ್ಯೋಗವಿಲ್ಲ.
ಈ ಬಗ್ಗೆ ಗಮನಹರಿಸುವುದನ್ನು ಬಿಟ್ಟು ಸೇಡಂ ಶೈಕ್ಷಣಿಕ ಜಿಲ್ಲೆಗೆ ಶಹಾಬಾದ ತಾಲೂಕಾವನ್ನು ಸೇರ್ಪಡೆ ಮಾಡುವುದಕ್ಕೆ ಮುಂದಾಗಿರುವುದು ದುರದೃಷ್ಟಕರ. ಸೇಡಂ ಶೈಕ್ಷಣಿಕ ಜಿಲ್ಲೆಯಾಗುವುದಕ್ಕೆ ನಮ್ಮ ವಿರೋಧವಿಲ್ಲ.ಆದರೆ ಶಹಾಬಾದನ್ನು ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ನಂತರ ಮನವಿ ಪತ್ರವನ್ನು ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಸಲ್ಲಿಸಿದರು.ಶಿವರಾಜ ಇಂಗಿನಶೆಟ್ಟಿ, ಮಹ್ಮದ್ ಉಬೆದುಲ್ಲಾ, ಕೃಷ್ಣಪ್ಪ ಕರಣಿಕ್, ಶರಣಗೌಡ ಪಾಟೀಲ ಗೋಳಾ,ಡಾ.ಜಹೀರ್,ಕನಕಪ್ಪ ದಂಡಗುಲಕರ್, ಅಜಿತ್‌ಕುಮಾರ ಪಾಟೀಲ, ಮೃತ್ಯುಂಜಯ್ ಹಿರೇಮಠ, ಅರುಣ ಪಟ್ಟಣಕರ್, ಭೀಮರಾವ ಸಾಳುಂಕೆ, ಡಾ.ಅಹ್ಮದ್ ಪಟೇಲ್,ರಾಜಮಹ್ಮದ್ ರಾಜಾ, ಫಜಲ್ ಪಟೇಲ್, ಡಾ.ಮಹೇಂದ್ರ ಕೋರಿ, ಬಸವರಾಜ ಮಯೂರ,ಶೇಖ ಬಾಬು ಉಸ್ಮಾನ,ಜಗನ್ನಾಥ.ಎಸ್.ಎಚ್,ಕಾಶಿನಾಥ ಭಾಸ್ಮೆ, ಭರತ್ ಧನ್ನಾ,ಕಿರಣ ಕೋರೆ,ರಾಘವೇಂದ್ರ.ಎಮ್.ಜಿ,ನವನಾಥ ಕುಸಾಳೆ,ವೆಂಕಟೇಶ ದಂಡಗುಲಕರ್,ಮೀರ ಅಲಿ ನಾಗೂರೆ,ಮಹ್ಮದ್ ಇಮ್ರಾನ್ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…