ಶಹಾಬಾದ: ಹೂಗಾರ ಸಮಾಜದವರು ಹೂವಿನ ಮನಸ್ಸು ಹೊಂದಿದವರು. ಹೂವು ಬಾಡುತ್ತದೆ, ಆದರೆ ಹೂಗಾರ ಸಮಾಜದವರ ಮನಸ್ಸು ಬಾಡದೆ, ಸಮಾಜವನ್ನು ಅರಳಿಸುವ ಕೆಲಸ ಮಾಡುತ್ತಿದೆ ಎಂದು ಭಂಕೂರ ಗ್ರಾಮದ ಮುಖಂಡ ಅಂಬರೀಷ ಹೂಗಾರ ಹೇಳಿದರು.
ಅವರು ಶನಿವಾರ ದೇವನತೆಗನೂರ ಗ್ರಾಮದಲ್ಲಿ ಹೂಗಾರ ಸಮಾಜದ ವತಿಯಿಂದ ಏರ್ಪಡಿಸಿದ್ದ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
12 ನೇ ಶತಮಾನದ ಶರಣ ಹೂಗಾರ ಮಾದಯ್ಯನವರು, ಕಾಯಕದಲ್ಲಿಮುಕ್ತಿ ಮಾರ್ಗವಿದೆ ಎಂದು ಜಗತ್ತಿಗೆ ಸಾರಿದ್ದಾರೆ. ಕಾಯಕ ಜೀವಿಯಾಗಿದ್ದ ಶರಣ ಮಾದಯ್ಯ ಯಾರ ಮನಸ್ಸಿಗೂ ನೋವು ಮಾಡಿದವರಲ್ಲಎಂದರು. ಹೂವಾಡಿಗ ಸಮುದಾಯದಲ್ಲಿ 28 ಉಪನಾಮಗಳಿವೆ. ಹೂಗಾರ ಸಮಾಜ ಚಿಕ್ಕದಲ್ಲ. ಎಲ್ಲ ಸಮುದಾಯಗಳಿಗಿಂತ ಉನ್ನತ ಸ್ಥಾನದಲ್ಲಿದೆ. ದೇವರ ತಲೆ ಮೇಲೆ ಕೈಯಿಟ್ಟು ಪೂಜೆ ಮಾಡುವ ಸಮುದಾಯ ನಮ್ಮದು. ಈ ಸಮಾಜ ದೊಡ್ಡ ಮನಸ್ಸು ಹೊಂದಿದೆ ಎಂದರು.
ದೇವನತೆಗನೂರ ಗ್ರಾಮದ ಹೂಗಾರ ಸಮಾಜದ ಅಧ್ಯಕ್ಷ ಕಾಶಿರಾಯ.ಈರಣ್ಣ. ಹೂಗಾರ ಮಾತನಾಡಿ, 12ನೇ ಶತಮಾನದಲಿ ಅಣ್ಣ ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿದ ಶರಣರೆಂದರೆ ಹೂಗಾರ ಮಾದಣ್ಣ.ತಮ್ಮ ಕಾಯಕದ ಮೂಲಕ ಶರಣರ ಪೂಜೆಗೆ ಬೇಕಾದ ಹೂ ಹಾಗೂ ಬಿಲ್ವಪತ್ರೆಯನ್ನು ಪೂರೈಸುತ್ತಿದ್ದರು. ಕಾಯಕವೇ ಕೈಲಾಸ ಎನ್ನುವ ತತ್ವವನ್ನು ಅನುಸರಿಸಿ, ಮೂಢನಂಬಿಕೆ, ಕಂದಾಚಾರಗಳನ್ನು ಸಮಾಜದಿಂದ ತೆಗೆದುಹಾಕುವಲ್ಲಿ ಅವಿರತವಾಗಿ ಶ್ರಮಿಸಿದವರು.ಅವರ ಹಾಕಿದ ದಾರಿಯಲ್ಲಿ ಇಂದು ಹೂಗಾರ ಸಮಾಜದ ಬಾಂಧವರು ಮುನ್ನಡೆಯಬೇಕಿದೆ.ಅಲ್ಲದೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಗ್ರಾಪಂ ಸದಸ್ಯ ಶಿವಾನಂದ ಮಕಾಶಿ, ಬಸವಕುಮಾರ ಮಕಾಶಿ, ಅರ್ಚಕ ನಾಗೇಂದ್ರ ಹೂಗಾರ, ಮಲ್ಲಿಕಾರ್ಜುನ ಪಾಟೀಲ, ಶವುಗೌಡ ಪಾಟೀಲ,ಹಣಮಂತರಾಯ ಶಂಕರವಾಡಿ, ಸರವೇಶ ಪಾಟೀಲ, ಕಾಶಿನಾಥ ಮಕಾಶಿ, ಲಿಂಗಣ್ಣ ಪಾಟೀಲ,ಶಿವಾನಂದ ಮಕಾಶಿ, ರವಿ ಹೂಗಾರ,ಜಗನ್ನಾಥ ಬಿರಾದಾರ, ಕಾಶೀನಾಥ ಬಿರಾದಾರ,ಬಸವರಾಜ ಮಕಾಶಿ,ಶಿವಕುಮಾರ ಪಾಟೀಲ,ಪರಮೇಶ ಪಾಟೀಲ, ಶಿವಯೋಗೆಪ್ಪಾ ಹೂಗಾರ ಸೇರಿದಂತೆ ಅನೇಕರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…